
ಬೆಂಗಳೂರು (ಏ. 19): ‘ನಾನು ಚೀನಾಕ್ಕೆ ಹೋಗಿಯೇ ಇಲ್ಲ. ನನ್ನ ಬಳಿ ವಾಹನ ಚಾಲನಾ ಪರವಾನಗಿ ಹಾಗೂ ಆಧಾರ್ ಗುರುತಿನ ಚೀಟಿ ಹೊರತುಪಡಿಸಿ, ವಿದೇಶಕ್ಕೆ ಪ್ರಯಾಣಿಸಲು ಅಗತ್ಯವಿರುವ ಪಾಸ್‌ಪೋರ್ಟ್ ಸಹ ಇಲ್ಲ’ ಹೀಗೆಂದು ಮೈಸೂರಿನ ಜ್ಯುಬಿಲೆಂಟ್ ಲೈಫ್ ಸೈನ್ಸಸ್ ಲಿ. ಕಂಪನಿಯ ಮೊದಲ ಕೊರೋನಾ ಸೋಂಕಿತ ವ್ಯಕ್ತಿ ಪ್ರಶ್ನಿಸಿದ್ದಾರೆ.
ಗದಗನಲ್ಲಿ 3ನೇ ಕೊರೋನಾ ಪ್ರಕರಣ: ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟ್ ಆರಂಭ
ಸದ್ಯ ಕೊರೋನಾ ಸೋಂಕಿನಿಂದ ಸುಧಾರಿಸಿಕೊಂಡು ಕ್ವಾರಂಟೈನ್‌ನಲ್ಲಿರುವ ಕರ್ನಾಟಕದ 52ನೇ ರೋಗಿಯಾದ 35 ವರ್ಷದ ಈ ವ್ಯಕ್ತಿ ಮಾಧ್ಯಮವೊಂದರ ಜೊತೆ ಶನಿವಾರ ಮಾತನಾಡಿದ್ದಾರೆ. ‘ಪ್ರತೀ ದಿನ ಕಚೇರಿಯ ವಾಹನದಲ್ಲೇ ಕೆಲಸಕ್ಕೆ ಹೋಗುತ್ತಿದ್ದೆ. ನನಗೆ ಮದ್ಯಪಾನ, ಧೂಮಪಾನದ ಅಭ್ಯಾಸವಿಲ್ಲ. ಜೊತೆಗೆ ಯಾವುದೇ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ. ಆದರೆ, ಈ ಸೋಂಕು ನನಗೆ ಹೇಗೆ ತಗುಲಿತು ಎಂಬುದು ಅರಿವಿಗೆ ಬಂದಿಲ್ಲ’ ಎಂದಿದ್ದಾರೆ. ಇನ್ನು ಚೀನಾದಿಂದ ಸರಕು ಪೂರೈಕೆಯಾಗಿದೆಯೇ ಎಂಬ ಪ್ರಶ್ನೆಗೆ, ಸಂಸ್ಥೆಗೆ ಪೂರೈಕೆಯಾದ ಸರಕುಗಳ ಜೊತೆ ತಾವು ಸಂಪರ್ಕಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಸೋಂಕಿತ ವ್ಯಕ್ತಿಗೆ ಪಾಸ್‌ಪೋರ್ಟ್ ಇಲ್ಲದಿರುವುದನ್ನು ಮೈಸೂರು ಪೊಲೀಸರು ದೃಢಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ