ಬರ ಪರಿಹಾರ ಅನುದಾನಕ್ಕೆ ಸುಪ್ರೀಂ ಮೊರೆ ಹೋಗಿದ್ದು ನಾಚಿಕೆಗೇಡು: ರಾಧಾಮೋಹನ್ ದಾಸ್ ಅಗರ್ವಾಲ್ ಕಿಡಿ

By Ravi JanekalFirst Published Mar 26, 2024, 12:03 AM IST
Highlights

ಬರಗಾಲದ ಅನುದಾನ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮೊರೆ ಹೋಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ವಾಲ್ ಟೀಕಿಸಿದ್ದಾರೆ. 

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.26): ಬರಗಾಲದ ಅನುದಾನ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮೊರೆ ಹೋಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ವಾಲ್ ಟೀಕಿಸಿದ್ದಾರೆ. 

ಕಳೆದ 10 ವರ್ಷದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ ಹಾಗೂ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದಕ್ಕಿಂತ ಹಿಂದೆ ಎಷ್ಟು ಕೊಟ್ಟಿತ್ತು ಎಂಬುದನ್ನು ನೋಡಿ. ಆಗ ಕರ್ನಾಟಕ ರಾಜ್ಯವನ್ನು ಕಡೆಗಾಣಿಸಿದೆ ಎಂಬುದು ಗೊತ್ತಾಗುತ್ತದೆ. ಈ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಆ ನಂತರ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಏನಾಗುತ್ತೆ ನೋಡಿ. ಚುನಾವಣೆಕ್ಕೋಸ್ಕರ ಜನತೆಗೆ ಲಾಲಿ ಪಪ್ ತೋರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಇಂಡಿಯಾ ಒಕ್ಕೂಟದ ಕಾರಣಕ್ಕೋಸ್ಕರ ರಾಹುಲ್ ಗಾಂಧಿ ತಮಿಳುನಾಡಿಗೆ ನೀರು ಬಿಡಿಸಿದ್ದಾರೆ. ಇಂದು ಬೆಂಗಳೂರಿನ ಜನತೆಗೆ ಕುಡಿಯಲು ನೀರಿಲ್ಲ. ಕೃತಕ ನೀರಿನ ಅಭಾವ ಸೃಷ್ಟಿಯಾಗಲು ಕಾಂಗ್ರೆಸ್ ಕಾರಣ. ಒಂದೆಡೆ ದೇವರು ಬರ ಸೃಷ್ಟಿಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನ ರಾಹುಲ್ ಗಾಂಧಿ ಸೃಷ್ಟಿಸಿದ್ದಾರೆ ಎಂದು  ಹೇಳಿದ್ದಾರೆ. ಇನ್ನು ಇಂಡಿಯಾ ಕೂಟವು ಕೇಜ್ರಿವಾಲ್ ಪರವಾಗಿ ಇದೇ 31 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಧಾಮೋಹನ್ ದಾಸ್ ಅವರು ಭ್ರಷ್ಟರು ಭ್ರಷ್ಟರನ್ನು ಬೆಂಬಲ ಮಾಡದೆ ಇನ್ಯಾರು ಮಾಡ್ತಾರೆ. ಇಂಡಿಯ ಒಕ್ಕೂಟದಲ್ಲಿರುವ ಎಲ್ಲಾರೂ ಭ್ರಷ್ಟರೇ ಎಂದು ಕಾಂಗ್ರೆಸ್ ನ ಇಂಡಿಯಾ ಒಕ್ಕೂಟದ ವಿರುದ್ಧ ರಾಧಾಮೋಹನ್ ಅಗರ್ವಾಲ್ ವಾಗ್ದಾಳಿ ನಡೆಸಿದರು. 

ಬಿಜೆಪಿಗೆ ಯಾರೇ ಸೇರ್ಪಡೆಗೊಂಡರೂ 'ವಾಷಿಂಗ್ ಪೌಡರ್ ನಿರ್ಮಾ' ಆಗ್ಬಿಡ್ತಾರೆ: ಸಚಿವ ಸಂತೋಷ್ ಲಾಡ್ ವ್ಯಂಗ್ಯ

ಅವರೆಲ್ಲಾ ಕೇಜ್ರಿವಾಲ್ ಗೆ ಬೆಂಬಲ ನೀಡ್ತಾರೆ, ಕೇಜ್ರಿವಾಲ್ ಬಂಧನ ಮಾಡಿದ್ದು ಇಡಿ ಹೊರತು ಬಿಜೆಪಿಯಲ್ಲ. ಅವರಿಗೆ ಜಾಮೀನು ಬೇಕಾದರೆ ಈ ಬಗ್ಗೆ ಸುಪ್ರಿಂ ಕೋರ್ಟ್ ಗೆ ಅರ್ಜಿ ಹಾಕಬೇಕು. ಸುಪ್ರೀಂ ಕೋರ್ಟ್ ಬೇಲ್ ಕೊಡಬೇಕೆ ವಿನಃ ಬಿಜೆಪಿ ಕೊಡಲ್ಲ. ಬಿಜೆಪಿ ವಿರುದ್ದ ಪ್ರತಿಭಟನೆ ಮಾಡೋದಲ್ಲ ಎಂದು ರಾಧಮೋಹನ್ ಅಗರವಾಲ್ ಕಿಡಿಕಾರಿದ್ದಾರೆ.

 ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಒಕ್ಕಲಿಗ ಜಾತಿ ಕಾರ್ಡ್ ಬಳಸುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯ ಸರ್ಕಾರ ನಡೆಯುತ್ತಿರುವುದು ಮುಸ್ಲಿಂರಿಂದ ಮತ್ತು ಮುಸ್ಲಿಂರಿಗಾಗಿ ಸರ್ಕಾರ ನಡೆಯುತ್ತಿದೆ. ಇದೆಲ್ಲವನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ, ನಿಮಗೆ ಜನರು ಬುದ್ದಿ ಕಲಿಸಲಿದ್ದಾರೆ ಎಂದು ರಾಧಾಮೋಹನ್ ದಾಸ್ ಅಗರ್ವಾಲ್ ಕಿಡಿಕಾರಿದರು. 

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲು ಇದೇ ಕಾರಣ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದರು. ಇದಕ್ಕೆಲ್ಲ ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ರಾಜಕಾರಣವೇ ಕಾರಣ ಎಂದರು. ಇದೇ ವೇಳೆ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಪ್ರತಾಪ್ ಸಿಂಹ 10 ರ್ಷದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಆದರೆ ಪಕ್ಷದಲ್ಲಿ ಬದಲಾವಣೆ ಅನ್ನುವುದು ನಿರಂತರವಾದದ್ದು. ಮತ್ತಷ್ಟು ಅಭಿವೃದ್ಧಿ ಕೆಲಸ ಆಗಬೇಕಾಗಿರುವುದರಿಂದ ಯದುವೀರ್ ಅವರನ್ನು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದರು.

ಕನಕಪುರದಲ್ಲಿ ಧಮ್ಕಿ, ಬೆದರಿಕೆ ಹೆಚ್ಚು ದಿನ ಇರೊಲ್ಲ: ಡಿಕೆ ಬ್ರದರ್ಸ್‌ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್

 ಪ್ರತಾಪ್ ಸಿಂಹ ಬದಲಾವಣೆ ಮಾಡಲು ನಿರ್ಧಿಷ್ಟವಾದ ಯಾವುದೇ ಕಾರಣಗಳಿಲ್ಲ. ಸಾಕಷ್ಟು ಕಡೆಗಳಲ್ಲಿ ಈ ರೀತಿ ಬದಲಾವಣೆ ಮಾಡಲಾಗಿದೆ. ಬದಲಾವಣೆ ಎಂಬುದು ಪಕ್ಷದ ನಿರಂತರ ಪ್ರಕ್ರಿಯೆ. ಆದರೆ ಯದುವೀರ್ ಅವರು ಮತ್ತಷ್ಟು ಉತ್ತಮ ಅಭ್ಯರ್ಥಿ ಆಗಿದ್ದಾರೆ. ಪ್ರತಾಪ್ ಸಿಂಹ ಅವರು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದಕ್ಕಾಗಿಯೇ ಅವರಿಗೆ  ಪಕ್ಷದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಉತ್ತಮ ಸ್ಥಾನಮಾನ ಅವರಿಗೆ ಸಿಗಲಿದೆ. ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬಾ ಹತ್ತಿರ ಇದ್ದಾರೆ ಎಂದು ರಾಧಮೋಹನ್ ದಾಸ್ ಅಗರ್ವಾಲ್ ಹೇಳಿದರು.

click me!