
ಬೆಂಗಳೂರು(ಡಿ.08): ಕೇರಳದ ಖಾಸಗಿ ಕಂಪನಿ ಮಾಲೀಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನಂದಿನಿ ಬ್ರಾಂಡ್ ದೋಸೆ ಹಿಟ್ಟು ಮಾರುಕಟ್ಟೆಗೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ನ೦ದಿನಿ ಬ್ಯಾಂಡ್ ಅಡಿ ದೋಸೆ ಹಿಟ್ಟು ಡಿಸೆ೦ಬರ್ ಅಂತ್ಯದೊಳಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.
ಈ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿರುವ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ನಂದಿನಿ ಬ್ಯಾಂಡ್ ಅಡಿ ಡಿಸೆಂಬರ್ ಅಂತ್ಯದೊಳಗೆ ದೋಸೆಹಿಟ್ಟು ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಾರದೊಳಗೆ ಕಾರ್ಯಾದೇಶ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಗೂ, ದೋಸೆ ಹಿಟ್ಟಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಹಜ ಪ್ರಕ್ರಿಯೆ ಎಂದರು.
ದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ಆರಂಭ; ಅಮುಲ್, ಮದರ್ ಡೈರಿಗೆ ನಡುಕ!
ಖಾಸಗಿ ಕಂಪನಿಯೊಂದು ಉತ್ಪಾದಿಸಿದ ದೋಸೆ ಹಿಟ್ಟನ್ನು ನಂದಿನಿ ಬ್ರಾಂಡ್ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುವ ಪ್ರಸ್ತಾವನೆ ಆರು ತಿಂಗಳ ಹಿಂದೆಯೇ ಬಂದಿತ್ತು. ಕೆಎಂಎಫ್ ಉತ್ಪಾದನೆ ಮೇಲೆ ಯಾವುದೇ ನಿಯಂತ್ರಣ ಇಲ್ಲದೆ ಬ್ರಾಂಡ್ ಬಳಕೆಗೆ ಅವಕಾಶ ಕಲ್ಪಿಸಿದರೆ ಸಮಸ್ಯೆ ಎದುರಾಗುವ ಅಪಾಯವಿತ್ತು. ದೋಸೆ ಹಿಟ್ಟು ಮಾರಾಟಕ್ಕೆ ಅನುಮತಿ ಕೊಟ್ಟಿದ್ದರೆ ವಾರ್ಷಿಕ 6 ರಿಂದ 10 ಲಕ್ಷದಷ್ಟು ಲಾಭ ಆಗುತ್ತಿತ್ತು. ಇಷ್ಟು ಹಣಕ್ಕಾಗಿ ನಂದಿನಿ ಬ್ರಾಂಡ್‌ಗೆ ಧಕ್ಕೆಯಾ ಗುವಂತೆ ನಿರ್ಧಾರ ಕೈಗೊಳ್ಳಬಾರದೆಂದು ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದರು.
ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ಗೆ ಲಾಡು ಉತ್ಪಾದನೆಗೆ ಪೂರೈಕೆಯಾದ ತುಪ್ಪ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡು ಸ್ವಂತ ದೋಸೆ ಹಿಟ್ಟು ಉತ್ಪಾದಿಸುವ ಘಟಕ ಸ್ಥಾಪಿಸಿ ನಮ್ಮ ಸಿಬ್ಬಂದಿಯಿಂದಲೇ ಉತ್ಪಾದಿಸಿ ಮಾರು ಕಟ್ಟೆಗೆ ಪೂರೈಸುವ ಪ್ರಸ್ತಾವ ಮಂಡಿಸಲು ಸೂಚಿಸಿದ್ದು, ಈಗ ಟೆಂಡರ್ ಕೂಡ ಮುಕ್ತಾ ಯವಾಗಿದೆ. ಮುಖ್ಯಮಂತ್ರಿಯವರು ಅನುಮತಿ ಪಡೆದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದೇವೆ ಎಂದು ಹೇಳಿದರು.
ಬಾಯ್ಕಾಟ್ ಐಡಿ ಪ್ರಾಡೆಕ್ಟ್ ಅಭಿಯಾನ
ನಂದಿನಿ ಬ್ಯಾಂಡ್ ದೋಸೆ ಹಿಟ್ಟಿಗೆ ಅಡ್ಡಗಾಲು ಹಾಕಿರುವ ಕಳೆದರಡು ದಶಕಗಳಿಂದ ದೋಸೆ, ಇಡ್ಲಿ ಹಿಟ್ಟು ಮಾರಾಟದಲ್ಲಿ ಪಾರುಪತ್ಯ ಮೆರೆದಿರುವ ಐಡಿ ಕಂಪನಿ ಉತ್ಪನ್ನಗಳನ್ನು ಖರೀದಿಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಸಂಘಟನೆಗಳು 'ಬಾಯ್ಕಟ್ ಐಡಿಪ್ರಾಡೆಕ್ಟ್' ಅಭಿಯಾನ ಆರಂಭಿಸಿದ್ದು ಲಕ್ಷಾಂತರ ಮಂದಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಕೆಎಂಎಫ್ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟು ಶೀಘ್ರ ಬಿಡುಗಡೆ!
ಅಮುಲ್ ಮತ್ತು ನಂದಿನಿ ಮರ್ಜ್ ಆಗಲ್ಲ; KMF ಅಧ್ಯಕ್ಷ!
ಬೆಂಗಳೂರು: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಮ್ಮ ನಂದಿನಿ ಹಾಲನ್ನು ಮಾರಾಟ ಮಾಡಬೇಕೆನ್ನುವ ಕನಸು ಇತ್ತು. ಕಳೆದ 29ನೇ ತಾರೀಖು ಆ ಕನಸು ನನಸಾಗಿದೆ. ಈಗ ಐದರಿಂದ ಆರು ಸಾವಿರ ಲೀಟರ್ ಹಾಲು ಮಾರಾಟ ಆಗುತ್ತಿದೆ. ಇನ್ನೊಂದು ತಿಂಗಳಲ್ಲಿ ಒಂದು ಲಕ್ಷ ಲೀಟರ್ ಹಾಲು ಮಾರಾಟ ಆಗುವ ನಿರೀಕ್ಷೆಯಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿದ್ದರು.
ಬೇರೆ ಬ್ರ್ಯಾಂಡ್‌ಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಬ್ಯುಸಿನೆಸ್‌ನಲ್ಲಿ ಯಾವಾಗಲೂ ಸ್ಪರ್ಧೆ ಇದ್ದೇ ಇರುತ್ತದೆ. ನಮಗೆ ಗ್ರಾಹಕರ ಬೇಡಿಕೆಯಿದೆ. ಅದಕ್ಕೆ ತಕ್ಕಂತೆ ಪೂರೈಕೆ ಮಾಡುತ್ತೇವೆ ಎಂದು ಭೀಮಾ ನಾಯಕ್ ಹೇಳಿದ್ದರು.
ಇನ್ನು ಅಮೂಲ್ ಹಾಗೂ ನಂದಿನಿ ಮರ್ಜ್ ಆಗಲಿದೆಯೇ ಎನ್ನುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಇದು ಹಿಂದೆ ಅಮಿತ್ ಷಾ ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ಯಾವುದೋ ಒಂದು ಮಾತಿನ ಹಿನ್ನೆಲೆಯಲ್ಲಿ ಈ ವದಂತಿ ಸೃಷ್ಠಿಯಾಗಿತ್ತು. ಇದೆಲ್ಲವೂ ಕೇವಲ ವದಂತಿಯಷ್ಟೇ, ಆ ರೀತಿ ನಂದಿನಿ ಹಾಗೂ ಅಮೂಲ್ ವಿಲೀನ ಮಾಡಲು ಸಾಧ್ಯವೇ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ