ಕಳೆದ ಮೂರ್ನಾಲ್ಕು ದಿನಗಳಿಂದ ಕೇಂದ್ರ ಬರ ಅಧ್ಯಯನ ತಂಡವು ಕರ್ನಾಟಕದಲ್ಲಿ ಬರಪೀಡಿತ ಪ್ರದೇಶಗಳ ಪರಿಶೀಲನೆ ಪೂರ್ಣಗೊಳಿಸಿದೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಬಿಡುಗಾಗಿ ಬೆನ್ನುಬಿದ್ದಿದೆ.
ಬೆಂಗಳೂರು (ಅ.09): ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲ ಆವರಸಿದ್ದು, ಬರ ಅಧ್ಯಯನ ನಡೆಸುವಂತೆ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿ ಮೇರಿಗೆ ರಾಜ್ಯಕ್ಕೆ ಬರ ಅಧ್ಯಯನ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ನಮ್ಮ ವರದಿ ವಸ್ತುಸ್ಥಿತಿಯಿಂದ ಕೂಡಿದೆ ಎಂಬ ನಂಬಿಕೆ ಅವರಿಗೆ ಬಂದಿದ್ದು, ಅತಿಸಣ್ಣ ರೈತರ ಅಂಕಿ ಅಂಶದ ಬಗ್ಗೆ ಕೇಳಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಅವರು, ರಾಜ್ಯದ ಬರ ಪರಿಸ್ಥಿತಿಯ ಅಧ್ಯಯನ ಮಾಡಿದ ಕೇಂದ್ರ ಬರ ಅಧ್ಯಯನ ತಂಡವು ಪರಿಶೀಲನೆ ಕಾರ್ಯ ಪೂರ್ಣಗೊಳಿಸಿದೆ. ನಾವು ಕೊಟ್ಡ ವರದಿ ವಾಸ್ತವಾಗಿದೆ ಎಂದು ಕೇಂದ್ರ ಬರ ಅಧ್ಯಯನ ತಂಡಕ್ಕೆ ಅನ್ನಿಸಿದೆ. ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ ಎಂಬ ಅಭಿಪ್ರಾಯ ಅವರಿಗೂ ಬಂದಿದೆ. ನಂತರ, ಅತಿಸಣ್ಣ ರೈತರ ಅಂಕಿ ಅಂಶದ ಬಗ್ಗೆ ಕೇಳಿದ್ದಾರೆ. ಮುಂದಿನ ವಾರ ನಾವು ಆ ಅಂಕಿ ಅಂಶ ಕೊಡಲಿದ್ದೇವೆ ಎಂದು ತಿಳಿಸಿದರು.
ಬಾಲಸೋರ್ ರೈಲು ದುರಂತ: 28 ಶವಗಳ ಗುರುತು ಪತ್ತೆಯಾಗದೇ, ರೈಲ್ವೆ ಇಲಾಖೆಯಿಂದ ಅಂತ್ಯಕ್ರಿಯೆ ಮಾಡಲು ತೀರ್ಮಾನ
ಇನ್ನು ರಾಜ್ಯಕ್ಕೆ ನರೇಗಾ ಉದ್ಯೋಗ ಯೋಜನೆಯ ಅನುದಾನ ಬಿಡುಗಡೆ ಮಾಡುವುದು ಬಾಕಿ ಇದೆ. ಬಾಕಿ ಇರುವ ನರೇಗಾ ಕೂಲಿ ಹಣ ಬಿಡುಗಡೆ ಮಾಡುವಂತೆ ಕೇಂದ್ರದ ಜೊತೆ ಮಾತನಾಡಬೇಕು ಎಂದು ತಿಳಿಸಲಾಗಿದೆ. ಬರಗಾಲವಿದೆ ಈ ಸಮಯದಲ್ಲಿ ಬಾಕಿ ಇರಿಸಿಕೊಂಡರೆ ಸಮಸ್ಯೆ ಆಗಲಿದೆ. 475 ಕೋಟಿ ರೂ. ಬಾಕಿ ಇದೆ. ನಾವು ಆದಷ್ಟು ಬೇಗ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಈಗಿರುವ ಬರ ತಾಲ್ಲೂಕುಗಳ ಜೊತೆ 21 ತಾಲ್ಲೂಕುಗಳಲ್ಲಿ ಗ್ರೌಂಡ್ ವೆರಿಫಿಕೆಷನ್ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
Bengaluru: ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮೂರು ವರ್ಷದ ಮಗು ಬಲಿ
ಕೇಂದ್ರದಿಂದ ಶೀಘ್ರ ಅನುದಾನ ನಿರೀಕ್ಷೆ: ಕೇಂದ್ರ ಬರ ಅಧ್ಯಯನ ತಂಡವು ಮುಂದಿನ ಒಂದು ವಾರದಲ್ಲಿ ರಾಜ್ಯ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ. ಇದಾದ ನಂತರ, ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸುತ್ತೆ ಅಂತ ನಂಬಿಕೆ ಇದೆ. ಇವತ್ತು ಕೇಂದ್ರಕ್ಕೆ ಪತ್ರ ಬರೆದು ಕ್ಯಾಬಿನೆಟ್ ಸಬ್ ಕಮಿಟಿ ಭೇಟಿ ಮಾಡಲು ಸಚಿವರು ಅವಕಾಶ ಕೊಡಬೇಕು ಎಂದು ಮನವಿ ಮಾಡುತ್ತೇವೆ. ಗೃಹ ಸಚಿವ ಅಮಿತ್ ಷಾ ಮತ್ತು ಕೃಷಿ ಸಚಿವರಿಗೆ ಪತ್ರ ಬರೆಯುತ್ತೇವೆ. ಅದಷ್ಟು ಬೇಗ ಹಣ ಬಿಡುಗಡೆ ಮಾಡಿ ಎಂದು ಕೇಳಲು ಅವಕಾಶಕ್ಕಾಗಿ ಪತ್ರ ಬರೆಯುತ್ತೇವೆ ಎಂದು ಮಾಹಿತಿ ನೀಡಿದರು.