ಸಮಾಜದಲ್ಲಿ ಅನೇಕ ಸುಸ್ಥಿರ ಮಾದರಿಗಳಿದ್ದು, ಆ ಮಾದರಿಗಳ ಮೂಲಕ ಸಮಾಜದ ಪ್ರಗತಿ ಕಾಣಬೇಕು ಎಂಬ ನಂಬಿಕೆ ನಮ್ಮದಾಗಿದೆ ಎಂದು ಕನ್ನಡಪ್ರಭ, ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
ಮುಂಬೈ (ನ.04): ಮಾಧ್ಯಮವಾಗಿ ಸುದ್ದಿ ನೀಡುವುದು ನಮ್ಮ ಜವಾಬ್ದಾರಿ. ಆದರೆ, ಅದಷ್ಟೇ ನಮ್ಮ ಜವಾಬ್ದಾರಿ ಎಂದು ತಿಳಿದುಕೊಂಡಿಲ್ಲ. ಸಾಮಾಜಿಕ ಕಳಕಳಿಯ ಅನೇಕ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಮಾಜದಲ್ಲಿ ಅನೇಕ ಸುಸ್ಥಿರ ಮಾದರಿಗಳಿದ್ದು, ಆ ಮಾದರಿಗಳ ಮೂಲಕ ಸಮಾಜದ ಪ್ರಗತಿ ಕಾಣಬೇಕು ಎಂಬ ನಂಬಿಕೆ ನಮ್ಮದಾಗಿದೆ ಎಂದು ಕನ್ನಡಪ್ರಭ, ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು. ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಮುಂಬೈನ ಪೋವಾಯಿಯ ಪ್ರತಿಷ್ಠಿತ ಸುಪ್ರಿಂ ಬ್ಯುಸಿನೆಸ್ ಪಾರ್ಕ್‌ನಲ್ಲಿ ಆಯೋಜಿಸಿದ್ದ "ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ" ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದರು.
ಉತ್ತರ ಕರ್ನಾಟಕವು ಹಿಂದುಳಿದ ಪ್ರದೇಶ, ಒರಟು ಜನ, ಬರಗಾಲ ಪ್ರದೇಶ. ಅಭಿವೃದ್ಧಿಯಿಂದ ಹಿಂದೆ ಬಿದ್ದಿದೆ, ಅಲ್ಲಿ ಏನೂ ಇಲ್ಲ ಎನ್ನುವ ಮಾತುಗಳಿವೆ. ನಿಜವಾಗಿಯೂ ಉತ್ತರ ಕರ್ನಾಟಕದಲ್ಲಿ ಏನಿಲ್ಲ? ಇಲ್ಲಿ ಕೌಶಲ್ಯಪೂರಿತ ಜನರಿದ್ದಾರೆ. ಸಾಕಷ್ಟು ಜಲ, ಅರಣ್ಯ ಸಂಪನ್ಮೂಲಗಳಿವೆ. ಆದರೆ, ಅದನ್ನು ಗುರುತಿಸಿ ಅದನ್ನು ಹೆಮ್ಮರವಾಗಿ ಅದ್ಭುತವಾಗಿ ಶಕ್ತಿಯಾಗಿಸುವ ಇಚ್ಛಾಶಕ್ತಿ ಕೊರತೆ ಇದೆ. ಈ ಪ್ರದೇಶ ಹಿಂದುಳಿದ ಪ್ರದೇಶ ಎನ್ನುವುದು ಹಳೆಯ ಮಾತು ಎಂದು ಹೇಳಿದರು.
undefined
ಉತ್ತರ ಕರ್ನಾಟಕ ಸಾಧಕರಿಗೆ ಮುಂಬೈಯಲ್ಲಿ ಪ್ರಶಸ್ತಿ: ಬೊಮ್ಮಾಯಿ, ನಟ ನವೀನ ಶಂಕರರಿಂದ ಪ್ರದಾನ
ಉ.ಕ.ದ ಸಂಪತ್ತು ಶೋಧಿಸಿದ್ದೇವೆ: ನಾವು ಮಾಧ್ಯಮವಾಗಿ ಹುಡುಕಿ ಹೋದಾಗ ಅಲ್ಲಿ ಎಲ್ಲವೂ ಇದೆ. ಶಕ್ತಿ, ನೀರು, ಭೂಮಿ, ಜನರು ಇದೆಲ್ಲವೂ ಇದೆ. ಅದನ್ನು ಶೋಧಿಸಿ ರಾಜ್ಯ, ಅಂತಾರಾಜ್ಯಕ್ಕೆ ತೋರಿಸಲು ಹಿಂದೆ ಬಿದ್ದಿದ್ದೇವೆ ಎಂಬುದು ತಿಳಿಯಿತು. ಅದಕ್ಕಾಗಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ ಎಂದ ರವಿ ಹೆಗಡೆ ಅವರು, ಒಂದು ವರ್ಷದ ಹಿಂದೆ ಕರ್ನಾಟಕದ ಏಳು ಅದ್ಭುತಗಳು ಕಾರ್ಯಕ್ರಮ ಆರಂಭಿಸಿದ್ದು, ಅದರ ಪರಿಣಾಮವಾಗಿ ಕರ್ನಾಟಕದ ಏಳು ಅದ್ಭುತಗಳ ಪೈಕಿ ಮೂರು ಉತ್ತರ ಕರ್ನಾಟಕದಲ್ಲಿಯೇ ದೊರಕಿದವು. ಕೊಪ್ಪಳ-ಗಂಗಾವತಿ ಬಳಿಯ ಹಿರೇಬೆಣಕಲ್ ಪ್ರದೇಶ 3-4 ಸಾವಿರ ವರ್ಷಗಳ ಹಲೆಯ ಇತಿಹಾಸ ಹೊಂದಿದೆ. ಜಗತ್ತಿನ ಪ್ರಸಿದ್ಧ ಹಂಪಿ, ವಿಜಯಪೂರದ ಗೋಲಗುಮ್ಮಟ ಅಂತಹ ಅನೇಕ ಅನರ್ಘ್ಯ ರತ್ನಗಳು ದೊರಕಿದ್ದು ಉತ್ತರ ಕರ್ನಾಟಕದಲ್ಲಿ ಎಂದರು.
ಭಾರತ ಜಗತ್ತಿನ ಅತ್ಯಂತ ಆರ್ಥಿಕ ಶಕ್ತಿಗಳಲ್ಲಿ ಒಂದು. ಟಾಟಾ, ಬಿರ್ಲಾ, ಅಂಬಾನಿ, ನಾರಾಯಣಮೂರ್ತಿ ಮಾತ್ರವಲ್ಲದೇ ಸಮಾಜದ ತಳಹಂತದಲ್ಲೂ ದೊಡ್ಡ-ದೊಡ್ಡ ಉದ್ದಿಮೆ, ವ್ಯಾಪಾರಸ್ಥರು ಇದ್ದಾರೆ. ಎಲ್ಲರೂ ಸೇರಿ ಒಂದು ಬಲಿಷ್ಠ ಆರ್ಥಿಕ ಶಕ್ತಿಯಾಗಿದೆ. ಭಾರತವು ವಿಶ್ವದಲ್ಲಿ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದ್ದು, ಆದಷ್ಟು ಬೇಗ ನಮ್ಮ ದೇಶವು 5 ಟ್ರಿಲಿಯನ್ ಆರ್ಥಿಕತೆ ಹೊಂದಬೇಕಿದೆ. ಜೊತೆಯಲ್ಲಿ ಕಾರಣರಾದ ವ್ಯಕ್ತಿಗಳನ್ನು ಹುಡುಕಿ ಅವರನ್ನು ಉತ್ತೇಜಿಸಿ ಮಾದರಿಗಳನ್ನು ಸಮಾಜಕ್ಕೆ ತೋರಿಸಲು ಇಂತಹ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಟ್ರಿಲಿಯನ್ ಸಿಟಿ ಆಗಲಿ: ಆದಷ್ಟು ಬೇಗ ಕರ್ನಾಟಕವು ಅದರಲ್ಲೂ ಬೆಂಗಳೂರು ಒಂದು ಟ್ರಿಲಿಯನ್ ಡಾಲರ್ ಸಿಟಿ ಆಗಬೇಕು ಎಂಬುದು ಸಂಸ್ಥೆಯ ಅಧ್ಯಕ್ಷ ರಾಜೀವ್ ಚಂದ್ರಶೇಖರ ಅವರ ಕನಸು. ಅದಕ್ಕಾಗಿ ಜನರನ್ನು ಉತ್ತೇಜಿಸಲು ಪ್ರಯತ್ನ ನಡೆದೆ. ಅದರ ಭಾಗವಾಗಿ ಮುಂಬೈನಲ್ಲಿ ನಾರ್ಥ ಕರ್ನಾಟಕ ಅಚೀವರ್ಸ್ ಕಾರ್ಯಕ್ರಮ ಮಾಡಲಾಗುತ್ತಿದೆ. ಬರುವ ಜನವರಿಯಲ್ಲಿ ಟ್ರಿಲಿಯನ್ ಡಾಲರ್ ಸಿಟಿ ಕಾರ್ಯಕ್ರಮವನ್ನು ಬೆಂಗಳೂರಲ್ಲಿ ಹಮ್ಮಿಕೊಂಡಿದ್ದು ಮುನ್ನುಡಿಯಾಗಿ ಮುಂಬೈನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಟ್ರಿಲಿಯನ್ ಆರ್ಥಿಕತೆ ಸಾಕಾರವಾಗಲು ನಿಮ್ಮ ಕೊಡುಗೆ ಅಪಾರವಾಗಿದೆ. ಮುಂಬೈ ಅವಾರ್ಡಗಳಾದ ಅತ್ಯಂತ ಗಣ್ಯರಾಗಿದ್ದು, ಅವರಿಗೆ ಪ್ರಶಸ್ತಿ ಪ್ರದಾನ ಮಾಡಲು ತಮಗೆ ಹೆಮ್ಮೆ ಎನಿಸುತ್ತಿದೆ ಎಂದರು.
ಮೋದಿ ಪುಢಾರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರ ಆಕ್ರೋಶ
ಸುದ್ದಿ ಜೊತೆಗೆ ಸಾಮಾಜಿಕ ಕಳಕಳಿಯ ಯೋಚನೆಯಲ್ಲಿ ಕರ್ನಾಟಕದಲ್ಲಿ ಹೊಸ ಟ್ರೇಂಡ್ ಹುಟ್ಟುಹಾಕಿದ ಮಾಧ್ಯಮ ಸಂಸ್ಥೆ ನಮ್ಮದು. ನಾವು ಹುಡುಕಿದ ಅನೇಕ ವ್ಯಕ್ತಿಗಳು ನಮ್ಮ ಪ್ರಶಸ್ತಿ ಮಾತ್ರವಲ್ಲದೇ, ಜಿಲ್ಲಾ,ರಾಜ್ಯ, ರಾಷ್ಟ್ರ ಅಲ್ಲದೇ ಪದ್ಮಶ್ರೀ ಪ್ರಶಸ್ತಿ ಸಹ ಪಡೆಡಿದ್ದಾರೆ. ಮೋದಿ ಅವರ ಮನಕೀ ಬಾತ್ ನಲ್ಲಿ ನಮ್ಮ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ರವಿ ಹೆಗಡೆ ಹೇಳಿದರು. ಸಂಸ್ಥೆಯು ಅನೇಕ ಟ್ರೆಂಡ್ ಸೆಟ್ಟಿಂಗ್ ಚಟುವಟಿಕೆಗಳನ್ನು ನಡೆಸುತ್ತಿದ್ದು, ಕನ್ನಡ ಮಾಧ್ಯಮ ಲೋಕದಲ್ಲಿ ಹೊಸತನ ತಂದ ಸಂಸ್ಥೆಯಾಗಿದೆ. ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಕನ್ನಡದ ಒಂದು ಮಾಧ್ಯಮ ಸಂಸ್ಥೆ ಹೌದು. ಆದರೆ, ನಮ್ಮ ಕಾರ್ಯಚಟುವಟಿಗಳು ಬರೀ ಕನ್ನಡ ನಾಡಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ಕನ್ನಡ ಬರೀ ಭೂ ಪ್ರದೇಶಕ್ಕೆ ಸೀಮಿತವಾಗಿಲ್ಲ. ವಿಸ್ತಾರ ಜಗತ್ತಿನಲ್ಲಿ ಕನ್ನಡದ ಮನಸ್ಸುಗಳು, ವ್ಯಕ್ತಿಗಳು, ಶಕ್ತಿಗಳು ಜಾಗತಿಕ ಶಕ್ತಿಯಾಗಿವೆ. ಹೀಗಾಗಿ ಈ ಪ್ರಯತ್ನವನ್ನು ದೇಶ-ಹೊರ ದೇಶಗಳಿಗೆ ತೆಗೆದುಕೊಂಡು ಹೋಗಲಾಗಿದೆ. ಸಾಗರದಾಚೆಗೆ ಕನ್ನಡ ಡಿಂಡಿಮ ಮೊಳಗಿಸಿದ ಮೊದಲ ಮಾಧ್ಯಮವಾಗಿದೆ. ಬೆಹರಿನ್, ದುಬೈ-ಇಂಡಿಯಾ ಇಂಟರನ್ಯಾಶನಲ್ ಅವಾರ್ಡ್, ಮಲೇಶಿಯಾ-ಇಂಡಿಯಾ ಇಂಟರನ್ಯಾಶಲ್ ಐಕಾನಿಕ್ ಅವಾರ್ಡ್ ನೀಡಲಾಗಿದ್ದು ಬರುವ ದಿನಗಳಲ್ಲಿ ಲಂಡನ್‌ನಲ್ಲೂ ನಮ್ಮ ಸಂಸ್ಥೆ ಇತಿಹಾಸ ಸೃಷ್ಟಿಸಲಿದೆ ಎಂದು ರವಿ ಹೆಗಡೆ ಹೆಮ್ಮೆ ವ್ಯಕ್ತಪಡಿಸಿದರು.