10-12 ದಿನದಲ್ಲಿ ಇನ್ನೊಂದು ಪ್ಯಾಕೇಜ್‌: ಸಿಎಂ ಬಿಎಸ್‌ವೈ!

By Kannadaprabha NewsFirst Published May 25, 2021, 7:26 AM IST
Highlights

* ಕೋವಿಡ್‌ ನಿಗ್ರಹಕ್ಕಾಗಿ ಸೆಮಿ ಲಾಕ್‌ಡೌನ್‌ ವಿಧಿಸಿರುವ ಹಿನ್ನೆಲೆ

* 10-12 ದಿನದಲ್ಲಿ ಇನ್ನೊಂದು ಪ್ಯಾಕೇಜ್‌: ಸಿಎಂ ಬಿಎಸ್‌ವೈ

* ಇನ್ನೂ ಕೆಲವು ವರ್ಗಗಳಿಗೆ ನೆರವಾಗಲು ಚಿಂತನೆ

ಬೆಂಗಳೂರು(ಮೇ.25): ಕೋವಿಡ್‌ ನಿಗ್ರಹಕ್ಕಾಗಿ ಸೆಮಿ ಲಾಕ್‌ಡೌನ್‌ ವಿಧಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಇತರ ಕೆಲವು ವರ್ಗಗಳಿಗೆ ನೆರವು ನೀಡಲು ಮತ್ತೊಂದು ಪ್ಯಾಕೇಜ್‌ ಘೋಷಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗಂಭೀರ ಚಿಂತನೆ ನಡೆಸಿದ್ದಾರೆ.

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಂಕಷ್ಟದಲ್ಲಿರುವವರಿಗಾಗಿ 1250 ಕೋಟಿ ರು.ಗಳ ಪ್ಯಾಕೇಜ್‌ ನೆರವನ್ನು ಪ್ರಕಟಿಸಿದ್ದೇನೆ. ಇನ್ನೂ ಕೆಲವು ವರ್ಗಗಳ ಜನರಿಗೆ ಪ್ಯಾಕೇಜ್‌ ನೆರವು ಸಿಕ್ಕಿಲ್ಲ. ಅವರ ಬಗ್ಗೆಯೂ ಚಿಂತನೆ ಮಾಡುತ್ತಿದ್ದೇನೆ. ಮುಂದಿನ 10ರಿಂದ 12 ದಿನಗಳಲ್ಲಿ ಅವರಿಗೂ ಪ್ಯಾಕೇಜ್‌ ನೀಡಲು ಪ್ರಯತ್ನಿಸುತ್ತೇನೆ ಎಂದರು.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಸರ್ಕಾರದ ಹಣಕಾಸಿನ ಇತಿಮಿತಿಯಲ್ಲಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗ ಯಾರಿಗೆ ಏನು ಮಾಡಿದರು ಎಂಬುದು ಜಗತ್ತಿಗೇ ಗೊತ್ತಿದೆ ಎಂದು ತೀಕ್ಷ್ಣವಾಗಿ ಹೇಳಿದರು.

ಸರ್ಕಾರದ ಹಣಕಾಸಿನ ಇತಿಮಿತಿಯಲ್ಲಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗ ಯಾರಿಗೆ ಏನು ಮಾಡಿದರು ಎಂಬುದು ಜಗತ್ತಿಗೇ ಗೊತ್ತಿದೆ.

- ಯಡಿಯೂರಪ್ಪ, ಮುಖ್ಯಮಂತ್ರಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!