ಜೆಡಿಎಸ್-ಬಿಜೆಪಿ ಮೈತ್ರಿ; ಬಿಡದಿ ತೋಟದ ಮನೆಯಲ್ಲಿ ಅಸಮಾಧಾನಿತರೊಂದಿಗೆ ದೊಡ್ಡಗೌಡರು ಸಭೆ

By Ravi JanekalFirst Published Oct 1, 2023, 6:05 PM IST
Highlights

ಜೆಡಿಎಸ್ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ.  ಅಸಮಾಧಾನ ಶಮನಗೊಳಿಸಲು ಅಖಾಡಕ್ಕಿಳಿದಿರುವ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಇಂದು ಬಿಡದಿಯ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಅಸಮಾಧಾನಿತರೊಂದಿಗೆ ವರಿಷ್ಠರು ಚರ್ಚೆ ನಡೆಸಿದರು.

ಬೆಂಗಳೂರು (ಅ.1): ಜೆಡಿಎಸ್ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. 

 ಅಸಮಾಧಾನ ಶಮನಗೊಳಿಸಲು ಅಖಾಡಕ್ಕಿಳಿದಿರುವ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಇಂದು ಬಿಡದಿಯ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಅಸಮಾಧಾನಿತರೊಂದಿಗೆ ವರಿಷ್ಠರು ಚರ್ಚೆ ನಡೆಸಿದರು.ಈ ವೇಳೆ ಬಿಜೆಪಿ ಜೊತೆಗೆ ಮೈತ್ರಿಕೊಂಡಿರುವ ಉದ್ದೇಶದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Latest Videos

ಸಿದ್ಧಾಂತ ಒಪ್ಪಿ ಬರೋದಾದ್ರೆ ಬರ್ಲಿ, ಸಿಎಂ ಇಬ್ರಾಹಿಂ ಘರ್ ವಾಪಸಿಗೆ ನಮ್ಮ ವಿರೋಧ ಇಲ್ಲ; ಡಾ.ಜಿ.ಪರಮೇಶ್ವರ್

ಊಟದ ವಿರಾಮದ ವೇಳೆಯೂ  ಅಸಮಾಧಾನಿತ ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಹಾಗೂ ಮಂಜುನಾಥ ಜೊತೆ ಪ್ರತ್ಯೇಕವಾಗಿ ನಿಖಿಲ್ ಕುಮಾರಸ್ವಾಮಿ ಗುಪ್ತ ಮಾತುಕತೆ ನಡೆಸಿದರು.

ಬಿಡದಿಯಲ್ಲಿ ಜೆಡಿಎಸ್ ಸಭೆ ಮುಗಿದ ಬಳಿಕ ಮಾತನಾಡಿದ ಮಾಜಿ ಶಾಸಕ ಗೌರಿಶಂಕರ್, ಈ  ಹಿಂದೆ ಬಿಜೆಪಿ-ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ಆಡಳಿತ ಮಾಡಿದ್ದಾಗ ಇಲ್ಲದ ಸಮಸ್ಯೆ ಈಗ ಬರಲ್ಲ. ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಜೊತೆ ನೇರಾನೇರಾ ರಾಜಕಾರಣ ಮಾಡಿದವ್ರು. ಆದರೆ ನಮ್ಮಗಾಡ್ ಪಾಧರ್ ದೇವೇಗೌಡರ ನಿರ್ಧಾರಕ್ಕೆ ನಾವೆಲ್ಲ ಬದ್ದ. ಎಲ್ಲವನ್ನೂ ಇವತ್ತು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಎಲ್ಲಾ ಗೊಂದಲಗಳನ್ನ ಬಗೆಹರಿಸಿಕೊಳ್ಳುತ್ತೇವೆ. ದೇವೇಗೌಡರು ಏನು ಹೇಳ್ತಾರೋ ಅದೇ ನಮಗೆ ಫೈನಲ್. ಯಾವುದೇ ಗೊಂದಲ ಇಲ್ಲದೇ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು. ಇನ್ನು ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್ ಮಾತನಾಡಿ, ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ. ಈ ಹಿಂದೆ ದಾಸರಹಳ್ಳಿ ಕ್ಷೇತ್ರದಲ್ಲಿ ಆಗಿದ್ದ ಅನ್ಯಾಯಕ್ಕೆ ಬೇಸತ್ತು ಜನ ನನ್ನನ್ನು ಆಯ್ಕೆ ಮಾಡಿದ್ದರು. ಇದೀಗ ಬಿಜೆಪಿ ಜೊತೆಗೆ ಜೆಡಿಎಸ್  ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ತಿ ಬಗ್ಗೆ ಇಂದು ಚರ್ಚೆ ಮಾಡಲಾಗಿದೆ. ನಮ್ಮ ಕ್ಷೇತ್ರದ ಒಂದಷ್ಟು ಸಮಸ್ಯೆಗಳಿವೆ 

ಬಿಜೆಪಿ- ಜೆಡಿಎಸ್‌ ಮೈತ್ರಿ: ಯಡಿಯೂರಪ್ಪ ಜೈಲಿಗೆ ಹೋಗಲು ಕುಮಾರಸ್ವಾಮಿ ಕಾರಣ, ಲಕ್ಷ್ಮಣ ಸವದಿ

ನಮ್ಮ ನಾಯಕರಿಗೆ ಹೇಳಿದ್ದೇವೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ದೊಡ್ಡವರು ಏನೇ ಹೇಳಿದ್ರೂ ನಾವು ಅದಕ್ಕೆ ಬದ್ದವಾಗಿರುತ್ತೇವೆ ಎಂದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಇತ್ತ ಕಾಂಗ್ರೆಸ್ ಸಹ ಬಿಜೆಪಿ ಜೆಡಿಎಸ್ ಮೈತ್ರಿಯಾಗಿರುವುದನ್ನು ಅವಕಾಶವನ್ನು ಬಳಸಿಕೊಂಡು ಅಸಮಾಧಾನಿತ ಜೆಡಿಎಸ್ ನಾಯಕರನನ್ನು ಕಾಂಗ್ರೆಸ್ ಗೆ ಸೆಳೆಯುವ ಪ್ರಯತ್ನ ನಡೆಸಿದೆ. ಎಚ್‌ಡಿ ಕುಮಾರಸ್ವಾಮಿಯವರ ಕ್ಷೇತ್ರವಾದ ಚನ್ನಪಟ್ಟಣದಲ್ಲೇ ಕುಮಾರಸ್ವಾಮಿಯವರ ಅತ್ಯಾಪ್ತರಾದ ನಾಯಕರನ್ನು ಭೇಟಿ ಮಾಡಿರುವ ಸಂಸದ ಡಿಕೆ ಸುರೇಶ, ಜೆಡಿಎಸ್ ಮುಖಂಡರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. 

ಕಲಬುರಗಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಸಮಾವೇಶ

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಹಿನ್ನೆಲೆ ಅತೃಪ್ತ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಕಲಬುರಗಿಯ ಮೆಟ್ರೋ ಪ್ಯಾಲೇಸ್ ನಲ್ಲಿ ಸಮಾವೇಶ ನಡೆಸಿದರು. 

ಜೆಡಿಎಸ್ ಮುಖಂಡ ನಾಸೀರ್ ಹುಸೇನ್, ಮಾಜಿ ಸಚಿವ ಎಂಎಂ ನಬಿ ನೇತೃತ್ವದಲ್ಲಿ ಜಾತ್ಯಾತೀತ ಮೌಲ್ಯಗಳಿಗಾಗಿ ಸಮಾವೇಶ ಎನ್ನುವ ಹೆಸರಲ್ಲಿ ಸಮಾವೇಶ ನಡೆಸಿದರು. ಸಮಾವೇಶದಲ್ಲಿ ಜೆಡಿಎಸ್‌ನ ಕಲ್ಯಾಣ ಕರ್ನಾಟಕ ಭಾಗದ ಅಲ್ಪಸಂಖ್ಯಾತ ಜೆಡಿಎಸ್ ಮುಖಂಡರು, ನೂರಾರು ಕಾರ್ಯಕರ್ತರು ಭಾಗಿಯಾದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದಕ್ಕೆ ಸಮಾವೇಶದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಲ್ಪಸಂಖ್ಯಾತ ಮುಖಂಡರು. ಮೈತ್ರಿ ನಂತ್ರವೂ ಜೆಡಿಎಸ್ ನಲ್ಲಿ ಇರಬೇಕಾ ? ಬೇಡ್ವಾ ? ಅನ್ನೋ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಿತು. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಅಸಮಾಧಾನ ಹೊರಹಾಕ್ತಿರೋ ಅಲ್ಪಸಂಖ್ಯಾತರ ಜೆಡಿಎಸ್ ಮುಖಂಡರು. ಇದೀಗ ಸಭೆಯಲ್ಲಿ ಈ ಅಲ್ಪಸಂಖ್ಯಾತ ನಾಯಕರು ಕೈಗೊಳ್ಳುವ ನಿರ್ಣಯದತ್ತ ಎಲ್ಲರ ಚಿತ್ತ

click me!