
ಬೆಂಗಳೂರು(ಮಾ.06): ರಾಜ್ಯದಲ್ಲಿ(Karnataka) ಕಳೆದೆರಡು ತಿಂಗಳಿಂದ ಇದ್ದ ಒಣ ಹವೆ ಕೊನೆಗೊಳ್ಳುತ್ತಿದ್ದು, ಮಾರ್ಚ್ 7ರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ(Rain). ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತದ ಕಾರಣದಿಂದ ಒಳನಾಡು ಮತ್ತು ಕರಾವಳಿಯ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(Indian Meteorological Department) ತಿಳಿಸಿದೆ.
ಮಾರ್ಚ್ 7ರಂದು ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಮಾ. 9ರವರೆಗೂ ಮಳೆಯಾಗುವ ನಿರೀಕ್ಷೆಯಿದೆ. ಮಾ. 8 ಮತ್ತು ಮಾ. 9ರಂದು ರಾಜ್ಯ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಯ ಒಂದೆರಡು ಕಡೆ ಮಳೆಯಾಗುವ ಸಂಭವವಿದೆ.
Karnataka Rain Alert : ಮತ್ತೆ ರಾಜ್ಯಕ್ಕೆ 5 ದಿನ ಭಾರೀ ಮಳೆ ಎಚ್ಚರಿಕೆ
ಇತ್ತ ಬೆಂಗಳೂರಿನಲ್ಲಿ(Bengaluru) ಮುಂದಿನ ಕೆಲ ದಿನಗಳ ಕಾಲ ಆಗಾಗ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಬೆಳಗ್ಗೆಯ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ. ದಿನದ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಚೆನ್ನೈಯಿಂದ 300 ಕಿ.ಮೀ. ದೂರದ ನೈಋುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕೇಂದ್ರಿಕೃತವಾಗಿದ್ದು ಮಾ.8ಕ್ಕೆ ತಮಿಳುನಾಡಿನ ಉತ್ತರ ಕರಾವಳಿಯನ್ನು ಸಮೀಪಿಸಲಿದೆ. ಮೇ ಅಂತ್ಯದವರೆಗೂ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ.
ಈ ವರ್ಷ ಸಾಮಾನ್ಯ ಮುಂಗಾರು, ವರದಿ ನೀಡಿದ ಸ್ಕೈಮೆಟ್
ನವದೆಹಲಿ: ಪ್ರಸಕ್ತ ವರ್ಷ ಸಾಮಾನ್ಯ ಮುಂಗಾರು (Monsoon) ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈ ಮೆಟ್ (skymet weather)ಅಂದಾಜಿಸಿದೆ. ಒಟ್ಟಾರೆ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೀರ್ಘಕಾಲಿನ ಸರಾಸರಿಯ ಶೇ. 96ರಿಂದ ಶೇ.103ರಷ್ಟು ಮಳೆ (Rain) ಸುರಿಯಲಿದೆ. ಅಂದರೆ ಸರಾಸರಿ 880.6 ಮಿ.ಮೀ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಸಮಗ್ರ ಮಾನ್ಸೂನ್ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಏಪ್ರಿಲ್‌ನಲ್ಲಿ ಈ ಕುರಿತ ವಿವರವಾದ ವರದಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
Karnataka Rains| ವಾರದ ಬಳಿಕ ರಾಜ್ಯಕ್ಕೆ ಬಿಡುವು ನೀಡಿದ ಮಳೆ
ಕಳೆದ ಎರಡು ಮಾನ್ಸೂನ್ ಋುತುಗಳು ನಿರಂತರ ಎಲ್ ನಿನೋ ವಿದ್ಯಮಾನಗಳಿಂದ ಮಾರ್ಪಾಡಾಗಿತ್ತು, ಅದು ಈಗ ಕುಗ್ಗಲು ಪ್ರಾರಂಭಿಸಿದೆ. ಇದರರ್ಥ 2022ರ ಮಾನ್ಸೂನ್ ಎಲ್.ನಿನೋ ಪ್ರಾರಂಭವಾಗಿ ನಂತರ ತಟಸ್ಥವಾಗಿದೆ. ಪೆಸಿಫಿಕ್ ಸಮುದ್ರದ ಮೇಲ್ಮೈ ತಾಪಮಾನ ಶೀಘ್ರವೇ ಹೆಚ್ಚುವ ಸಾಧ್ಯತೆ ಇದೆ. ಎಲ್.ನಿನೋ ಕುಸಿತ ಮುಂದುವರೆಯುವ ಸಂಭವ ಇದೆ ಎಂದು ಸ್ಕೈಮೆಟ್ ಮುಖ್ಯಸ್ಥ ಜಿ.ಪಿ.ಶರ್ಮಾ ತಿಳಿಸಿದ್ದಾರೆ.
"ಮಳೆ ಬೆಳೆ ಸಂಪಾತಲೇ ಪರಾಕ್" ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ
ಹೂವಿನಹಡಗಲಿ: ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯ (Mailaralingeshwara Fair) ಕಾರ್ಣಿಕ ಹೊರಬಿದ್ದಿದ್ದು, "ಮಳೆ ಬೆಳೆ ಸಂಪಾತಲೇ ಪರಾಕ್" ಎನ್ನುವ ಕಾರ್ಣಿಕ ಘೋಷಣೆಯಾಗಿದೆ. ಇದು ಉತ್ತಮ ಕಾರ್ಣಿಕ ನುಡಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಕಾರ್ಣಿಕವನ್ನು ಆಲಿಸಿದವರ ಪ್ರಕಾರ ಇದು ಒಟ್ಟಾರೆ ಉತ್ತಮ ಕಾರ್ಣಿಕ ನುಡಿ ಎಂದು ಹೇಳಲಾಗಿದೆ.
ಕಾರ್ಣಿಕ (Karnikotswa) ನುಡಿ ಆಲಿಸಲು ಪ್ರತಿ ವರ್ಷ ರಾಜ್ಯ, ಅಂತಾರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಈ ಬಾರಿ ಕೋವಿಡ್(Covid-19) ನಿಯಂತ್ರಿಸಬೇಕೆಂಬ ಜಿಲ್ಲಾಡಳಿತದ ನಿರ್ದೇಶನದಂತೆ, ಭಕ್ತರ ಆಗಮನಕ್ಕೆ ಅವಕಾಶ ಕಡಿಮೆ ಅವಕಾಶ ಇದ್ದರೂ, 5 ಲಕ್ಷ ಜನರು ಈ ಬಾರಿ ಕಾರ್ಣಿಕವನ್ನು ಆಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ