ಚಾಮರಾಜನಗರ: ಅನ್ನದಾತರಿಗೆ ಲೋಡ್ ಶೆಡ್ಡಿಂಗ್ ಶಾಕ್;ಅತ್ತ ಮಳೆ ಇಲ್ಲ ಇತ್ತ ಕರೆಂಟು ಇಲ್ಲ!

Published : Oct 09, 2023, 08:18 PM IST
 ಚಾಮರಾಜನಗರ: ಅನ್ನದಾತರಿಗೆ ಲೋಡ್ ಶೆಡ್ಡಿಂಗ್ ಶಾಕ್;ಅತ್ತ ಮಳೆ ಇಲ್ಲ ಇತ್ತ ಕರೆಂಟು ಇಲ್ಲ!

ಸಾರಾಂಶ

ಚಾಮರಾಜನಗರ ಜಿಲ್ಲೆಯ ಅನ್ನದಾತರಿಗೆ ಲೋಡ್ ಶೆಡ್ಡಿಂಗ್ ಶಾಕ್ ಎದುರಾಗಿದೆ. ಕಳೆದೊಂದು  ವಾರದಿಂದ  ರೈತರ  ಪಂಪ್  ಸೆಟ್ ಗಳಿಗೆ  ವಿದ್ಯುತ್  ಪೂರೈಕೆಯಲ್ಲಿ  ಭಾರೀ ವ್ಯತ್ಯಯವುಂಟಾಗಿದೆ. ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.ಮೊದ್ಲೇ ವರುಣನ ಕೃಪೆಯಿಲ್ಲದೆ ಕಂಗೆಟ್ಟ ಅನ್ನದಾತನಿಗೆ ವಿದ್ಯುತ್ ಶಾಕ್ ನಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನೋವಂತಾಗ್ತಿದೆ. 

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್,  ಚಾಮರಾಜನಗರ.

ಚಾಮರಾಜನಗರ (ಅ.9): ಚಾಮರಾಜನಗರ ಜಿಲ್ಲೆಯ ಅನ್ನದಾತರಿಗೆ ಲೋಡ್ ಶೆಡ್ಡಿಂಗ್ ಶಾಕ್ ಎದುರಾಗಿದೆ. ಕಳೆದೊಂದು  ವಾರದಿಂದ  ರೈತರ  ಪಂಪ್  ಸೆಟ್ ಗಳಿಗೆ  ವಿದ್ಯುತ್  ಪೂರೈಕೆಯಲ್ಲಿ  ಭಾರೀ ವ್ಯತ್ಯಯವುಂಟಾಗಿದೆ. ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.ಮೊದ್ಲೇ ವರುಣನ ಕೃಪೆಯಿಲ್ಲದೆ ಕಂಗೆಟ್ಟ ಅನ್ನದಾತನಿಗೆ ವಿದ್ಯುತ್ ಶಾಕ್ ನಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನೋವಂತಾಗ್ತಿದೆ. 

ಅತ್ತ ಮಳೆ ಇಲ್ಲ, ಇತ್ತ ಕರೆಂಟೂ ಇಲ್ಲ.ಬೆಳೆಗೆ ನೀರುಣಿಸಲು ಅನ್ನದಾತನ ಪರದಾಟ ನಡೆಸುವಂತಾಗಿದೆ. ಪಂಪ್ ಸೆಟ್ಗಳಿಗೆ 7 ಗಂಟೆ ತ್ರೀ ಫೇಸ್ ವಿದ್ಯುತ್ ಕೊಡುವುದಾಗಿ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಅದರೆ ಚಾಮರಾಜನಗರ ಜಿಲ್ಲೆಯಲ್ಲಿ 7 ಗಂಟೆ ಇರಲಿ, 2 ಗಂಟೆಯು ತ್ರೀಫೇಸ್  ಕರೆಂಟ್ ನೀಡದ ಚೆಸ್ಕಾಂ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಯಾವುದೇ ಮುನ್ಸೂಚನೆ ನೀಡದೆ ಕಳೆದೊಂದು ವಾರದಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಈಗಾಗ್ಲೇ ಜಿಲ್ಲೆಯಲ್ಲಿರುವ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದ ವೇಳೆಯೂ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ಕೊಟ್ಟಿದ್ದರು. ಆದ್ರೆ ವಿದ್ಯುತ್ ಅಭಾವದಿಂದಾಗಿ ಚೆಸ್ಕಾಂ ವಿದ್ಯುತ್ ಪೂರೈಕೆ ಮಾಡಲಾಗ್ತಿಲ್ಲ.ಇದರಿಂದ ಬೆಳೆಗಳು ಒಣಗುವ ಪರಿಸ್ಥಿತಿ ಬಂದಿದೆ ಅಂತಾ ರೈತರು ಆಕ್ರೋಶ ಹೊರಹಾಕುತ್ತಾರೆ.

ಕರ್ನಾಟಕದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್, ಸಚಿವ ದರ್ಶನಾಪುರ ಹೇಳಿದ್ದಿಷ್ಟು

ಇನ್ನೂ ಜಿಲ್ಲೆಯಲ್ಲಿ ರೈತರ 74 ಸಾವಿರಕ್ಕೂ ಹೆಚ್ಚು ಪಂಪ್ ಸೆಟ್ಗಳಿದೆ. ಪಂಪ್ಸೆಟ್ ಅವಂಬಿಸಿ  ಬಾಳೆ, ಕಬ್ಬು, ಅರಿಶಿನ, ತರಕಾರಿ ಮೊದಲಾದ ಬೆಳೆಗಳನ್ನು ಅನ್ನದಾತರು ಬೆಳೆದಿದ್ದಾರೆ. ಈಗ ಬೆಳೆದು ನಿಂತ ಬೆಳೆಗೆ ಮಳೆಯು ಇಲ್ಲ, ಅತ್ತ ಪಂಪ್ಸೆಟ್ ಮೂಲಕ ನೀರುಣಿಸಲು ಕರೆಂಟು ಇಲ್ಲ ಅಂತಿದ್ದಾರೆ. ಇನ್ನೂ ಅಧಿಕಾರಿಗಳ ಬಗ್ಗೆ ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿದ್ರೆ ಎರಡು ದಿನಗಳಿಂದಷ್ಟೇ ಸಮಸ್ಯೆಯಾಗಿದೆ. ಮಳೆ ಕಡಿಮೆ ಹಾಗೂ ವಿದ್ಯುತ್ ಕೊರತೆ ಹಿನ್ನಲೆಯಲ್ಲಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕೊಡಲಾಗ್ತಿಲ್ಲ ಅಂತಾ ಮಾಹಿತಿ ಕೊಡ್ತಿದ್ದಾರೆ. ಆದ್ರೆ ರೈತರು ಮಾತ್ರ ಕರೆಂಟ್ ಕೊಡದೆ ಕೈ ಕೊಟ್ಟ ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ವಿಷ ಕುಡಿಯುವ ಪರಿಸ್ಥಿತಿ ಉದ್ಬವಾಗುತ್ತೆ ಅಂತಾರೆ ಅನ್ನದಾತರು.

ಒಟ್ನಲ್ಲಿ  ಜಿಲ್ಲೆಯ  ಅನ್ನದಾತರು  ಮಳೆ ಇಲ್ಲದೇ ಮೊದ್ಲೇ ಕಂಗೆಟ್ಟಿದ್ದಾರೆ. ಇದೀಗಾ ಗಾಯದ ಮೇಲೆ ಬರೆ ಅನ್ನುವಂತೆ ಪಂಪ್ ಸೆಟ್ ಗಳಿಗೆ 7 ಗಂಟೆ ಬದಲು 2 ಗಂಟೆಯಷ್ಟೇ ವಿದ್ಯುತ್ ಪೂರೈಕೆಯಾಗ್ತಿದೆ.ಇನ್ನೂ ಮುಂದಿನ ದಿನಗಳಲ್ಲೂ ವಿದ್ಯುತ್ ಪೂರೈಕೆ ಇಲ್ಲದಿದ್ರೆ ಅನ್ನದಾತನಿಗೆ ಸಂಕಷ್ಟ ಎದುರಾಗಲಿದೆ.. 

ಮಳೆ ಬಾರದಿದ್ರೂ ಲೋಡ್‌ ಶೆಡ್ಡಿಂಗ್‌ ಮಾಡೊಲ್ಲ: ಪ್ರತಿನಿತ್ಯ 40 ಕೋಟಿ ರೂ. ವಿದ್ಯುತ್‌ ಖರೀದಿ ಮಾಡಲಾಗ್ತಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದ ಜನರಿಗೆ ಶೀಘ್ರದಲ್ಲೇ ಮತ್ತೊಂದು ಹೊಡೆತ, ಸೈಟ್, ಮನೆ, ಫ್ಲ್ಯಾಟ್ ಖರೀದಿಸುವ ಕನಸು ಕಂಡವರಿಗೆ ಶಾಕ್!
Karnataka News Live: ರಾಜ್ಯದ ಜನರಿಗೆ ಶೀಘ್ರದಲ್ಲೇ ಮತ್ತೊಂದು ಹೊಡೆತ, ಸೈಟ್, ಮನೆ, ಫ್ಲ್ಯಾಟ್ ಖರೀದಿಸುವ ಕನಸು ಕಂಡವರಿಗೆ ಶಾಕ್!