ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ದೊರೆಯಲಿ: ನಟ ನವೀನ್‌ ಶಂಕರ್‌

By Kannadaprabha News  |  First Published Nov 4, 2024, 10:00 AM IST

ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷ ಪ್ರೀತಿ, ಕಾಳಜಿಯೊಂದಿಗೆ ಅವಕಾಶ ದೊರೆಯಬೇಕಿದೆ. ಇದರಿಂದ ಇನ್ನಷ್ಟು ಸಾಧಕರು ಹೊರಹೊಮ್ಮಲಿದ್ದಾರೆ ಎಂದು ನಟ ನವೀನ್‌ ಶಂಕರ್‌ ಹೇಳಿದರು.


ಮುಂಬೈ (ನ.04): ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷ ಪ್ರೀತಿ, ಕಾಳಜಿಯೊಂದಿಗೆ ಅವಕಾಶ ದೊರೆಯಬೇಕಿದೆ. ಇದರಿಂದ ಇನ್ನಷ್ಟು ಸಾಧಕರು ಹೊರಹೊಮ್ಮಲಿದ್ದಾರೆ ಎಂದು ನಟ ನವೀನ್‌ ಶಂಕರ್‌ ಹೇಳಿದರು. ಮುಂಬಯಿಯ ಅಥೇನಾ ಬಾಂಕ್ವೆಟ್‌ ಸಭಾಂಗಣದಲ್ಲಿ ಕನ್ನಡಪ್ರಭ-ಸುವರ್ಣ ನ್ಯೂಸ್‌ ವತಿಯಿಂದ ಆಯೋಜಿಸಿದ್ದ ನಾರ್ಥ್‌ ಕರ್ನಾಟಕ ಅಚೀವರ್ಸ್‌- 2024 ಅವಾರ್ಡ್‌ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಇನ್ನಷ್ಟು ಸಾಧಕರಿಗೆ ಸ್ಫೂರ್ತಿ ದೊರೆಯಲಿದೆ. ಇದೊಂದು ಮಾದರಿ ಕಾರ್ಯಕ್ರಮ ಆಗಿದೆ ಎಂದರು.

ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ನಡುವೆ ಸಮತೋಲನ ಸಾಧಿಸಬೇಕಿದೆ. ಈಗಾಗಲೇ ಭಾವನಾತ್ಮಕ ಒಳಗೊಳ್ಳುವಿಕೆ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ಈ ಒಳಗೊಳ್ಳುವಿಕೆ ಕಾಣಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಸೌಲಭ್ಯ ಹೆಚ್ಚಳ ಮಾಡಬೇಕಿದೆ. ಕೃಷ್ಣಾ ನದಿ ಸೇರಿದಂತೆ ಎಲ್ಲಾ ನದಿಗಳ ನೀರನ್ನು ಸದ್ಬಳಕೆ ಮಾಡಿಕೊಂಡು ಉದ್ಯೋಗ ಸೃಷ್ಟಿಸಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಂಪನ್ಮೂಲ ಇದೆ. ಯುವ ಸಮೂಹ ಇದೆ. ಎಲ್ಲವನ್ನು ಬಳಕೆ ಮಾಡಿಕೊಂಡು ಶಕ್ತಿಯಾಗಿ ಮುನ್ನಡೆಯಬೇಕಿದೆ ಎಂದರು.

Tap to resize

Latest Videos

undefined

ಉತ್ತರ ಕರ್ನಾಟಕ ಭಾಗದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ರಂಗಗಳಲ್ಲೂ ಪ್ರತಿಭಾವಂತರಿದ್ದರೂ ಆರ್ಥಿಕ ಅಸಮತೋಲನದಿಂದ ಹಿಂದೆ ಉಳಿಯುತ್ತಿದ್ದಾರೆ. ಅಪ್ಪ, ಅಮ್ಮ ನೌಕರಿ ಮಾಡಬೇಕು ಎಂದು ಹೇಳುತ್ತಾರೆ. ಆದರೆ, ಹೊಸ ಆಲೋಚನೆಗೆ ಅವಕಾಶ ಇಲ್ಲದಂತಾಗಿದೆ. ಹಾಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆರ್ಥಿಕ ಅಸಮತೋಲನ ನಿವಾರಣೆ ಆಗಬೇಕು. ಸಮತೋಲನ ಸಾಧಿಸಬೇಕು ಎಂದರು. ಚಾಲುಕ್ಯರು ಮತ್ತು ವಿಜಯನಗರ ರಾಜಮನೆತನದ ಆಡಳಿತಾವಧಿಯಲ್ಲಿ ಉತ್ತರ ಕರ್ನಾಟಕ ಭಾಗ ಸಮೃದ್ಧವಾಗಿತ್ತು. ಬಳ್ಳದಿಂದ ವಜ್ರ, ವೈಢೂರ್ಯ ಅಳೆದು ಮಾರಾಟ ಮಾಡಲಾಗುತ್ತಿತ್ತು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಚಿತ್ರಣ ನೋಡಿದರೆ, ಔದ್ಯೋಗಿಕ, ಉದ್ಯಮ ವಲಯ ಸೇರಿದಂತೆ ಎಲ್ಲಾ ಕಡೆಯೂ ಉತ್ತರ ಕರ್ನಾಟಕದವರಿಗೆ ಅವಕಾಶ ದೊರೆತು, ಅಸಮತೋಲನ ನಿವಾರಣೆ ಆಗಬೇಕಿದೆ ಎಂದರು.

ಉತ್ತರ ಕರ್ನಾಟಕದಲ್ಲಿದೆ ಇಡೀ ಕರ್ನಾಟಕದ ಭವ್ಯ ಭವಿಷ್ಯ: ಸಂಸದ ಬೊಮ್ಮಾಯಿ

ನಾನು ಕೂಡ ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ಇಲ್ಲಕಲ್‌ ಸಮೀಪದ ಸಣ್ಣ ಹಳ್ಳಿ ಚಿಕ್ಕ ಆದಾಪುರ ಗ್ರಾಮದಿಂದ ಬಂದಿರುವೆ. ಬನಶಂಕರಿ ಜಾತ್ರೆಯಲ್ಲಿ ನಾಟಕ ಆಡ್ತಾ, ಗಣೇಶ ಹಬ್ಬದಲ್ಲಿ ಗಣೇಶನ ಎದುರು ಕಲೆ ಪ್ರದರ್ಶಿಸಿ, ಕನ್ನಡ ಸಿನಿಮಾ ನೋಡ್ತಾ ಕನಸು ಕಟ್ಟಿಕೊಂಡು ಬಂದಿರುವೆ. ನಮ್ಮ ಭಾಗದಲ್ಲಿ ಅವಕಾಶ ದೊರೆಯಬೇಕು ಎಂದರೆ ಬೆಂಗಳೂರಿಗೆ ಹೋಗಬೇಕು ಎಂದು ಹೇಳುತ್ತಾರೆ. ಬೆಂಗಳೂರು ನಮಗೆ ದೈತ್ಯವಾಗಿ ಕಾಣುತ್ತದೆ. ಕಲಾವಿದರು ಸೇರಿದಂತೆ ಹಲವು ಕ್ಷೇತ್ರದ ಪ್ರತಿಭಾವಂತರು ಆರ್ಥಿಕ ಸಮಸ್ಯೆಯಿಂದ ಅವಕಾಶ ದೊರೆಯದೇ, ಮರಳುತ್ತಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕದವರಿಗೆ ವಿಶೇಷ ಪ್ರೀತಿ, ಕಾಳಜಿ ತೋರಿಸಿ ಅವಕಾಶ ನೀಡಬೇಕಿದೆ. ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ಇಂತಹದೊಂದು ಕಾರ್ಯಕ್ರಮ ಆಯೋಜಿಸಿ ನಾರ್ಥ್‌ ಕರ್ನಾಟಕದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಅಭಿನಂದನೀಯ, ನಮ್ಮ ಭಾಗದವರಿಗೆ ಈ ಕಾರ್ಯಕ್ರಮ ಸ್ಫೂರ್ತಿಯಾಗಿದ್ದು, ಮಾದರಿ ಆಗಲಿದೆ ಎಂದರು.

click me!