ಸಿಎಂ ಭೇಟಿ ಮಾಡಿದ ಕುರುಬೂರು : ರೈತ ಸಮಸ್ಯೆಗಳ ಮನವರಿಕೆ

By Kannadaprabha NewsFirst Published Jul 31, 2021, 12:44 PM IST
Highlights
  • ನೂತನ ಸಿಎಂ ಬೊಮ್ಮಾಯಿ  ಅವರಿಗೆ ಅಭಿನಂದನೆ
  • ದೆಹಲಿಯ ಕರ್ನಾಟಕ ಭವನದಲ್ಲಿ ಅಭಿನಂದನಾ ಸಮಾರಂಭ 
  • ಸಿಎಂ ಭೇಟಿಯಾಗಿ ರೈತ ಸಮಸ್ಯೆಗಳ ಮನವರಿಕೆ ಮಾಡಿದ ಕುರುಬೂರು ಶಾಂತಕುಮಾರ್

   ನವದೆಹಲಿ (ಜು.31):  ರಾಜ್ಯದ ನೂತನ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಅವರಿಗೆ ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಅಭಿನಂದನಾ ಸಮಾರಂಭ ನಡೆಸಲಾಯಿತು. 

 ಅಭಿನಂದನೆ ಸಲ್ಲಿಸಿದ ಬಳಿಕ ಕರ್ನಾಟಕ ಭವನದಲ್ಲಿಯೇ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಭೇಟಿ ಮಾಡಿ ರಾಜ್ಯದ ರೈತರ ಹಲವಾರು ಸಮಸ್ಯೆಗಳ ಬಗ್ಗೆ ಗಮನಸೆಳೆದರು.

ಸಂಪುಟ ರಚನೆ ಒಂದು ವಾರ ಅನುಮಾನ: ಅಧಿಕಾರಿಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ!

 ಮಹದಾಯಿ ನದಿ ನೀರಿನ ಸಮಸ್ಯೆ, ಮೇಕೆದಾಟು ಯೋಜನೆ, ಕೂಡಲೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಕೊರೋನಾ ನಂತರ ರೈತರ ಸ್ಥಿತಿಗತಿ ತುಂಬಾ ದುರ್ಬಲವಾಗಿದೆ. ಕನಿಷ್ಠ ಆದಾಯವೇ ಇಲ್ಲದಂತಾಗಿದೆ ಬದುಕು ದುಸ್ತರವಾಗಿದೆ. ಕಬ್ಬಿನ ದರ ಇನ್ನೂ ನಿಗದಿಯಾಗಿಲ್ಲ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರನ್ನು ಪದೇಪದೇ ಬದಲಾಯಿಸುತ್ತಿರುವುದು ಕಬ್ಬು ಬೆಳೆಗಾರರಿಗೆ  ಸಮಸ್ಯೆ ಹೆಚ್ಚಲು ಕಾರಣವಾಗುತ್ತದೆ ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

 ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಕಾರ್ಯದರ್ಶಿಗಳಾದ ಅಶೋಕ್ ದಳವಾಯಿ ರೈತರ ಹಲವು ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

 ರೈತ ಮುಖಂಡರಾದ ಎನ್ ಎಚ್ ದೇವಕುಮಾರ್, ಎಂಜಿ ಸಿಂದಗಿ ಈ ವೇಳೆ ಹಾಜರಿದ್ದರು. 

click me!