ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಖಾಲಿ ಖಾಲಿ; ಪಿಂಡ ಪ್ರದಾನಕ್ಕೂ ನೀರಿಲ್ಲ!

By Ravi Janekal  |  First Published Sep 24, 2023, 7:40 PM IST

ಕೊಡಗು ಜಿಲ್ಲೆಯೆಂದರೆ ವರ್ಷದ ಆರು ತಿಂಗಳು ಮಳೆ ಸುರಿಯುವ ಜಿಲ್ಲೆ, ಅಲ್ಲಿ ಆರು ತಿಂಗಳು ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ಇರುತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಕೊಡಗು ಜಿಲ್ಲೆಯಲ್ಲಿ ಕೆಲವು ದಿನಗಳು ಮಾತ್ರವೇ ಮಳೆ ಸುರಿದಿದೆ.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಸೆ.24) : ಕೊಡಗು ಜಿಲ್ಲೆಯೆಂದರೆ ವರ್ಷದ ಆರು ತಿಂಗಳು ಮಳೆ ಸುರಿಯುವ ಜಿಲ್ಲೆ, ಅಲ್ಲಿ ಆರು ತಿಂಗಳು ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ಇರುತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಕೊಡಗು ಜಿಲ್ಲೆಯಲ್ಲಿ ಕೆಲವು ದಿನಗಳು ಮಾತ್ರವೇ ಮಳೆ ಸುರಿದಿದೆ.

Latest Videos

undefined

ಜುಲೈ ತಿಂಗಳ ಕೊನೆ ಮತ್ತು ಆಗಸ್ಟ್ ತಿಂಗಳ ಕೊನೆಯಲ್ಲಿ ಎರಡು ಮಳೆಗಳು ಸುರಿದಿದ್ದವು. ಇದನ್ನು ಬಿಟ್ಟರೆ ಜಿಲ್ಲೆಯಲ್ಲಿ ಬಹುತೇಕ ಬಿಸಿಲಿನ ಛಾಯೆ ಇತ್ತು. ಕಳೆದ ವರ್ಷಗಳವರೆಗೂ ಸೆಪ್ಟೆಂಬರ್ ತಿಂಗಳಾದರೂ ಕೊಡಗಿನಲ್ಲಿ ಉತ್ತಮ ಮಳೆ ಸುರಿದಿತ್ತು. ಆದರೆ ಈ ಬಾರಿ ಸೆಪ್ಟೆಂಬರ್ ಆರಂಭದಿಂದಲೇ ಮಳೆ ಇಲ್ಲದಂತೆ ಆಗಿದೆ. ಇದರಿಂದ ಕಾವೇರಿ ನದಿಯ ಪವಿತ್ರ ತ್ರಿವೇಣಿ ಸಂಗಮ ಬಹುತೇಕ ಖಾಲಿ ಖಾಲಿಯಾಗಿದೆ. 

ಬೆಂಗಳೂರು ಬಂದ್: ಸ್ವರೂಪ ನೋಡಿಕೊಂಡು ಬಸ್ ಸಂಚಾರದ ಬಗ್ಗೆ ಅಂತಿಮ ನಿರ್ಧಾರ- ರಾಮಲಿಂಗಾರೆಡ್ಡಿ

ಇದು ಅಕ್ಟೋಬರ್ ತಿಂಗಳಲ್ಲಿ ನಡೆಯುವ ಕಾವೇರಿ ತೀರ್ಥೋದ್ಭವದ ಸಂದರ್ಭ ಪಿಂಡ ಪ್ರದಾನ ಮಾಡಿ ಪುಣ್ಯ ಸ್ನಾನ ಮಾಡುವ ಭಕ್ತರಿಗೆ ತೀವ್ರ ಸಮಸ್ಯೆ ತಂದೊಡ್ಡುವಂತೆ ಮಾಡಿದೆ. ತೀರ್ಥೋದ್ಭವದ ಸಂದರ್ಭದಲ್ಲಿ ಪಿಂಡ ಪ್ರದಾನ ಮಾಡಿ ತ್ರಿವೇಣಿ ಸಂಗಮದಲ್ಲಿ ಬಿಟ್ಟರೆ ಮೃತಪಟ್ಟಿರುವವರಿಗೆ ಮೋಕ್ಷ ದೊರೆಯುತ್ತದೆ ಎನ್ನುವ ಬಲವಾದ ನಂಬಿಕೆ ಇದೆ. ಹೀಗೆ ಪಿಂಡ ಪ್ರದಾನ ಮಾಡುವಾಗ ತ್ರಿವೇಣಿ ಸಂಗಮದಲ್ಲಿ ನೀರಿನ ಮುಳುಗಿ ಏಳಲೇ ಬೇಕು. ಆದರೆ ತ್ರಿವೇಣಿ ಸಂಗಮದಲ್ಲಿ ನೀರು ಬಹುತೇಕ ಖಾಲಿಯಾಗಿದ್ದು ಪಿಂಡ ಬಿಟ್ಟ ನಂತ ಅಲ್ಲಿ ನೀರಿನಲ್ಲಿ ಮುಳುಗೇಳುವುದಕ್ಕೆ ಸಾಧ್ಯವೇ ಎನ್ನುವಂತೆ ಆಗಿದೆ. 


ಈ ಸ್ಥಿತಿಯನ್ನು ನೋಡಿದರೆ ತವರು ಜಿಲ್ಲೆಯಾಗಿರುವ ಕೊಡಗಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಬಹುದು ಎನ್ನುವ ಪರಿಸ್ಥಿತಿ ಈಗಲೇ ನಿರ್ಮಾಣವಾಗುವಂತೆ ಕಾಣಿಸುತ್ತಿದೆ. ಕಾವೇರಿಯ ಒಡಲು ಹೀಗೆ ಬರಿದಾಗುತ್ತಿರುವುದು ಕೊಡಗಿಗೆ ಅಷ್ಟೇ ಅಲ್ಲ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸಮಸ್ಯೆ ಎದುರಾಗಲಿದೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರನ್ನು ಬಿಡಬೇಕು ಎನ್ನುವ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಆದೇಶವನ್ನು ಪಾಲಿಸಿ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ. ಹೀಗಾಗಿ ಸರ್ಕಾರದ ವಿರುದ್ಧ ಮಂಡ್ಯ ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ವಿವಿಧ ಸಂಘ ಸಂಸ್ಥೆಗಳು ಕರ್ನಾಟಕ ಬಂದ್ ಗೆ ಈಗಾಗಲೇ ಕರೆ ನೀಡಿವೆ. 

 

ಕಾವೇರಿ ಜಲವಿವಾದ: ಕಾನೂನು ಹೋರಾಟದಿಂದ ಬಗೆಹರಿಯೋದಿಲ್ಲ; ಮಾತುಕತೆ ಮೂಲಕ ಸಾಧ್ಯ: ಎಚ್‌ಡಿಡಿ

 ಆದರೆ ಕೊಡಗು ಜಿಲ್ಲೆಯಲ್ಲೇ ಕುಡಿಯುವ ನೀರಿಗೂ ಸಮಸ್ಯೆ ತಲೆದೋರಲಿದೆ ಎನ್ನುವುದನ್ನು ಯಾರೂ ಗಮನಹರಿಸುತ್ತಿಲ್ಲ. ಇದೆಲ್ಲವುಗಳಿಗೆ ಪರಿಹಾರ ಹುಡುಕಬೇಕಾದರೆ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಸರ್ಕಾರ ನಿಲ್ಲಿಸಬೇಕು. ಇಲ್ಲದಿದ್ದರೆ ಬೆಂಗಳೂರು, ಮಂಡ್ಯ ಭಾಗದಲ್ಲಿ ಹೊತ್ತಿರುವ ಕಾವೇರಿ ಹೋರಾಟದ ಕಿಚ್ಚು ಕೊಡಗು ಜಿಲ್ಲೆಗೂ ವ್ಯಾಪಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಶ್ರೀಧರ್ ಎಂಬುವವರು ಅಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾವೇರಿ ನದಿ ಈ ಮಟ್ಟಿಗೆ ಬತ್ತಿ ಹೋಗುತ್ತಿರುವುದರಿಂದ ಪಿಂಡ ಪ್ರದಾನ ಮಾಡುವುದಕ್ಕೆ ಅವಕಾಶವಿಲ್ಲದಂತ ಸ್ಥಿತಿ ತ್ರಿವೇಣಿ ಸಂಗಮದಲ್ಲಿ ನಿರ್ಮಾಣವಾಗಿದೆ. ಇದರಿಂದ ಕೊಡಗಿನಲ್ಲಿ ಕಾವೇರಿ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಕಿರಣ್ ಎನ್ನುವವರು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮಳೆಯ ತೀವ್ರ ಕೊರತೆಯಿಂದ ಕಾವೇರಿ ನದಿ ಬತ್ತಿಹೋಗುತ್ತಿರುವುದು ಕೊಡಗಿನ ಜನರು ಆತಂಕಪಡುವಂತೆ ಮಾಡಿದೆ.

click me!