ಸಿಎಂ ಸಿದ್ದರಾಮಯ್ಯನವರು ಜಾತಿ ಆಧಾರದ ಮೇಲೆ ಏನೂ ಮಾಡೋಕೆ ಆಗಲ್ಲ. ಅವಕಾಶ ಬಂದಾಗ ಲಿಂಗಾಯತರು ಕೂಡ ಸಿಎಂ ಆಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ದಾವಣಗೆರೆ (ಅ.1): ಸಿಎಂ ಸಿದ್ದರಾಮಯ್ಯನವರು ಜಾತಿ ಆಧಾರದ ಮೇಲೆ ಏನೂ ಮಾಡೋಕೆ ಆಗಲ್ಲ. ಅವಕಾಶ ಬಂದಾಗ ಲಿಂಗಾಯತರು ಕೂಡ ಸಿಎಂ ಆಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇಂದು ದಾವಣಗೆರೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ, ಬೊಮ್ಮಯಿ ಸಿಎಂ ಆಗಿದ್ದಾಗ ಈ ಜಾತಿ ವಿಚಾರ ಬರಲಿಲ್ಲ. ಆದರೆ ಸಿದ್ದರಾಮಯ್ಯ ಸಿಎಂ ಆದಾಗ ಜಾತಿ ವಿಚಾರ ಬಂದಿದೆ. ಶಾಮನೂರು ಶಿವಶಂಕರಪ್ಪನವರು ಹಿರಿಯರು. ಅವರು ಸರ್ಕಾರದಲ್ಲಿ ಬಂದು ರಕ್ಷಣೆ ಮಾಡುವ ಕೆಲಸ ಮಾಡಬೇಕು. ಸಿಎಂ ಜೊತೆ ಮಾತನಾಡಿ ಅವರು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇನ್ನು ಎಸ್ಟಿ ಸಮಾಜದವರನ್ನು ಡಿಸಿಎಂ ಮಾಡೋ ವಿಚಾರ ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದರು.
ಮೋಡ ಬಿತ್ತನೆ ಕನಸು ಈಡೇರಿಕೆ: ಸಚಿವ ಸತೀಶ ಜಾರಕಿಹೊಳಿ ಹರ್ಷ
ಇನ್ನು ಓರ್ವ ಸ್ವಾಮೀಜಿ, ಸತೀಶ್ ಜಾರಕಿಹೊಳಿ ಸೇರಿದಂತೆ ಮೂವರು ಸಚಿವರುಗಳಿಗೆ ಅನಾಮಿಕನಿಂದ ಬೆದರಿಕೆ ಪತ್ರಗಳು ಬಂದ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಪತ್ರಗಳು ಬರುತ್ತಿರುತ್ತವೆ ಅದಕ್ಕೆ ತಲೆಕೆಡಿಸಿಕೊಳ್ಳಬಾರದು ಎಂದರು.
ಉಪಮುಖ್ಯಮಂತ್ರಿ ಸ್ಥಾನ ನೀಡಿದ್ರೆ ನಾ ಬೇಡಾ ಅಂತೀನಾ?: ಸತೀಶ್ ಜಾರಕಿಹೊಳಿ
ನಿಜಗುಣಾನಂದ ಸ್ವಾಮೀಜಿ, ಸಚಿವ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೆಸರನ್ನು ಉಲ್ಲೇಖಿಸಿ ಜೀವ ಬೆದರಿಕೆಯೊಡ್ಡಿರುವ ಅನಾಮಿಕ.