ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಐಪಿಎಲ್ 2024ರ ಪಂಜಾಬ್ ಕಿಂಗ್ಸ್-ರಾಯಲ್ ಚಾಲೆಂಜರ್ಸ್ ನಡುವಿನ ರೋಚಕ ಪಂದ್ಯ ನಡೆಯಿತು. ಪಂದ್ಯದ ವೇಳೆ ಭದ್ರತಾ ವೈಫಲ್ಯದಿಂದ ಅಭಿಮಾನಿಯೋರ್ವ ಕ್ರೀಡಾಂಗಣಕ್ಕೆ ನುಗ್ಗಿ ವಿರಾಟ್ ಕೋಹ್ಲಿ ಕಾಲು ಹಿಡಿದ ಘಟನೆ ನಡೆದಿದೆ.
ಬೆಂಗಳೂರು (ಮಾ.25): ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2024ರ ಪಂಜಾಬ್ ಕಿಂಗ್ಸ್-ರಾಯಲ್ ಚಾಲೆಂಜರ್ಸ್ ನಡುವೆ ರೋಚಕ ಪಂದ್ಯ ನಡೆಯಿತು. ಪಂದ್ಯದ ವೇಳೆ ಭದ್ರತಾ ವೈಫಲ್ಯದಿಂದಾಗಿ ಅಭಿಮಾನಿಯೋರ್ವ ಕ್ರೀಡಾಂಗಣಕ್ಕೆ ನುಗ್ಗಿ ವಿರಾಟ್ ಕೋಹ್ಲಿ ಕಾಲು ಹಿಡಿದ ಘಟನೆ ನಡೆಯಿತು.
ವಿರಾಟ್ ಕೊಹ್ಲಿ ಬ್ಯಾಟಿಂಗ್ ಬರುತ್ತಿದ್ದಂತೆ ಕ್ರೀಸ್ ಗೆ ನುಗ್ಗಿ ಬಂದ ಅಭಿಮಾನಿ ಕೊಹ್ಲಿ ತಬ್ಬಿ ಕಾಲು ಹಿಡಿದು ಕುಳಿತ ಅಭಿಮಾನಿ. ಬಳಿಕ ಸ್ಥಳಕ್ಕೆ ಧಾವಿಸಿ ಬಂದ ಭದ್ರತಾಕ ಸಿಬ್ಬಂದಿ ಅಭಿಮಾನಿಯನ್ನು ವಶಕ್ಕೆ ಪಡೆದರು.. ಕ್ರೀಡಾಂಗಣದಲ್ಲಿ ಹೈ ಸೆಕ್ಯೂರಿಟಿ ಇದ್ದರೂ ಒಳನುಗ್ಗಿದ ಅಭಿಮಾನಿ ಒಂದು ಕ್ಷಣ ಆತಂಕಕ್ಕೆ ಕಾರಣವಾಯಿತು.
ಈ ಹಿಂದೆಯೂ ವಿರಾಟ್ ಕೊಹ್ಲಿಗೆ ಹತ್ತಿರವಾಗಲು ಅಭಿಮಾನಿಗಳು ಭದ್ರತೆಯನ್ನು ಉಲ್ಲಂಘಿಸಿದ ಹಲವಾರು ನಿದರ್ಶನಗಳು ನಡೆದಿವೆ. ಇದೀಗ ವಿರಾಟ್ ಕೊಹ್ಲಿ ಆರ್‌ಸಿಬಿ ಪಂದ್ಯದ ವೇಳೆ ಬ್ಯಾಟ್ ಮಾಡಲು ಬಂದಾಗ ಮತ್ತೊಮ್ಮೆ ಘಟನೆ ಮರುಕಳಿಸಿದೆ.
ವಿರಾಟ ರೂಪ, ಕಾರ್ತಿಕ್ ಸಿಕ್ಸರ್ ಆಟಕ್ಕೆ ಪಂಜಾಬ್ ಧೂಳೀಪಟ, ಆರ್‌ಸಿಬಿ 4 ವಿಕೆಟ್ ಗೆಲುವು!
ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿದೆ ಭದ್ರತೆ 1 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ರೀಡಾಂಗಣ ಮಾತ್ರವಲ್ಲದೇ ಎಂಜಿ ರೋಡ್ ಬ್ರಿಗೇಡ್ ರಸ್ತೆ ಸುತ್ತಮುತ್ತಲೂ ಭದ್ರತೆ ಕೈಗೊಳ್ಳಲಾಗಿದೆ. ಕ್ರೀಡಾಂಗಣಕ್ಕೆ ಬರುವವರನ್ನು 300 ಜನ ಸಿಬ್ಬಂದಿ ಯಿಂದ ಪರೀಕ್ಷೆಗೆ ಒಳಪಡಿಸಲಾಗಿದೆ. 6 ವಾಚ್ ಟವರ್ ಗಳನ್ನ ಮಾಡಲಾಗಿದೆ. ಎರಡು ಜಂಕ್ಷನ್ ನಲ್ಲಿ ಮೊಬೈಲ್ ಕಮಾಂಡ್ ಸೆಂಟರ್ ನಿರ್ಮಾಣ, ನಾಲ್ಕು ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಇಷ್ಟೆಲ್ಲ ಟೈಟ್ ಸೆಕ್ಯೂರಿಟಿ ಇದ್ದಾಗಲೂ ಕ್ರೀಡಾಂಗಣಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲು ಹಿಡಿದಿರುವುದು ಭದ್ರತಾ ವೈಫಲ್ಯ ಎದ್ದು ಕಾಣಿಸಿದೆ.