ಶಿವಮೊಗ್ಗ ನಗರದ ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸತ್ತ ಸ್ಥಿತಿಯಲ್ಲಿ ಚಿರತೆಯ ಶವ ಪತ್ತೆಯಾಗಿದೆ. ಮಹಾತ್ಮ ಗಾಂಧಿ ವಿದ್ಯುತ್ ಗಾರಕ್ಕೆ ತೆರಳುವ ಮಾರ್ಗದ ಮಧ್ಯೆ ಪತ್ತೆಯಾಗಿರುವ ಮೃತ ಚಿರತೆ. ಮಾಹಿತಿ ತಿಳಿದು ಕಾರ್ಗಲ್ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ (ನ.20): ಶಿವಮೊಗ್ಗ ನಗರದ ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸತ್ತ ಸ್ಥಿತಿಯಲ್ಲಿ ಚಿರತೆಯ ಶವ ಪತ್ತೆಯಾಗಿದೆ. ಮಹಾತ್ಮ ಗಾಂಧಿ ವಿದ್ಯುತ್ ಗಾರಕ್ಕೆ ತೆರಳುವ ಮಾರ್ಗದ ಮಧ್ಯೆ ಪತ್ತೆಯಾಗಿರುವ ಮೃತ ಚಿರತೆ. ಮಾಹಿತಿ ತಿಳಿದು ಕಾರ್ಗಲ್ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಶುವೈದ್ಯರಿಂದ ಶವಪರೀಕ್ಷೆ ನಡೆಸಿದ ಅರಣ್ಯಾಧಿಕಾರಿಗಳು. ಮೃತಪಟ್ಟ ಚಿರತೆಯ ಕುತ್ತಿಗೆ ಬಳಿ ಮಾತ್ರ ಗಾಯವಾಗಿದ್ದು, ಈ ಭಾಗದಲ್ಲಿ ಮೂರು ಹಲ್ಲಿನ ಗುರುತು ಕಂಡು ಬಂದಿದೆ. ಹೀಗಾಗಿ ಎರಡು ಚಿರತೆಗಳ ನಡುವಿನ ಜಗಳದಲ್ಲಿ ಗಾಯಗೊಂಡು ಚಿರತೆ ಸತ್ತಿರಬಹುದು ಎಂದು ಪ್ರಾಥಮಿಕ ಹಂತದಲ್ಲಿ ಕಂಡು ಬಂದಿದೆ ಎಂದು ಕಾರ್ಗಲ್ ವಿಭಾಗದ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅಗಸೆ ಮಾಹಿತಿ ನೀಡಿದ್ದಾರೆ.
ಚಿರತೆಯನ್ನು ಬೆದರಿಸಿ ಬಾಲಕಿಯನ್ನು ಉಳಿಸಿಕೊಂಡ ತಂದೆ
ಸುಮಾರು 2 ವರ್ಷದ ಚಿರತೆಯ ಶವವನ್ನು ಜೋಗದ ನೇಚರ್ ಕ್ಯಾಂಪ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅಂತ್ಯಸಂಸ್ಕಾರ ನಡೆಸಲಾಯಿತು. ಶವಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯುವ ಸಾಧ್ಯತೆ.