ಶಕ್ತಿ ಯೋಜನೆಯಿಂದ ನಷ್ಟ; ಆಟೋ, ಟ್ಯಾಕ್ಸಿ ಮಾಲಿಕರ ಬೇಡಿಕೆ ಸಿಎಂ ಅಂಗಳಕ್ಕೆ

Published : Aug 01, 2023, 11:39 AM IST
ಶಕ್ತಿ ಯೋಜನೆಯಿಂದ ನಷ್ಟ; ಆಟೋ, ಟ್ಯಾಕ್ಸಿ ಮಾಲಿಕರ ಬೇಡಿಕೆ ಸಿಎಂ ಅಂಗಳಕ್ಕೆ

ಸಾರಾಂಶ

ಶಕ್ತಿ ಯೋಜನೆಯಿಂದ ಆಟೋ, ಬಸ್‌, ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ನಷ್ಟವಾಗಿದೆ ಎಂದಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲು ಆಗಸ್ಟ್‌ 10ರೊಳಗೆ ಸಮಯ ನಿಗದಿಪಡಿಸುವ ಭರವಸೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಂಗಳೂರು (ಆ.1) :  ಶಕ್ತಿ ಯೋಜನೆಯಿಂದ ಆಟೋ, ಬಸ್‌, ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ನಷ್ಟವಾಗಿದೆ ಎಂದಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲು ಆಗಸ್ಟ್‌ 10ರೊಳಗೆ ಸಮಯ ನಿಗದಿಪಡಿಸುವ ಭರವಸೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸೋಮವಾರ ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ನಡೆದ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ ಸಂಘಟನೆಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.

ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟಎದುರಾಗಿದೆ. ಆದ್ದರಿಂದ ಆಟೋ ಚಾಲಕರಿಗೆ ಪ್ರತಿ ತಿಂಗಳು .10 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಈ ವಿಚಾರವನ್ನು ಮುಖ್ಯಮಂತ್ರಿಯವರ ಅಂಗಳದಲ್ಲಿ ಚರ್ಚೆಯಾಗಬೇಕಿದ್ದು, ಸಮಯ ನಿಗದಿಯ ಬಳಿಕ ಮುಖ್ಯಮಂತ್ರಿಯವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಬಿಎಂಟಿಸಿಗೆ ಶೀಘ್ರವೇ 1000 ಎಲೆಕ್ಟ್ರಿಕ್‌ ಬಸ್‌ ಸೇರ್ಪಡೆ: ಸಚಿವ ರಾಮಲಿಂಗಾರೆಡ್ಡಿ

ಅಸಂಘಟಿತ ವಾಣಿಜ್ಯ ವಾಹನ ಚಾಲಕರ ಅಭಿವೃದ್ದಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ರಾರ‍ಯಪಿಡೋ ಕುರಿತು ನ್ಯಾಯಾಲಯದಲ್ಲಿರುವ ವ್ಯಾಜ್ಯ ಬಗೆಹರಿಸಿಕೊಳ್ಳಲು ಸರ್ಕಾರದ ಅಡ್ವೋಕೆಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

ಸರ್ಕಾರವೇ ಓಲಾ, ಊಬರ್‌ ಮಾದರಿಯಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಲು ಮನವಿ ನೀಡಿದ್ದಾರೆ. ಆಟೋ ಚಾಲಕರಿಗೆ ಕ್ವಾಟ್ರರ್ಸ್‌ ಮಾದರಿಯಲ್ಲಿ ಚಾಲಕರ ಕಾಲೋನಿ ನಿರ್ಮಿಸಿ ಕಡಿಮೆ ಬಾಡಿಗೆಗೆ ಮನೆಗಳನ್ನು ಕೊಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ವಸತಿ ಸಚಿವ ಜಮೀರ್‌ ಅಹ್ಮದ್‌ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು. ವಿಮಾನ ನಿಲ್ದಾಣದ ಸಮೀಪ ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್‌ ತೆರೆಯಲು ಸಂಘಟನೆಗಳು ಸಲಹೆ ನೀಡಿವೆ. ಅಲ್ಲಿ ಜಾಗದ ಕೊರತೆಯಿದ್ದು, ಬಿಬಿಎಂಪಿ ಆಯುಕ್ತರೊಂದಿಗೆ ಇದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿರುವುದಾಗಿ ಅವರು ಹೇಳಿದರು.

ಬಲ್ಕ್ ಆಗಿ ಆಟೋ ರಿಕ್ಷಾಗಳ ನೋಂದಣಿಯಿಂದ ಸಮಸ್ಯೆ

ಬೆಂಗಳೂರು ಆಟೋ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ.ಮಂಜುನಾಥ್‌ ಮಾತನಾಡಿ, ಓಲಾ, ಊಬರ್‌ ಸಂಸ್ಥೆಗಳು ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳನ್ನು ಬಲ್‌್ಕ ಆಗಿ ತೆಗೆದುಕೊಂಡು ನೋಂದಣಿ ಮಾಡಿಸಿ ಉತ್ತರ ಭಾರತದ ಜನರನ್ನು ಕರೆಯಿಸಿ ಪರವಾನಗಿ ಮಾಡಿಸಿಕೊಟ್ಟು, ಕೆಲಸ ಮಾಡಿಸುತ್ತಿವೆ. ಇದರಿಂದ ಸ್ಥಳೀಯ ಚಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಕಂಪನಿಗಳ ಬಲ್‌್ಕ ಆಗಿ ತೆಗೆದುಕೊಂಡು ಬರುವ ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳಿಗೆ ನೋಂದಣಿ ಮಾಡಿಸದಂತೆ ಮನವಿ ಮಾಡಿದ್ದು, ಸಚಿವರು ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಹಾಗೆಯೇ ಸ್ಥಳೀಯ ನಿವಾಸಿಗಳ ವಿದ್ಯುತ್‌ ಆಟೋ ರಿಕ್ಷಾಗಳಿಗೆ ಪರವಾನಗಿ ನೀಡಬೇಕು ಮನವಿ ಮಾಡಿದ್ದು ಒಪ್ಪಿಗೆ ಕೊಟ್ಟಿದ್ದಾರೆ. ಜೊತೆಗೆ ಕೋವಿಡ್‌ ಸಮಯದಲ್ಲಿ ಸರಿಯಾಗಿ ಸಾಲ ಕಟ್ಟಲಾಗದೆ ಸಿಬಿಲ್‌ ಸ್ಕೋರ್‌ ಬಿದ್ದು ಹೋಗಿದ್ದು ಸಾಲಗಳು ಸಿಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಫೈನಾನ್ಸ್‌ ಕಂಪನಿಗಳು ಚಾಲಕರಿಗೆ ಹೆಚ್ಚು ಬಡ್ಡಿಗೆ ಸಾಲ ಕೊಟ್ಟು ಸಂಕಷ್ಟತಂದೊಡ್ಡಿವೆ. ಹೀಗಾಗಿ ಜಾತಿವಾರು ನಿಗಮಗಳಿಂದ ಕಡಿಮೆ ಬಡ್ಡಿಗೆ .2 ಲಕ್ಷ ಸಾಲ ಕೊಡಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಮೆಟ್ರೋ ನಿಲ್ದಾಣಗಳ ಬಳಿ ಆಟೋ ನಿಲ್ದಾಣ ಮಾಡಿಕೊಡುವ ಬಗ್ಗೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡುವ ಭರವಸೆ ನೀಡಿದ್ದಾರೆ. ಓಲಾ ಸಂಸ್ಥೆಯಿಂದ ಬ್ಲಾಕ್‌ಗೆ ಒಳಗಾಗಿರುವ ಸಾವಿರಾರು ಚಾಲಕರನ್ನು ಬ್ಲಾಕ್‌ಲಿಸ್ಟ್‌ನಿಂದ ತೆಗೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಇಂಡಿಯನ್‌ ಡ್ರೈವ​ರ್‍ಸ್ ಟ್ರೇಡ್‌ ಯೂನಿಯನ್‌ ಅಧ್ಯಕ್ಷ ಸದಾನಂದಸ್ವಾಮಿ ತಿಳಿಸಿದರು.

ಪ್ರತಿಭಟನೆ

ಚಾಲಕರ ಸಂಘಟನೆ ಮುಖಂಡರೊಬ್ಬರಿಗೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ರೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದನ್ನು ಖಂಡಿಸಿ ಚಾಲಕರು ಸಾರಿಗೆ ಆಯುಕ್ತರ ಕಚೇರಿಯ ಹೊರಗಡೆ ಪ್ರತಿಭಟನೆ ನಡೆಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಬಳಿಕ ಸಬ್‌ ಇನ್‌ಸ್ಪೆಕ್ಟರ್‌ ಕ್ಷಮೆ ಕೋರಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

 

ಖಾಸಗಿ ಸಾರಿಗೆ ಸಂಘಟನೆಗಳ ಜೊತೆ ಇಂದು ಸಚಿವ ರಾಮಲಿಂಗಾರೆಡ್ಡಿ 2ನೇ ಸುತ್ತಿನ ಸಭೆ

ಪ್ರಮುಖವಾಗಿ ರಸ್ತೆ ತೆರಿಗೆ ತೆಗೆಯಬೇಕು ಮತ್ತು ಶಕ್ತಿ ಯೋಜನೆ ಬಗ್ಗೆ ಕ್ರಮಕ್ಕೆ ಮುಂದಾಗಬೇಕು. ಸರ್ಕಾರಕ್ಕೆ ಆ.10 ಖಾಸಗಿ ಸಾರಿಗೆ ಸಂಘಟನೆಗಳು ಗಡುವು ನೀಡಿವೆ. ಇಲ್ಲವಾದರೆ ಕೇವಲ ಬೆಂಗಳೂರು ಬಂದ್‌ ಅಲ್ಲ. ಕರ್ನಾಟಕ ಬಂದ್‌ ಮಾಡಲಾಗುವುದು.

-ನಟರಾಜ್‌ ಶರ್ಮ, ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ