ಎಲ್‌ಐಸಿಯ ಷೇರು ಮಾರಾಟ ಜನರ ವಿಶ್ವಾಸಕ್ಕೆ ನೀಡಿದ ಆಘಾತ!

Published : May 05, 2022, 02:05 AM IST
ಎಲ್‌ಐಸಿಯ ಷೇರು ಮಾರಾಟ ಜನರ ವಿಶ್ವಾಸಕ್ಕೆ ನೀಡಿದ ಆಘಾತ!

ಸಾರಾಂಶ

- ಎಲ್ ಐಸಿ ಐಪಿಒಗೆ ವಿರೋಧ  - ವಿಮಾ ಕಾರ್ಪೋರೇಷನ್‌ ನೌಕರರ ಪ್ರತಿಭಟನೆ - ಸರ್ಕಾರ ಏಜೆಂಟ್ ಗಳ ಹಿತ ಕಾಪಾಡಬೇಕು

ಬೆಂಗಳೂರು (ಮೇ.5): ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ವಿಮಾ ಕಾರ್ಪೊರೇಷನ್‌ (life insurance corporation) ನೌಕರರ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಜೆ.ಸಿ.ರಸ್ತೆಯ (JC Road) ಜೀವನ್‌ ಪ್ರಕಾಶ್‌ ಬಿಲ್ಡಿಂಗ್‌ನಲ್ಲಿರುವ (Jeevan Prakash) ಎಲ್‌ಐಸಿ ವಿಭಾಗೀಯ ಕಚೇರಿ (lic divisional office) ಎದುರು ಪ್ರತಿಭಟನೆ ನಡೆಸಿದ ನೌಕರರು, ಎಲ್‌ಐಸಿಯ ಶೇ.25ರಷ್ಟುಷೇರುಗಳನ್ನು ಕೇಂದ್ರ ಸರ್ಕಾರ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದು ನವ ಉದಾರವಾದಿ ಆರ್ಥಿಕ ನೀತಿಗಳ ಭಾಗವಾದ ಖಾಸಗೀಕರಣವೇ ಆಗಿದ್ದು ಸಾರ್ವಜನಿಕ ಆಸ್ತಿ, ಸಂಪತ್ತುಗಳನ್ನು ದೇಶಿ ಮತ್ತು ವಿದೇಶಿ ಬಂಡವಾಳಗಾರರಿಗೆ ಬಿಟ್ಟುಕೊಡಲು ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.

ಪಾಲಿಸಿದಾರರು ಎಲ್‌ಐಸಿಯ ನಿಜವಾದ ಮಾಲಿಕರು. ಪಾಲಿಸಿದಾರರ ಉಳಿತಾಯದ ಹಣದ ಮೂಲಕ ರಚಿಸಲಾದ ಎಲ್‌ಐಸಿಯ ಅಪಾರ ಮೌಲ್ಯವನ್ನು ಕೆಲವೇ ಹೂಡಿಕೆದಾರರಿಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಹಣಕಾಸು ವರ್ಷದ ವಿತ್ತೀಯ ಕೊರತೆ ಸರಿದೂಗಿಸುವ ನೆಪದಲ್ಲಿ ಎಲ್‌ಐಸಿಯ ಷೇರುಗಳನ್ನು ಮಾರಾಟ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಎಲ್‌ಐಸಿಯ ಮೌಲ್ಯವನ್ನು .15 ಲಕ್ಷ ಕೋಟಿಗಳಿಂದ .6 ಲಕ್ಷ ಕೋಟಿಗೆ ಇಳಿಸಲಾಗಿದ್ದು, ಇದು ಕೋಟ್ಯಂತರ ಪಾಲಿಸಿದಾರರ ಮತ್ತು ಇಷ್ಟುವರ್ಷಗಳಿಂದ ಎಲ್‌ಐಸಿಯನ್ನು ಬೆಂಬಲಿಸಿದ ದೇಶದ ಜನತೆಯ ನಂಬಿಕೆ ಮತ್ತು ವಿಶ್ವಾಸಕ್ಕೆ ನೀಡಿದ ಆಘಾತವಾಗಿದೆ ಎಂದರು.

ಪ್ರಸ್ತುತ ಎಲ್‌ಐಸಿ ಈಗ .38 ಲಕ್ಷ ಕೋಟಿ ಆಸ್ತಿ ಹೊಂದಿದೆ. ಇಂತಹ ಲಾಭದಾಯಕವಾದ ಕಂಪನಿಯಲ್ಲಿರುವ ಷೇರನ್ನು ಯಾವ ಕಾರಣಕ್ಕೂ ಮಾರಾಟ ಮಾಡಬಾರದು. ಈ ಮೂಲಕ ಪಾಲಿಸಿದಾರರು, ಒಂದು ಲಕ್ಷ ಎಲ್‌ಐಸಿ ನೌಕರರು ಮತ್ತು 14 ಲಕ್ಷ ಏಜೆಂಟ್‌ಗಳ ಹಿತವನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

 ಭಾರತೀಯ ಜೀವ ವಿಮಾ ನಿಗಮದ (LIC) ಬಹುನಿರೀಕ್ಷಿತ ಸಾರ್ವಜನಿಕ ಪ್ರಾರಂಭಿಕ ಷೇರು ಕೊಡುಗೆ (IPO) ಇಂದಿನಿಂದ (ಮೇ4) ಪ್ರಾರಂಭವಾಗಿದೆ. ಮೊದಲ ದಿನದ ಬಿಡ್ಡಿಂಗ್ ಬೆಳಗ್ಗೆ 11ಕ್ಕೆ ಪ್ರಾರಂಭವಾಗಿದ್ದು, ಕೇವಲ ಎರಡು ಗಂಟೆಯೊಳಗೆ ಶೇ.28 ಷೇರುಗಳ ಚಂದಾದಾರಿಕೆಯನ್ನು ಪಡೆಯಲಾಗಿದೆ.  ಈ ಮೂಲಕ ಎಲ್ಐಸಿ ಐಪಿಒಗೆ ಉತ್ತಮ ಆರಂಭ ಸಿಕ್ಕಿದೆ. 

ಯೋಗ ತಜ್ಞ ನಾಗೇಂದ್ರಗೆ ಬಸವಶ್ರೀ ಪ್ರಶಸ್ತಿ

ಬೆಂಗಳೂರು (ಮೇ.5): ‘ಬಸವ ವೇದಿಕೆ’ ಕೊಡ ಮಾಡುವ ‘ಬಸವಶ್ರೀ’ ಪ್ರಶಸ್ತಿಗೆ ಸ್ವಾಮಿ ವಿವೇಕಾನಂದ ಯೋಗ ಅನುಸಂದಾನ ಸಂಸ್ಥಾನ ವಿವಿ ಕುಲಪತಿ ಡಾ. ಎಚ್‌.ಆರ್‌ ನಾಗೇಂದ್ರ ಹಾಗೂ ‘ವಚನ ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಬೀದರ್‌ ಬಸವ ಸೇವಾ ಪ್ರತಿಷ್ಠಾನದ ವಚನಕಾರ್ತಿ ಡಾ. ಗಂಗಾಂಬಿಕೆ ಅವರು ಭಾಜನರಾಗಿದ್ದಾರೆ. ಮೇ 7ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

LIC IPO:ಮೊದಲ ದಿನವೇ ಷೇರುಗಳಿಗೆ ಭಾರೀ ಬೇಡಿಕೆ; ಆರಂಭವಾದ 2 ಗಂಟೆಯಲ್ಲಿ ಶೇ.28 ಷೇರುಗಳ ಮಾರಾಟ; ಇನ್ನಷ್ಟು ಮಾಹಿತಿ ಇಲ್ಲಿದೆ

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ‘ಬಸವ ವೇದಿಕೆ’ ಅಧ್ಯಕ್ಷ ಡಾ.ಸಿ. ಸೋಮಶೇಖರ, ಶರಣರ ವಿಚಾರಧಾರೆಗೆ ಅನುಗುಣವಾಗಿ ಸಾಮಾಜಿಕ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಬಸವಶ್ರೀ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

LIC IPO:ನಾಳೆಗೆ ಇಂದೇ ಸಿಕ್ಕಿತು ಶುಭ ಶಕುನ ; ಆ್ಯಂಕರ್‌ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಿಸಿದ ಎಲ್ಐಸಿ

ಬಸವಶ್ರೀ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾಹಿತ್ಯಶ್ರೀ ಪ್ರಶಸ್ತಿಯನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಸತಿ ಸಚಿವ ವಿ.ಸೋಮಣ್ಣ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಬಸವ ವೇದಿಕೆ ಉಪಾಧ್ಯಕ್ಷ ಎಸ್‌.ಷಡಕ್ಷರಿ, ಕೋಶಾಧ್ಯಕ್ಷ ಎಂ.ರುದ್ರಯ್ಯ, ಕಾರ್ಯದರ್ಶಿ ನಾ. ಮಲ್ಲಿಕಾರ್ಜುನ, ಸಂಚಾಲಕ ಕೆ.ವಿ. ನಾಗರಾಜಮೂರ್ತಿ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ