ಕರಾವಳಿಗರಿಗೆ ಸಂತಸ, ಮಡ್ಗಾಂವ್‌- ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ ಬದಲಾವಣೆ

By Kannadaprabha News  |  First Published Oct 15, 2023, 1:17 PM IST

ಮಡ್ಗಾಂವ್‌-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌(10107)ನ ವೇಳಾಪಟ್ಟಿಯನ್ನು ಪ್ರಯಾಣಿಕ ಸ್ನೇಹಿಯಾಗಿ ಪರಿಷ್ಕರಿಸಿ ತಕ್ಷಣದಿಂದಲೇ ಕೊಂಕಣ ರೈಲ್ವೆ ಅನುಷ್ಠಾನಿಸಿದೆ.


ಮಂಗಳೂರು (ಅ.15): ಮಡ್ಗಾಂವ್‌-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌(10107)ನ ವೇಳಾಪಟ್ಟಿಯನ್ನು ಪ್ರಯಾಣಿಕ ಸ್ನೇಹಿಯಾಗಿ ಪರಿಷ್ಕರಿಸಿ ತಕ್ಷಣದಿಂದಲೇ ಕೊಂಕಣ ರೈಲ್ವೆ ಅನುಷ್ಠಾನಿಸಿದೆ.

ಇದರಿಂದಾಗಿ ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ರೈಲಿನ ರೈಲಿನ ವೇಳಾಪಟ್ಟಿಯನ್ನು ಸಾಮಾನ್ಯ ಪ್ರಯಾಣಿಕ ವರ್ಗವನ್ನು ಗಮನದಲ್ಲಿರಿಸಿ ಪರಿಷ್ಕರಿಸುವಂತೆ ರೈಲ್ವೆ ಹೋರಾಟಗಾರರು ನಿರಂತರ ನಡೆಸುತ್ತಿದ್ದ ಹೋರಾಟಕ್ಕೆ ಸಚಿವಾಲಯ ಕೊನೆಗೂ ಸ್ಪಂದಿಸಿದೆ.

Latest Videos

undefined

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗಡಿ ಗುರುತು, ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್‌

ಪ್ರಸ್ತಾವಿತ ರೈಲು ವೇಳಾಪಟ್ಟಿ ಪರಿಷ್ಕರಿಸುವಂತೆ ಕೊಂಕಣ ರೈಲ್ವೆ ಕಳುಹಿಸಿದ ಪ್ರಸ್ತಾವನೆಗೆ ಕೇಂದ್ರ ಸಚಿವಾಲಯ ಅನುಮೋದನೆ ನೀಡಿದೆ. ಈ ಕುರಿತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಇಲ್ಲಿಯ ತನಕ ಈ ರೈಲು ಬೆಳಗ್ಗೆ 5.15ಕ್ಕೆ ಮಡ್ಗಾಂವ್‌ನಿಂದ ಹೊರಟು ಮಧ್ಯಾಹ್ನ 12.15ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಇನ್ನು ಈ ರೈಲು ಮಡ್ಗಾಂವ್‌ನಿಂದ ಮುಂಜಾನೆ 4 ಗಂಟೆಗೆ ಹೊರಟು ಸುರತ್ಕಲ್‌ಗೆ ಬೆಳಗ್ಗೆ 10 ಗಂಟೆಗೆ ತಲುಪಿ ಮಂಗಳೂರು ಸೆಂಟ್ರಲ್‌ಗೆ 11 ಗಂಟೆಗೆ ಮುನ್ನ ತಲುಪಲಿದೆ.

ಒಡಿಶಾ ರೈಲು ದುರಂತದ ಬಳಿಕ ಎಚ್ಚೆತ್ತ ಇಲಾಖೆ, ರೈಲು ಚಾಲಕರಿಗೆ ಹೊಸ ನಿಯಮ

ವಾಪಸ್ ಪ್ರಯಾಣ ಯಥಾಸ್ಥಿತಿ: ಮಡ್ಗಾಂವ್‌ನಿಂದ ಮಂಗಳೂರಿಗೆ ಪ್ರಯಾಣಿಸುವ ಸಮಯ ಮಾತ್ರ ಪರಿಷ್ಕರಣೆಯಾಗಿದೆ. ಮಂಗಳೂರಿನಿಂದ ಮಡ್ಗಾಂವ್‌ಗೆ ಸಂಜೆ ವಾಪಸ್ ತೆರಳುವ ಸಮಯ ಈ ಹಿಂದೆ ಇದ್ದಂತೆ ಸಂಜೆ 3.30ಕ್ಕೆ ಇದೆ. ಇದನ್ನು ಸಂಜೆ 5 ಗಂಟೆಗೆ ಬದಲಾಯಿಸಿದರೆ ರೈಲು ಮಡ್ಗಾಂವ್‌ ತಲುಪುವಾಗ ಮಧ್ಯರಾತ್ರಿ ಸುಮಾರು 12 ಗಂಟೆ ಆಗಬಹುದು. ನಿತ್ಯ ಪ್ರಯಾಣಿಕರು ಇಷ್ಟು ತಡವಾಗಿ ಪ್ರಯಾಣಿಸುವುದಿಲ್ಲ. ಅಲ್ಲದೆ ಸಂಜೆ ಮಂಗಳೂರಿನಿಂದ ಮಡ್ಗಾಂವ್‌ಕಡೆಗೆ ತೆರಳಲು ಇತರ ರೈಲು ಸೌಕರ್ಯವೂ ಇದೆ ಎನ್ನುವುದು ರೈಲ್ವೆ ಸಚಿವಾಲಯದ ಲೆಕ್ಕಾಚಾರ.

click me!