ಬೈಕ್ ಮೇಲೆ ಚಿರತೆಯೊಂದು ಎರಗಿ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವಾದ ಘಟನೆ ರಾಣೇಬೆನ್ನೂರು- ಬೈಂದೂರು ಹೆದ್ದಾರಿಯ ನಗರದ ಸಮೀಪ ದರ್ಗಾ ಹೆರಗೊಡಿಗೆ ಬಳಿ ಶನಿವಾರ ಸಂಜೆ ನಡೆದಿದೆ.
ಹೊಸನಗರ (ಜು.14): ಬೈಕ್ ಮೇಲೆ ಚಿರತೆಯೊಂದು ಎರಗಿ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವಾದ ಘಟನೆ ರಾಣೇಬೆನ್ನೂರು- ಬೈಂದೂರು ಹೆದ್ದಾರಿಯ ನಗರದ ಸಮೀಪ ದರ್ಗಾ ಹೆರಗೊಡಿಗೆ ಬಳಿ ಶನಿವಾರ ಸಂಜೆ ನಡೆದಿದೆ. ನಗರ ನಿವಾಸಿ ಪುರೋಹಿತ ಸುಬ್ರಹ್ಮಣ್ಣ ನಾವುಡ ಚಿರತೆ ಬಾಯಿಯಿಂದ ಬಚಾವಾದ ಅದೃಷ್ಟವಂತರಾಗಿದ್ದಾರೆ.
ಹೊಸನಗರದಿಂದ ನಗರಕ್ಕೆ ಬೈಕ್‌ನಲ್ಲಿ ಬರುತ್ತಿದ್ದರು. ಈ ಸಂದರ್ಭ ಶೂಲದ ಗುಡ್ಡದ ಕಡೆಯಿಂದ ಬೈಕ್ ಮೇಲೆ ಚಿರತೆ ಜಿಗಿದಿದೆ. ಗುರಿ ತಪ್ಪಿ ಬೈಕ್ ಮುಂಭಾಗಕ್ಕೆ ಜಿಗಿದು ಘರ್ಜಿಸಿದೆ. ಈ ಸಂದರ್ಭ ಏನೂ ಮಾಡಲು ತೋಚದ ಬೈಕ್ ಸವಾರ ಬೈಕ್ ಹಾರ್ನ್ ಒತ್ತಿಕೊಂಡೇ ಕಿರುಚಲು ಶುರುಮಾಡಿದ್ದಾರೆ. ಈ ವೇಳೆ ಚಿರತೆ ರಸ್ತೆಯ ಮತ್ತೊಂದು ದಿಬ್ಬಕ್ಕೆ ನೆಗೆದು ಮರೆಯಾಗಿದೆ.
Mandya: ಚಿರತೆ ದಾಳಿಗೆ ಬಲಿಯಾದ ಕರು ಪತ್ತೆ ಹಚ್ಚಿದ ತಾಯಿ ಹಸು!
ಅರಣ್ಯ ಇಲಾಖೆಗೆ ಮಾಹಿತಿ: ಚಿರತೆ ಕಾಣಿಸಿಕೊಂಡ ಕುರಿತಾಗಿ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಬಸವನಬ್ಯಾಣ, ಹಿಲ್ಕುಂಜಿ, ಅರೋಡಿ, ಹೆದ್ಲಿ ಸೇರಿದಂತೆ ನಗರ ಸುತ್ತಮುತ್ತ ಭಾಗದಲ್ಲಿ ಚಿರತೆ ಕಾಣಿಸಿಕೊಂಡ ಮಾಹಿತಿ ಹರಿದಾಡುತ್ತಿದೆ. ಅಲ್ಲದೇ, ಮೂರ್ನಾಲ್ಕು ಜಾನುವಾರುಗಳನ್ನು ಚಿರತೆ ಎಳೆದುಕೊಂಡು ಹೋಗಿದೆ ಎಂಬುದು ಸ್ಥಳೀಯ ಮಾಹಿತಿಯಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿ-ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಾಗಿದೆ.
ಚಿರತೆ ಹೆಜ್ಜೆ ಪತ್ತೆ: ಮಲಪ್ರಭಾ ನದಿ ದಡದಲ್ಲಿರುವ ಕೆಲವು ಜಮೀನುಗಳಲ್ಲಿ ಚಿರತೆ ಹೆಜ್ಜೆ ಎನ್ನಲಾದ ಗುರುತು ಪತ್ತೆಯಾಗಿದ್ದರಿಂದ ಜಿಲ್ಲೆಯ ಬಾದಾಮಿ ತಾಲೂಕಿನ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬಾದಾಮಿ ತಾಲೂಕಿನ ಸುಳ್ಳ ಗ್ರಾಮದ ಬಳಿಯ ಜಮೀನೊಂದರಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಇದು ಚಿರತೆಯ ಹೆಜ್ಜೆ ಗುರುತಾಗಿದ್ದು ಇಲ್ಲಿ ಚಿರತೆ ಇದೆ ಎಂದು ನಂಬಿರುವ ಗ್ರಾಮಸ್ಥರು ಹೊಲಗದ್ದೆಗಳಿಗೂ ಸಹ ಹೋಗಲು ಭಯಪಡುತ್ತಿದ್ದಾರೆ. ನದಿ ಭಾಗದ ಸುಳ್ಳ, ಕಿತ್ತಲಿ, ಹೆಬ್ಬಳ್ಳಿ, ಗೋವಿನಕೊಪ್ಪ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಆತಂಕ ಮನೆ ಮಾಡಿದ್ದು ನದಿ ತೀರದ ಗ್ರಾಮಗಳಲ್ಲಿ ಧ್ವನಿವರ್ಧಕದ ಮೂಲಕ ಗ್ರಾಮ ಪಂಚಾಯ್ತಿಯಿಂದ ಜಾಗ್ರತಿ ಮೂಡಿಸುವ ಕಾರ್ಯವು ನಡೆದಿದೆ.
Raichur: ನೀರಮಾನ್ವಿ ಗ್ರಾಮದ ಬಳಿ ಕಾಣಿಸಿಕೊಂಡ ಚಿರತೆ: ಗ್ರಾಮಸ್ಥರು ಆತಂಕ
ಅರಣ್ಯಾಧಿಕಾರಿಗಳಿಂದ ಪರಿಶೀಲನೆ: ಘಟನೆಯ ಮಾಹಿತಿ ಪಡೆದ ಬಾದಾಮಿ ತಾಲೂಕಿನ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆ ಬದಲು ಕತ್ತೆ ಕಿರುಬದ ಹೆಜ್ಜೆ ಗುರುತು ಇದಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಚಿರತೆ ಅಥವಾ ಕತ್ತೆಕಿರುಬು ಇರುವಿಕೆ ಕುರಿತು ಗ್ರಾಮಗಳಲ್ಲಿ ಭಯ ಆವರಿಸಿದ್ದರಿಂದ ಈ ಭಾಗದ ಕೆಲವು ಗ್ರಾಮಗಳಲ್ಲಿ ಚಿರತೆ ಬೋನ್ ಸಹ ಇರಿಸಲಾಗಿದ್ದು, ಚಿರತೆ ಪತ್ತೆಗೆ ಕ್ಯಾಮೆರಾಗಳ ಅಳವಡಿಕೆ ಕಾರ್ಯವನ್ನು ಸಹ ಅರಣ್ಯ ಇಲಾಖೆ ಮಾಡುತ್ತಿದೆ. ಆದರೆ, ಈವರೆಗೆ ಚಿರತೆ ಪತ್ತೆಯಾಗಿಲ್ಲ.