ಕರ್ನಾಟಕದಲ್ಲಿ ಕನ್ನಡ ಬಾರದವರ ಬಗ್ಗೆ ಸಮೀಕ್ಷೆ ಮಾಡಿ: ಮೈಸೂರು ದಸರಾ ಉದ್ಘಾಟಕ ಹಂಸಲೇಖ ಮನವಿ

Published : Oct 15, 2023, 12:01 PM ISTUpdated : Oct 15, 2023, 02:12 PM IST
ಕರ್ನಾಟಕದಲ್ಲಿ ಕನ್ನಡ ಬಾರದವರ ಬಗ್ಗೆ ಸಮೀಕ್ಷೆ ಮಾಡಿ: ಮೈಸೂರು ದಸರಾ ಉದ್ಘಾಟಕ ಹಂಸಲೇಖ ಮನವಿ

ಸಾರಾಂಶ

ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲಾ ಕನ್ನಡಿಗರು ಇವರಲ್ಲಿ ಯಾರಿಗೆ ಕನ್ನಡ ಮಾತಾಡಲು ಬರಲ್ಲ, ಯಾರಿಗೆ ಅರ್ಥವಾಗಲ್ಲ ಎಂಬ ಸಮೀಕ್ಷೆ ಆಗಬೇಕು.

ಮೈಸೂರು (ಅ.15): ನಾವು ಕನ್ನಡವನ್ನು ಜಗತ್ತಿನಲ್ಲಿ ಮೆರೆಸಬೇಕಿದೆ. ಕರ್ನಾಟಕದ ಶಾಂತಿ ಸಮೃದ್ಧಿ ಕನ್ನಡಿಗರ ಮಂತ್ರ ಆಗಬೇಕು. ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲಾ ಕನ್ನಡಿಗರು ಇವರಲ್ಲಿ ಯಾರಿಗೆ ಕನ್ನಡ ಮಾತಾಡಲು ಬರಲ್ಲ, ಯಾರಿಗೆ ಅರ್ಥವಾಗಲ್ಲ ಎಂಬ ಸಮೀಕ್ಷೆ ಆಗಬೇಕು. ಕಾರ್ಪೊರೇಟ್ ಸಂಸ್ಥೆಯೆ ಈ ಸಮೀಕ್ಷೆ ಮಾಡುತ್ತದೆ. ಇದಕ್ಕೆ ಜನರ ಸಹಕಾರವಿರಲಿ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಮೂಸೂರು ದಸರಾ ಮಹೋತ್ಸವ- 2023 ಚಾಲನೆ ನೀಡಿದ ಮಾತನಾಡಿದ ಹಂಸಲೇಖ ಅವರು, ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲಾ ಕನ್ನಡಿಗರು ಇವರಲ್ಲಿ ಯಾರಿಗೆ ಕನ್ನಡ ಮಾತಾಡಲು ಬರಲ್ಲ. ಯಾರಿಗೆ ಅರ್ಥವಾಗಲ್ಲ ಈ ಬಗ್ಗೆ  ಒಂದು ಸಮೀಕ್ಷೆ ಆಗಬೇಕು. ಕಾರ್ಪೊರೇಟ್ ಕನ್ನಡಿಗರ ತಂಡ ನನಗೆ ಸಲಹೆ ನೀಡಿದೆ. ಕನ್ನಡ ಅರ್ಥ ಆಗುತ್ತೆ, ಆದರೆ ಓದಲು- ಬರೆಯಲು ಬರಲ್ಲ ಎನ್ನುವವರ ಸಮೀಕ್ಷೆ ಆಗಬೇಕು. ಕನ್ನಡ ಗೊತ್ತಿಲ್ಲದವರಿಗೆ 30 ದಿನಗಳಲ್ಲಿ ಭಾಷೆ ಕಲಿಸಬೇಕು.  ಕನ್ನಡ ಕಲಿತವರಿಗೆ ಜಮೀನು ಆರ್‌ಟಿಸಿ ಮಾದರಿಯಲ್ಲಿ ಕನ್ನಡ ಪಟ್ಟ ಕೊಡಬೇಕು. ಅದು ಬಿಪಿಎಲ್, ಎಪಿಎಲ್ ಮಾದರಿಯ ದಾಖಲೆ ಆಗಬೇಕು. ಮತ್ತೊಂದು ಸಲಹೆ ಪ್ರತಿಭೆ, ಉದ್ಯಮ ವಿನಿಮಯ ಆಗಬೇಕು. ಹುಬ್ಬಳ್ಳಿ- ಬೆಳಗಾವಿ ಪ್ರತಿಭೆ ಉದ್ಯಮಗಳು ಬೆರೆಯುತ್ತಿವೆ.  ಮಂಗಳೂರು- ಮೈಸೂರು ನಡುವೆ ಸಾಂಸ್ಕೃತಿಕ ವಿನಿಮಯ ಆಗಬೇಕು. ರಫ್ತುದಾರರು ಪಕ್ಕದ ರಾಜ್ಯಗಳ ಮೇಲೆ ಅವಲಂಬನೆ ಆಗದೆ.  29 ಜಿಲ್ಲೆಗಳನ್ನು ಜೋಡಿಸಿ ಪ್ರತಿಭೆ, ಉದ್ಯಮ ಹಂಚಿಕೊಳ್ಳಬೇಕು.  ಕೃಷಿಕ- ಕಾರ್ಪೋರೇಟ್ ವಿನಿಮಯ ಆಗಬೇಕು ಎಂದರು.

ನಾನು ಈಗ ಕನ್ನಡದ ದೀಪ ಹಚ್ಚಿದ್ದೇನೆ. ಕನ್ನಡಿಗರ ಆಶಯದಂತೆ ದೀಪ ಹಚ್ಚಿದ್ದೇನೆ. ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ. ವಿಜಯನಗರದ ಮಹಾ ಸಾಮ್ರಾಜ್ಯ ಆರಂಭಿಸಿದ ಮಹಾಕಾವ್ಯವಿದು. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು. ಅಭಿವೃದ್ಧಿ ನಮ್ಮ ಕೃತಿ ಆಗಬೇಕು. ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಭಾವಕ್ಕೆ ಮಿತಿ ಎಲ್ಲಿದೆ. ನಮಗೆ ದೆಹಲಿ ಬೇಕು-ದೆಹಲಿಗೂ ನಾವು ಬೇಕು. ಆದರೆ ದೆಹಲಿಗೆ ಕನ್ನಡವೇ ಬೇಕಾಗುತ್ತಿಲ್ಲ. ಇದಕ್ಕೆ ತಲೆ ಕೆಡಿಸಿಕೊಳ್ಳೋದು ಬೇಡ ಎಂದರು.

ನಾಡಹಬ್ಬ ಮೈಸೂರು ದಸರಾ 2023ಗೆ ಚಾಲನೆ ನೀಡಿದ ಹಂಸಲೇಖ: ಕಾಂಗ್ರೆಸ್‌ ನಾಯಕರ ಗುಣಗಾನ ಮಾಡಿದ ಉದ್ಘಾಟಕ

ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರ ಆಗಬೇಕು: ನಮ್ಮ ಕಾವೇರಿ ಗೆ ಒಂದು ಮಿತಿಯಿದೆ ಕನ್ನಡದ ಭಾಷೆಗೆ ಒಂದು ಮಿತಿಯಿದೆ. ಅದರ ಭಾವಕ್ಕೆ ಎಲ್ಲಿ ಮಿತಿಯಿದೆ? ಶಾಂತಿ ಮಂತ್ರ ಕನ್ನಡ ಅಭಿವೃದ್ದಿ ಮತ್ತು ಶಾಂತಿ ಮಂತ್ರ. ಇಂದು ಕನ್ನಡಿಗರಿಗೆ ಒಂದಂಶವಾಗಬೇಕು. ಕನ್ನಡದ ಶಾಂತಿ ಮಂತ್ರವನ್ನು ವಿಶ್ವಕ್ಕೆ ಮುಟ್ಟಿಸೋಣ. ರಾಷ್ಟ್ರದ ಜೊತೆ ವಿಶ್ವದ ಜೊತೆ ಕನ್ನಡವನ್ನು ಸಮೀಕರಿಸಬೇಕು. ನಾವು ಯುದ್ದ ಮಾಡಿದ್ದು ಆಯ್ತು. ಈಗ ನಾವು ಕನ್ನಡದ ಅಭಿವೃದ್ಧಿ ಮಾಡೋಣ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರ ಆಗಬೇಕು ಎಂದು ಹೇಳಿದರು.

ಬರಗಾಲದ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ: ಮೈಸೂರಿನ ಜನರು ಶಾಂತಿ ಪ್ರಿಯರು. ಕಾನೂನು ಸುವ್ಯವಸ್ಥೆಯನ್ನ ಗೌರವಿಸುವಂತಹ ಜನ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಆಚರಣೆ ಮಾಡಲಿಕ್ಕೆ ಅವಕಾಶವಿದೆ. ಜನರ ಆಚಾರ ವಿಚಾರಗಳನ್ನ ಗೌರವಿಸಲಿಕ್ಕಾಗಿಯೇ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ಮಾಡಲಿಕ್ಕೆ ಮುಂದಾಗಿದೆ. ನಮ್ಮ ಸರ್ಕಾರ ದಸರಾವನ್ನ ವಿಜೃಂಭಣೆಯಿಂದ ಆಚರಣೆ ಮಾಡಲಿಕ್ಕೆ ತೀರ್ಮಾನ ಮಾಡಿತ್ತು. ಆದರೆ ರಾಜ್ಯದಲ್ಲಿ ಬರ ನಿರ್ಮಾಣ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದೇವೆ. ಆದರು ಕಲೆ ಸಾಹಿತ್ಯ ಎಲ್ಲದಕ್ಕೂ ಹೆಚ್ಚಿನ ಒತ್ತು ನೀಡಿದ್ದೇವೆ. ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ದ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಹೇಳಿದರು.

ಬೆಂಗಳೂರು ಜನರಿಗೆ ಭಾನುವಾರದ ಶಾಕ್‌ : ಸತತ ಮೂರನೇ ದಿನವೂ ವಿದ್ಯುತ್‌ ಕಡಿತ

ಸಂಗೀತ ನಿರ್ದೇಶಕ ಹಂಸಲೇಖ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಸಂಸದ ಪ್ರತಾಪ್‌ ಸಿಂಹ ಸೇರಿ ಹಲವು ಗಣ್ಯರು ಅಲಂಕೃತ ಬೆಳ್ಳಿ ರಥದಲ್ಲಿ ಆಸೀನಳಾಗಿದ್ದ ಪಂಚಲೋಹದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ದಸರಾ ಮಹೋತ್ಸವ 2023ಕ್ಕೆ ಚಾಲನೆ ನೀಡಿದರು. ಈ ವೇಳೆ ನಾಡಗೀತೆಯನ್ನು ಹಾಡಿ ಗೌರವ ಸಲ್ಲಿಸಲಾಯಿತು. ಸಚಿವರಾದ ಕೆ. ವೆಂಕಟೇಶ್ ,ಕೆ. ಜೆ. ಜಾರ್ಜ್, ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಚಾಮುಂಡಿ ಪೂಜೆ, ಕಂಕಣಧಾರಣೆ ನೆರವೇರಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ