
ಬೆಂಗಳೂರು (ಏ.1): ಟೆಂಡರ್ ಗಾಗಿ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಪುತ್ರನಿಂದ ನಡೆದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೂಪಾಕ್ಷಪ್ಪ ಲೋಕಾಯುಕ್ತ ಕಸ್ಟಡಿ ಏಪ್ರಿಲ್ 1ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಇಂದು ಮತ್ತೆ ನ್ಯಾಯಾಲಯಕ್ಕೆ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಹಾಜರು ಪಡಿಸಲಿದ್ದಾರೆ. ತನಿಖೆಗೆ ಅವಕಾಶ ಇರೋ ಹಿನ್ನೆಲೆ ಮತ್ತೆ ಕಸ್ಟಡಿಗೆ ಪಡೆಯಬೇಕಾ ಬೇಡ್ವಾ ಎಂಬುವುದು ಇಂದು ತೀರ್ಮಾನವಾಗಲಿದೆ. ತನಿಖೆಯ ಸ್ಥಿತಿಗತಿ ಹಾಗೂ ಕಸ್ಟಡಿ ಬೇಕೋ, ಬೇಡ್ವೋ ಅನ್ನೋದು ತನಿಖಾಧಿಕಾರಿಗಳ ಸಭೆಯಲ್ಲಿ ಇಂದು ತೀರ್ಮಾನವಾಗಲಿದೆ. ಸಭೆಯ ತೀರ್ಮಾನದ ಬಳಿಕ ಲೋಕಾಯುಕ್ತ ತಂಡ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕೋರ್ಟ್ ಗೆ ಹಾಜರು ಪಡಿಸಲಿದೆ. ಸದ್ಯ ಐದು ದಿನಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ತನಿಖಾಧಿಕಾರಿಗಳು ಕಲೆ ಹಾಕಿದ್ದಾರೆ.
ಮಾಡಾಳು ವಿರೂಪಾಕ್ಷಪ್ಪ ಮೊಬೈಲ್ ಫೋನ್ ನಲ್ಲಿ ಡಿಲಿಟ್ ಆಗಿದ್ದ ಕೆಲ ಮಾಹಿತಿಗಳನ್ನು ಕೂಡ ಸಂಗ್ರಹ ಮಾಡಲಾಗಿದೆ. ಆ ಮಾಹಿತಿ ಆಧಾರದ ಮೇಲೆ ಮಾಡಾಳು ವಿರೂಪಾಕ್ಷಪ್ಪ ಅವರನ್ನು ತೀವ್ರವಾಗಿ ತನಿಖಾಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಅಷ್ಟೇ ಅಲ್ಲದೆ ವಿರೂಪಾಕ್ಷಪ್ಪ ಅಧ್ಯಕ್ಷ ರಾಗಿದ್ದ ಅವಧಿಯಲ್ಲಿ ನಡೆಸಿದ್ದ ಪ್ರಮುಖ 106 ಟೆಂಡರ್ ಅಕ್ರಮಗಳ ವಿಚಾರಣೆ ಕೂಡ ಮಾಡಲಾಗಿದೆ. ಈ ಬಾರಿಯ ವಿಚಾರಣೆ ಸಂದರ್ಭದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಮಾಡಾಳು ವಿರೂಪಾಕ್ಷಪ್ಪ ಸರಿಯಾಗಿ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಮತ್ತೆ ಮಾಡಾಳು ವಿರೂಪಾಕ್ಷಪ್ಪ ನ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಚುನಾವಣೆಗೆ ಬಳಸುವ ಉದ್ದೇಶದಿಂದಲೇ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆಎಸ್‌ಡಿಎಲ್) ನಿಗಮದ ಕೆಲ ರಾಸಾಯನಿಕ ಕಚ್ಚಾ ವಸ್ತುಗಳ ಪೂರೈಕೆದಾರರಿಂದ ಹಣ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರು ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಕೆಎಸ್‌ಡಿಎಲ್(KSDL) ನಿಗಮವು ಉತ್ಪಾದಿಸುವ ಮೈಸೂರ್ ಸ್ಯಾಂಡಲ್ ಸಾಬೂನು(Mysore sandal soap factory) ಸೇರಿದಂತೆ ಇತರೆ ಉತ್ಪನ್ನಗಳ ತಯಾರಿಕೆಗೆ 106 ವಿವಿಧ ಬಗೆಯ ರಾಸಾಯನಿಕ ಕಚ್ಚಾ ವಸ್ತುಗಳನ್ನು ಖರೀದಿಸುತ್ತಿದೆ. ಈ ಕಚ್ಚಾ ವಸ್ತುಗಳನ್ನು ನಿಯಮಿತವಾಗಿ ಸುಮಾರು 6 ರಿಂದ 8 ಕಂಪನಿಗಳು ಪೂರೈಸುತ್ತಿವೆ. ಕೆಲವೊಂದು ವಸ್ತುಗಳನ್ನು ಬಹಿರಂಗ ಹರಾಜು ಹೊರತುಪಡಿಸಿದರೆ ಬಹುತೇಕ ಕಚ್ಚಾ ಸಾಮಾಗ್ರಿಗಳನ್ನು ಈ ಕಂಪನಿಗಳು ಪೂರೈಸುತ್ತಿದ್ದವು. ಈ ಕಂಪನಿಗಳ ಪ್ರತಿನಿಧಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದ ತಂದೆ-ಮಗ, ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನ ಟೆಂಡರ್ ಡೀಲ್ ಕುದುರಿಸಿ ಹಣ ಸಂಗ್ರಹಕ್ಕಿಳಿದಿದ್ದರು ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಅಳಿಯನ ವಿರುದ್ಧ
ಪ್ರತಿ ದಿನ ಸಂಗ್ರಹವಾದ ಹಣವನ್ನು ಸಂಜಯನಗರದ ಮನೆಯಲ್ಲಿಟ್ಟು ಬಳಿಕ ಆ ಹಣವನ್ನು ದಾವಣಗೆರೆ ಜಿಲ್ಲೆಯ ತಮ್ಮ ಸ್ವಕ್ಷೇತ್ರ ಚನ್ನಗಿರಿಗೆ ಮಾಡಾಳು ವಿರೂಪಾಕ್ಷಪ್ಪ(Madalu virupakshappa) ಸಾಗಿಸುತ್ತಿದ್ದರು. ಈ ಹಣ ವಸೂಲಿಯಲ್ಲಿ ತಂದೆಗೆ ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿದ್ದ ಪ್ರಶಾಂತ್ ಮಾಡಾಳು ಸಾಥ್ ಕೊಟ್ಟಿದ್ದಾರೆ. ಕ್ರೆಸೆಂಟ್ ರಸ್ತೆಯಲ್ಲಿನ ಪ್ರಶಾಂತ್ ಖಾಸಗಿ ಕಚೇರಿಯಲ್ಲೇ ಬಹುತೇಕ ವ್ಯವಹಾರ ನಡೆದಿದ್ದು, ಆ ಕಚೇರಿಗೆ ಕೆಎಸ್‌ಡಿಎಲ್‌ನ ಗುತ್ತಿಗೆದಾರರು ಬ್ಯಾಗ್‌ನಲ್ಲಿ ಹಣ ತಂದು ಕೊಡುತ್ತಿದ್ದರು ಎಂದು ಮೂಲಗಳು ಹೇಳಿವೆ.
ಬೆಂಗಳೂರು: ಬೀಗ ಹಾಕಿದ ಮನೆಗಳಲ್ಲಿ ಚಿನ್ನ ದೋಚುತ್ತಿದ್ದ ನೇಪಾಳಿ ಗ್ಯಾಂಗ್
ಹೀಗೆ ಸಂಗ್ರಹಿಸಿದ್ದ 8.26 ಕೋಟಿ ರು ಹಣದಲ್ಲಿ ಸಂಜಯನಗರದ ಶಾಸಕರ ಮನೆಯಲ್ಲಿ 6.10 ಕೋಟಿ ರು, ಪ್ರಶಾಂತ್ ಕಚೇರಿಯಲ್ಲಿ 1.62 ಕೋಟಿ ಹಾಗೂ ಚನ್ನಗಿರಿ ಮನೆಯಲ್ಲಿ 16 ಲಕ್ಷ ರು ಹಣ ಪತ್ತೆಯಾಗಿದೆ. ಈಗ ಲಂಚ ನೀಡಿದ ಕಂಪನಿಗಳ ಮುಖ್ಯಸ್ಥರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ