'ಅವನೊಬ್ಬ ರೌಡಿ' ಅಂತಾ ಜನರೇ ಹೇಳ್ತಾರೆ: ಡಿಕೆ ಸುರೇಶ್ ವಿರುದ್ಧ ಆರ್ ಆಶೋಕ್ ವಾಗ್ದಾಳಿ 

Published : Apr 05, 2024, 09:27 PM IST
'ಅವನೊಬ್ಬ ರೌಡಿ' ಅಂತಾ ಜನರೇ ಹೇಳ್ತಾರೆ: ಡಿಕೆ ಸುರೇಶ್ ವಿರುದ್ಧ ಆರ್ ಆಶೋಕ್ ವಾಗ್ದಾಳಿ 

ಸಾರಾಂಶ

ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರೇ ಗೆಲ್ತಾರೆಂದು ಜನರು ಹೇಳುತ್ತಿದ್ದಾರೆ. ಕಾಂಗ್ರೆಸ್ ನವರ ಯೋಗ್ಯತೆಗೆ ಡಾ.ಮಂಜುನಾಥ್ ಅವರ ಬಗ್ಗೆ ಒಂದೇ ಒಂದು ಆಪಾದನೆ ತೋರಿಸಲಿ ಎಂದು ಡಿಕೆ ಬ್ರದರ್ಸ್ ವಿರುದ್ಧ ವಿಪಕ್ಷ ನಾಯಕ ಆರ್‌ ಅಶೋಕ್ ವಾಗ್ದಾಳಿ ನಡೆಸಿದರು.

ಬೀದರ್ (ಏ.5): ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರೇ ಗೆಲ್ತಾರೆಂದು ಜನರು ಹೇಳುತ್ತಿದ್ದಾರೆ. ಕಾಂಗ್ರೆಸ್ ನವರ ಯೋಗ್ಯತೆಗೆ ಡಾ.ಮಂಜುನಾಥ್ ಅವರ ಬಗ್ಗೆ ಒಂದೇ ಒಂದು ಆಪಾದನೆ ತೋರಿಸಲಿ ಎಂದು ಡಿಕೆ ಬ್ರದರ್ಸ್ ವಿರುದ್ಧ ವಿಪಕ್ಷ ನಾಯಕ ಆರ್‌ ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಬೀದರ್‌ನಲ್ಲಿ ನಡೆದ ಬಿಜೆಪಿ - ಜೆಡಿಎಸ್ ಸಮನ್ವಯ ಸಮಿತಿ ಸಭೆ ಮಾತನಾಡಿದ ಅವರು, ಡಿಕೆ ಸುರೇಶ್ ಬಗ್ಗೆ ಜನರೇ 'ರೌಡಿ ಅವನು' ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಡಿಕೆ ಬ್ರದರ್ಸ್ ದೇಶ ಒಡೆಯುವ ಮಾತಾಡ್ತಾರೆ. ಅಂಥವರನ್ನು ಜನರು ಒಪ್ಪುವುದಿಲ್ಲ. ದೇಶ ಒಡೆಯುವಂಥವರನ್ನ ತಿರಸ್ಕರಿಸಲು ಜನರು ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ಇದ್ದದ್ದು ಒಂದೇ ಸೀಟು ಈ ಬಾರಿ ಅದೂ ಕೂಡ ಕಷ್ಟ ಎಂದರು

 

ಪ್ರಿಯಾಂಕ್ ಬದಲು ಪ್ರಿಯಾಂಕಾ ಎಂದ ಆರ್ ಆಶೋಕ್ ಎಡವಟ್ಟು; ನಾನು ಪ್ರಿಯಾಂಕ್ ಎಂದ ಖರ್ಗೆ

ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಕಳೆದ ೧೦ ವರ್ಷದಲ್ಲಿ ಒಂದೇ ಒಂದು ರಜೆ ತೆಗೆದುಕೊಂಡಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದ ಅಡಳಿತದಲ್ಲಿ ೧೦ ವರ್ಷದಲ್ಲಿ ಕಲ್ಲಿದ್ದಲು, ೨ಜಿ, ೩ಜಿ ಸಾಲು ಸಾಲು ಹಗರಣಗಳು ನಡೆದಿದ್ದವು. ಹೀಗಾಗಿ ಕಾಂಗ್ರೆಸ್ ದೇಶಕ್ಕೆ ಬೇಕಿಲ್ಲ. ದೇಶಕ್ಕೆ ಮೋದಿ ಬೇಕು ಅಂತ ಜನರೇ ಹೇಳುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲಿ ಕಾಂಗ್ರೆಸ್ ಹುಳಿ ಹಿಂಡಿದರು. ಈಗ ನಮ್ಮ ಬಿಜೆಪಿ-ಜೆಡಿಎಸ್ ಮೈತ್ರಿ ಹಾಲು-ಜೇನಿನಂತಿದೆ. ಹೀಗಾಗಿ ಕಾಂಗ್ರೆಸ್ ಮಟ್ಟ ಹಾಕಲು ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲಾ ಸಭೆಗಳಲ್ಲೂ ಜೆಡಿಎಸ್ ಪಕ್ಷದವರು ಹೆಚ್ಚಿನ ಸಂಖ್ಯೆ ಕಾಣಿಸುತ್ತಿದ್ದಾರೆ ಎಂದರು.

 

ಡಿಕೆ ಬ್ರದರ್ಸ್‌ ಏನು ಸೇವೆ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತು: ಕುಮಾರಸ್ವಾಮಿ

ಈ ದುಷ್ಟ, ಭ್ರಷ್ಟ, ಮನೆಹಾಳ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ  ಬರಗಾಲ ಆರಂಭವಾಗಿದೆ. ರಾಜ್ಯದಲ್ಲಿ ಜನರು ಕರೆಂಟ್ ಇಲ್ಲ, ನೀರಿಲ್ಲ, ಮೇವಿಲ್ಲ ಅಂತಿದಾರೆ. ಟ್ಯಾಕ್ಸ್ ಅಲ್ಲ, ಇವರ ಬಳಿ ಮೀಟರ್, ಲಂಚ ಹೊಡೆಯುವಂತ ಮೀಟರ್ ಸರ್ಕಾರ ಇದು. ಇಂತಹ ಲೂಟಿ ಹೊಡೆಯುವಂತ ಸರ್ಕಾರ ತೆಗೆದು ಹಾಕುವಂತ ಸಮಯ ಈಗ ಬಂದಿದೆ ಎಂದರು. ಇದೇ ವೇಳೆ  ಸಚಿವ ರಾಜಣ್ಣ ವಾಗ್ದಾಳಿ ನಡೆಸಿದ ಆರ್‌ ಅಶೋಕ್, ಸಾಯುವ ವಯಸ್ಸು ಅಂತಾರೆ, ಈ ರಾಜಣ್ಣಗೆ ಮಾನಮರ್ಯಾದೆ ಇದೀಯಾ ಕುಮಾರಸ್ವಾಮಿಗೆ ಆಪರೇಷನ್ ಆಗಿಲ್ಲ ಅಂತಾ ಬಂಡಿಸಿದ್ದೇಗೌಡ ಹೇಳ್ತಾರೆ ಇವರಿಗೆ ಕಾಮನ್‌ಸೆನ್ಸ್ ಇದೆಯಾ? ಇವರೇನು ಕಾಂಪೌಂಡರ್? ನಮ್ಮ ಮೈತ್ರಿಯಿಂದಾಗಿ ಇವರಿಗೆ ಸೋಲಿನ ಭಯ ಶುರುವಾಗಿದೆ. ಸೋಲಿನ ಭೀತಿಯಿಂದ ದೇವೇಗೌಡರು, ಕುಮಾರಸ್ವಾಮಿಗೆ ಬೈಯುತ್ತಿದ್ದಾರೆ ಎಂದು ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!