ಲೋಕಾಯುಕ್ತ ದಾಳಿ: 8 ಸರ್ಕಾರಿ ಅಧಿಕಾರಿಗಳ ಮನೇಲಿ ₹23 ಕೋಟಿ ಅಕ್ರಮ ಆಸ್ತಿ ಪತ್ತೆ; ಯಾರ ಬಳಿ ಎಷ್ಟಿದೆ ಗೊತ್ತಾ?

Sathish Kumar KH   | Kannada Prabha
Published : Sep 23, 2026, 09:20 AM IST
Mandya Lokayukta Raid On BCM Hostel Warden

ಸಾರಾಂಶ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ 8 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 23.24 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ, ನಗದು ಹಾಗೂ ಚಿನ್ನಾಭರಣಗಳನ್ನು ಪತ್ತೆಹಚ್ಚಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು (ಸೆ.23): ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.

ಈ ದಾಳಿಯ ವೇಳೆ ಪತ್ತೆಯಾದ ಅಪಾರ ಪ್ರಮಾಣ ನಗದು, ಚಿನ್ನಾಭರಣ, ಮದ್ಯದ ಬಾಟಲಿಗಳನ್ನು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

ಬೆಂಗಳೂರು, ಬೆಂಗಳೂರು ದಕ್ಷಿಣ ಜಿಲ್ಲೆ, ಚಿಕ್ಕಬಳ್ಳಾಪುರ, ಮಂಡ್ಯ, ಕೊಡಗು, ಕಲಬುರಗಿ, ಧಾರವಾಡ, ಬೀದರ್‌ ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 33 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 23.24 ಕೋಟಿ ರು. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ 8 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ಅಧಿಕಾರಿ ಬಳಿ ಎಷ್ಟು ಅಕ್ರಮ ಆಸ್ತಿ?

1.ಎಚ್‌.ಎಂ ರಂಗನಾಥ್‌, ಜಿಬಿಎ ನಿವೃತ್ತ ಸಹಾಯಕ ಅಭಿಯಂತರ, ಶಿವಾಜಿನಗರ, ಬೆಂಗಳೂರು ಜಿಲ್ಲೆ: 4 ಕಡೆ ದಾಳಿ. 2 ನಿವೇಶನ, 4 ವಾಸದ ಮನೆ, 9.35 ಎಕರೆ ಕೃಷಿ ಜಮೀನು, ₹1.30 ಕೋಟಿ ನಗದು, ₹40 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹11.96 ಲಕ್ಷ ಮೌಲ್ಯದ ವಾಹನಗಳು, ₹18 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟು ₹3.84 ಕೋಟಿ ಮೌಲ್ಯದ ಆಸ್ತಿ.

2. ಎಂ.ಶಿವರಾಜು, ಹಾಸ್ಟೆಲ್‌ ಸೂಪರಿಂಡೆಂಟ್‌, ಬಿಎಂಸಿ, ಮಂಡ್ಯ ಜಿಲ್ಲೆ: 2 ಕಡೆ ದಾಳಿ, 5 ನಿವೇಶನ, 2 ವಾಸದ ಮನೆ, 2 ವಾಣಿಜ್ಯ ಮಳಿಗೆ, 1 ಫಾರ್ಮ್‌ ಹೌಸ್‌, ₹4.10 ಲಕ್ಷ ಮೌಲ್ಯದ ಕೃಷಿ ಜಮೀನು, ₹2.5 ಲಕ್ಷ ನಗದು, ₹33.80 ಲಕ್ಷ ಮೌಲ್ಯದ ಚಿನ್ನಾಭರಣ, ₹15 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು ₹2.71 ಕೋಟಿ ಮೌಲ್ಯದ ಆಸ್ತಿ.

3. ರಾಜೇಶ್ವರಿ ಬಾಬಲಾಡ್‌, ಎಇಇ ಜೆಸ್ಕಾಂ, ಎಂಆರ್‌ಟಿಎಲ್‌ಡಿಸಿ ಕಲಬುರಗಿ ವಿಭಾಗ, ಕಲಬುರಗಿ ಜಿಲ್ಲೆ: 3 ಕಡೆ ದಾಳಿ. 5 ನಿವೇಶನ, 2 ವಾಸದ ಮನೆ, ₹16.41 ಲಕ್ಷ ಮೌಲ್ಯದ ಚಿನ್ನಾಭರಣ, ₹14.86 ಲಕ್ಷ ಮೌಲ್ಯದ ವಾಹನ ಸೇರಿದಂತೆ ಒಟ್ಟು ₹1.91 ಕೋಟಿ ಮೌಲ್ಯದ ಆಸ್ತಿ.

4.ಎಚ್‌.ಆರ್‌. ರಮೇಶ್‌, ಮುನ್ಸಿಪಲ್‌ ಕಮೀಷನರ್‌, ಕೊಡಗು ಜಿಲ್ಲೆ: 3 ಕಡೆ ದಾಳಿ. 1 ವಾಸದ ಮನೆ, 3 ಎಕರೆ ಕೃಷಿ ಜಮೀನು, ₹4.66 ಲಕ್ಷ ನಗದು, ₹46.48 ಲಕ್ಷ ಮೌಲ್ಯದ ಚಿನ್ನಾಭರಣ, ₹20.85 ಲಕ್ಷ ಮೌಲ್ಯದ ವಾಹನಗಳು, ₹6.80 ಲಕ್ಷ ಮೌಲ್ಯದ ಇತರೆ ವಸ್ತು ಸೇರಿದಂತೆ ಒಟ್ಟು ₹1.78 ಕೋಟಿ ಮೌಲ್ಯದ ಆಸ್ತಿ.

5.ಕಿರಣ್‌ ಕುಮಾರ್‌ ಬೈಂದೂರು, ಎಇಇ, ಹೆಸ್ಕಾಂ, ಧಾರವಾಡ ಜಿಲ್ಲೆ: 6 ಕಡೆ ದಾಳಿ. 1 ವಾಸದ ಮನೆ, 1 ವಾಣಿಜ್ಯ ಮಳಿಗೆ, 2 ಎಕರೆ ಕೃಷಿ ಜಮೀನು, ₹4.60 ಲಕ್ಷ ನಗದು, ₹73.71 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹15.10 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು ₹1.79 ಕೋಟಿ ಮೌಲ್ಯದ ಆಸ್ತಿ.

6. ಜಿ. ದರ್ಶನ್‌ ಗೌಡ, ಎಫ್‌ಡಿಎ, ಡಿಸಿ ಕಚೇರಿ, ಚಿಕ್ಕಬಳ್ಳಾಪುರ ಜಿಲ್ಲೆ: 8 ಕಡೆ ದಾಳಿ. 3 ನಿವೇಶನ, 16 ವಾಸದ ಮನೆ, ₹2.67 ಲಕ್ಷ ನಗದು, ₹6.60 ಲಕ್ಷ ಮೌಲ್ಯದ ಚಿನ್ನಾಭರಣ, ₹22.80 ಲಕ್ಷ ಮೌಲ್ಯದ ವಾಹನ ಸೇರಿದಂತೆ ಒಟ್ಟು ₹1.86 ಕೋಟಿ ಮೌಲ್ಯದ ಆಸ್ತಿ.

7. ಮಾಣಿಕ್‌ ರಾವ್‌, ನಿವೃತ್ತ ಕೃಷಿ ಅಧಿಕಾರಿ, ಬೀದರ್‌ ಜಿಲ್ಲೆ: 3 ಕಡೆ ದಾಳಿ. 6 ನಿವೇಶನಗಳು, 3 ವಾಸದ ಮನೆ, 14.20 ಎಕರೆ ಕೃಷಿ ಜಮೀನು, ₹14 ಸಾವಿರ ನಗದು, ₹61.61 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹29.40 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು ₹2.51 ಕೋಟಿ ಮೌಲ್ಯದ ಆಸ್ತಿ.

8. ಶ್ರೀದೇವಿ, ಜಿಲ್ಲಾ ನೋಂದಣಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ: 4 ಕಡೆ ದಾಳಿ. 2 ನಿವೇಶನ, 2 ವಾಸದ ಮನೆ, ₹2.50 ಕೋಟಿ ಮೌಲ್ಯದ ಕೃಷಿ ಜಮೀನು, ₹2.30 ಕೋಟಿ ಮೌಲ್ಯದ ಗಾರ್ಮೆಂಟ್‌ ಫ್ಯಾಕ್ಟರಿ, ₹30.87 ಲಕ್ಷ ನಗದು, ₹35.58 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹23.15 ಲಕ್ಷ ಮೌಲ್ಯದ ವಾಹನಗಳು, ₹5 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು ₹6.80 ಕೋಟಿ ಮೌಲ್ಯದ ಆಸ್ತಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

e-Aasthi 2.0: ಬೆಂಗಳೂರು ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್: ‘ಇ-ಆಸ್ತಿ 2.0’ ಲೋಕಾರ್ಪಣೆ, ಏನೆಲ್ಲ ಸೌಲಭ್ಯ? ಇಲ್ಲಿದೆ ಮಾಹಿತಿ
ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ: ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯಾಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು