10 ದಿನದಲ್ಲಿ 2 ವಾಯುಭಾರ ಕುಸಿತ ಕರ್ನಾಟಕದಲ್ಲೂ ಮಳೆ ಸಾಧ್ಯತೆ

By Kannadaprabha News  |  First Published Dec 8, 2024, 10:25 AM IST

ಮೊದಲ ವಾಯುಭಾರ ಕುಸಿತ ಒಂದೆರಡು ದಿನದಲ್ಲಿ ತೀವ್ರ ಸ್ವರೂಪ ಪಡೆದು ಕಾಣಿಸಿಕೊಳ್ಳಲಿದ್ದು, ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿ.14-15ಕ್ಕೆ ಮಳೆಯಾಗಲಿದೆ. 2ನೇ ವಾಯುಭಾರ ಕುಸಿತ ಡಿ.16ರ ಬಳಿಕ ರೂಪುಗೊಳ್ಳಲಿದ್ದು, ಇದರಿಂದ ಡಿ.17-18ಕ್ಕೆ ರಾಜ್ಯದಲ್ಲಿ ಮಳೆಯಾಗಲಿದೆ. 


ಬೆಂಗಳೂರು(ಡಿ.08): ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ರಾಜ್ಯದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. 
ಫೆಂಗಲ್ ಚಂಡಮಾರುತದ ಹಾನಿಯಿಂದ ಇದೀಗ ಸುಧಾರಿಸಿಕೊಳ್ಳುತ್ತಿರುವಾಗಲೇ ಮತ್ತೆರಡು ವಾಯುಭಾರ ಕುಸಿತ ಸೃಷ್ಟಿಯಾಗುವ ಲಕ್ಷಣ ಬಂಗಾಳಕೊಲ್ಲಿ ಸಾಗರದಲ್ಲಿ ಕಂಡು ಬರುತ್ತಿದೆ. 

ಮೊದಲ ವಾಯುಭಾರ ಕುಸಿತ ಒಂದೆರಡು ದಿನದಲ್ಲಿ ತೀವ್ರ ಸ್ವರೂಪ ಪಡೆದು ಕಾಣಿಸಿಕೊಳ್ಳಲಿದ್ದು, ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿ.14-15ಕ್ಕೆ ಮಳೆಯಾಗಲಿದೆ. 
2ನೇ ವಾಯುಭಾರ ಕುಸಿತ ಡಿ.16ರ ಬಳಿಕ ರೂಪುಗೊಳ್ಳಲಿದ್ದು, ಇದರಿಂದ ಡಿ.17-18ಕ್ಕೆ ರಾಜ್ಯದಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಬಹುತೇಕ ಬೆಳೆಗಳು ಕಟಾವಿಗೆ ಬಂದಿದ್ದು, ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.

Tap to resize

Latest Videos

ತಮಿಳುನಾಡಲ್ಲಿ ನಿಲ್ಲದ ಮಳೆಯಬ್ಬರ: ಸಚಿವರ ಮೇಲೆ ಕೆಸರೆರಚಿದ ಜನ

ಫೆಂಗಲ್‌ ಚಂಡಮಾರುತಕ್ಕೆ ಬೆಂಗ್ಳೂರು ಕಂಗಾಲ್‌: ಜನರ ಪರದಾಟ

ಬೆಂಗಳೂರು:  ರಸ್ತೆಗಳಲ್ಲಿ ಹರಿದ ಕೊಳಚೆ ನೀರು, ಕಿಲೋ ಮೀಟರ್ ಉದ್ದ ನಿಂತ ವಾಹನಗಳು, ಕೆಸರು ಗದ್ದೆಯಂತಾದ ಮಾರುಕಟ್ಟೆ- ವ್ಯಾಪಾರಿ ತಾಣಗಳು, ಜಿಟಿ ಜಿಟಿ ಮಳೆಯಿಂದ ಮನೆಯಿಂದ ಹೊರ ಹೋಗುವುದಕ್ಕೆ ಸಾಧ್ಯವಾಗದ ಸ್ಥಿತಿ. ಇವು ಫೆಂಗಲ್ ಚಂಡಮಾರುತದಿಂದ ರಾಜಧಾನಿ ಬೆಂಗಳೂರಿನ ಜನರ ಸಂಕಷ್ಟಗಳ ಸರಮಾಲೆ. 

ರಸ್ತೆಯಲ್ಲಿ ಪರದಾಟ: 

ಮಳೆಯಿಂದ ನಗರದ ಪ್ರಮುಖ ರಸ್ತೆ, ಅಂಡರ್ ಪಾಸ್, ಪ್ರೈಓವರ್ ಮೇಲೆ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು. ಅದರಲ್ಲೂ ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಳಲ್ಲಿ ಪ್ರಮಾಣದ ಟ್ರಾಫಿಕ್ ಜಾಮ್‌ ಉಂಟಾಯಿತು. ಇದರಿಂದ ಬೆಳಗ್ಗೆ ಶಾಲಾ-ಕಾಲೇಜಿಗೆ ಹೊರಡಲು ಮಕ್ಕಳು, ಕಚೇರಿಗೆ ಹೊರಡಲು ನೌಕರರು ನಡು ರಸ್ತೆಯಲ್ಲಿ ನಿಂತು ಪರದಾಡಿದ್ದರು. 

ರಸ್ತೆಯಲ್ಲಿ ಕೊಳಚೆ ನೀರು: 

ನಗರದ ಹಲವು ರಸ್ತೆಗಳ ಮೇಲೆ ಮಳೆ ನೀರು ಚರಂಡಿಗಳಲ್ಲಿ ಹೂಳು ತುಂಬಿಕೊಂಡ ಪರಿಣಾಮ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು ಕಂಡು ಬಂತು. ಇನ್ನು ಕೆಲವು ಕಡೆ ಜಲಮಂಡಳಿಯ ಕೊಳವೆ ಮಾರ್ಗದಲ್ಲಿ ಮಳೆ ನೀರು ಹರಿದ ಪರಿಣಾಮ ಒತ್ತಡ ಹೆಚ್ಚಾಗಿ ರಸ್ತೆ ಮಧ್ಯದಲ್ಲಿರುವ ಮ್ಯಾನ್ ಹೋಲ್‌ಗಳ ಮೂಲಕ ಹೊರಗೆ ಉಕ್ಕುತ್ತಿರುವುದು ಕಂಡು ಬಂದಿತ್ತು. 

ಕೆಸರು ಗದ್ದೆಯಾದ ಮಾರುಕಟ್ಟೆಗಳು: 

ಕೆ.ಆರ್. ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿ ವಿವಿಧ ವ್ಯಾಪಾರಿ ತಾಣಗಳಾದ ಚಿಕ್ಕಪೇಟೆ, ಅವೆನ್ಯೂ ರಸ್ತೆ, ವಿಜಯನಗರ ಮಾರುಕಟ್ಟೆ, ಶಿವಾಜಿನಗರ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮಲ್ಲೇಶ್ವರ ಮಾರುಕಟ್ಟೆಗಳಲ್ಲಿ ರಸ್ತೆಗಳಲ್ಲಿ ಅಕ್ಷರಶಃ ಕೆಸರು ಗದ್ದೆಯಂತಾಗಿದ್ದವು. ಮಳೆಯ ನಡುವೆಯೂ ಹಳ್ಳಿಗಳಿಂದ ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿ ವಿವಿಧ ಮಾರುಕಟ್ಟೆಗಳಿಗೆ ಸೊಪ್ಪು-ತರಕಾರಿಯನ್ನು ತೆಗೆದುಕೊಂಡು ಬಂದಿದ್ದ ರೈತರ ಗೋಳು ಕೇಳುವವರಿಲ್ಲದಂತಾಗಿತ್ತು. ಮಳೆಯಿಂದ ಕೆಸರು ಗದ್ದೆಯಂತಾಗಿದ್ದ ಮಾರುಕಟ್ಟೆಗಳಲ್ಲಿ ಸೊಪ್ಪು, ತರಕಾರಿ, ಹೂವು ಖರೀದಿ ಮಾಡುವವರಿಲ್ಲದೇ ಪರದಾಡಿದರು. ಕೊನೆಗೆ ಸೊಪ್ಪು, ತರಕಾರಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗುವ ಸ್ಥಿತಿ ಕೆ.ಆರ್. ಮಾರುಕಟ್ಟೆಯಲ್ಲಿ ಕಂಡು ಬಂದಿತ್ತು. 

ತಮಿಳುನಾಡಿನಲ್ಲಿ ನಿಲ್ಲದ 'ಫೆಂಗಲ್'ಅಬ್ಬರ : ತಿರುವಣಾಮಲೈ, ಕೃಷ್ಣಗಿರಿ ತತ್ತರ

ಧರೆಗೆ ಬಿದ್ದ ಮರದ ಕೊಂಬೆ: 

ಮಂಗಳವಾರದ ಮಳೆಗೆ ವಿಧಾನಸೌಧದ ಮುಂಭಾಗದಲ್ಲಿ ಮರ ಕೊಂಬೆ ಬಿದ್ದಿದೆ. ಪಾದಚಾರಿ ಮಾರ್ಗದಲ್ಲಿ ಮರ ಕೊಂಬೆ ಬಿದ್ದಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಅನುಭವಿಸಿದರು. ಇನ್ನು ಕಳೆದ 4 ದಿನದ ಮಳೆಗೆ ನಗರದಲ್ಲಿ ಒಟ್ಟು 32 ಮರ ಹಾಗೂ 72 ಮರ ಕೊಂಬೆ ಬಿದ್ದ ವರದಿಯಾಗಿದೆ.

ಹೆಚ್ಚಾದ ಗುಂಡಿ ಸಮಸ್ಯೆ: ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ಮತ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಹಲವು ಮುಖ್ಯ ರಸ್ತೆಗಳಲ್ಲಿಯೇ ಗುಂಡಿಗಳು ಮತ್ತೆ ಬಾಯಿದೆರೆದುಕೊಂಡಿದ್ದು, ವಾಹನ ಸವಾರರು, ಅದರಲ್ಲೂ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ. ಕೋಲ್ಡ್ ಮಿಕ್ಸ್ ಬಳಕೆ ಮಾಡಿ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿತ್ತು. ಆದರೆ, ಎಲ್ಲಿಯೂ ಗುಂಡಿ ಮುಚ್ಚಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

click me!