
ಬೆಂಗಳೂರು (ಸೆ.23): ನಗರದ ಆಸ್ತಿ ಮಾಲೀಕರಿಗೆ ಅನುಕೂಲವಾಗುವಂತೆ ಸರಳ, ವೇಗದ ಮತ್ತು ಪಾರದರ್ಶಕ ಆಸ್ತಿ ದಾಖಲೆ ವ್ಯವಸ್ಥೆಯಾದ ‘ಇ-ಆಸ್ತಿ 2.0’ ಅನ್ನು ಸರ್ಕಾರ ಜಾರಿಗೆ ತಂದಿದೆ. ಬೆಂಗಳೂರು ನಗರದಲ್ಲಿರುವ 35 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಪೈಕಿ ಈಗಾಗಲೇ 23–24 ಲಕ್ಷ ಆಸ್ತಿ ದಾಖಲೆಗಳನ್ನು ಗಣಕೀಕರಣ ಮಾಡಲಾಗಿದ್ದು, ಸುಮಾರು 11 ಲಕ್ಷ ಆಸ್ತಿ ಮಾಲೀಕರಿಗೆ ಅಂತಿಮ ಇ-ಖಾತಾ ನೀಡಲಾಗಿದೆ.
ಹಳೆಯ ಇ-ಖಾತಾ ವ್ಯವಸ್ಥೆಯಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ ಇ-ಆಸ್ತಿ 2.0 ರೂಪಿಸಲಾಗಿದೆ. ಇದರಲ್ಲಿ ಆಸ್ತಿ ಮಾಲೀಕರ ಹೆಸರು, ಮಾಲೀಕತ್ವ ಹಾಗೂ ಆಸ್ತಿ ವಿಸ್ತೀರ್ಣದಲ್ಲಿ ತಿದ್ದುಪಡಿ ಮಾಡುವುದಕ್ಕೂ ಹೊಸ ವ್ಯವಸ್ಥೆಯಲ್ಲಿ ಸುಲಭ ಅವಕಾಶ ಕಲ್ಪಿಸಲಾಗಿದೆ. ಇನ್ನೊಂದು ವಿಶೇಷ ಎಂದರೆ ಕಾವೇರಿ, ಬೆಸ್ಕಾಂ ಹಾಗೂ ಜಲಮಂಡಳಿ ವ್ಯವಸ್ಥೆಗಳೊಂದಿಗೆ ಇ-ಆಸ್ತಿ 2.0 ಅನ್ನು ಸಂಯೋಜಿಸಲಾಗಿದೆ.
ಈಗ ಆಸ್ತಿ ದಾಖಲೆಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದಾಗಿದ್ದು. ಈ ಹಿಂದೆ ಮಧ್ಯವರ್ತಿಗಳ ಹಸ್ತಕ್ಷೇಪ ಹೆಚ್ಚಾಗಿಯೇ ಇತ್ತು. ಆದರೆ ಈ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳಿಲ್ಲದೆ ನೇರವಾಗಿ ಆನ್‌ಲೈನ್ ಮೂಲಕ ಮಾಲೀಕರ ಪರಿಶೀಲಿಸಬಹುದಾಗಿದೆ. ಹೊಸ ವ್ಯವಸ್ಥೆಯಲ್ಲಿ ಸರ್ಕಾರ ಡಿಜಿಟಲ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದೆ. ಆಸ್ತಿ ದಾಖಲೆಗಳ ಪರಿಶೀಲನೆಗೆ AI ತಂತ್ರಜ್ಞಾನ ಬಳಸಲಾಗುತ್ತಿದ್ದು, ಹೊರನಾಡಿನಲ್ಲಿ ಇರುವ ಆಸ್ತಿ ಮಾಲೀಕರಿಗೂ ಡಿಜಿಟಲ್ ಸಹಿ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗಲಿವೆ.
ಇ-ಖಾತಾ ವ್ಯವಸ್ಥೆಗೆ ಈಗಾಗಲೇ ರಾಷ್ಟ್ರೀಯ ಇ-ಆಡಳಿತ 2025 ಚಿನ್ನದ ಪ್ರಶಸ್ತಿ ಲಭಿಸಿದೆ. ಇದೇ ವೇಳೆ, ಮುಂದಿನ ಸೋಮವಾರದಿಂದ ಖಾತಾ ಬೈಫರ್ಕೇಶನ್‌ಗೂ ಆನ್‌ಲೈನ್ ಮಾಡ್ಯೂಲ್ ಜಾರಿಗೆ ಬರಲಿದೆ. 20 ಸಾವಿರ ಚದರ ಅಡಿವರೆಗೆ ಆಸ್ತಿ ಬೈಫರ್ಕೇಶನ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
Property services made simpler - eAasthi 2.0 is now live, bringing a faster, more transparent and citizen-friendly eKhata experience.
We are building a more seamless digital system for citizens through:
- Online, simplified applications & tracking
• Faster, automated processing… pic.twitter.com/Kpggcy6zfH— Krishna Byre Gowda (@krishnabgowda) September 22, 2026
ಆನ್‌ಲೈನ್‌ನಲ್ಲೇ ಪ್ಲಾನ್ ಅಪ್ಲೋಡ್ ಮಾಡಿ ಬೈಫರ್ಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಬೈಫರ್ಕೇಶನ್ ಪೂರ್ಣಗೊಂಡ ಬಳಿಕ ಇ-ಖಾತಾ ಪಡೆಯಲು ಕೂಡ ಆನ್‌ಲೈನ್ ವ್ಯವಸ್ಥೆ ಇರಲಿದೆ. ಇ-ಆಸ್ತಿ 2.0 ಮೂಲಕ ಆಸ್ತಿ ದಾಖಲೆ ಸೇವೆ ಮತ್ತಷ್ಟು ಜನಸ್ನೇಹಿಯಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ