ಶಕ್ತಿ ಯೋಜನೆಯೊಂದಿಗೆ 2024ರಲ್ಲಿ 9 ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆಎಸ್‌ಆರ್‌ಟಿಸಿ!

By Sathish Kumar KH  |  First Published Jan 1, 2025, 6:08 PM IST

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 9 ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. 6 ಆಡ್‌ವರ್ಕ್ಡ್ ಶೋಡೌನ್ ಚಿನ್ನದ ಪ್ರಶಸ್ತಿ, 2 ಗ್ರೋ ಕೇರ್ ಇಂಡಿಯಾ ಹಾಗೂ 1 PRSI ರಾಷ್ಟ್ರೀಯ ಪ್ರಶಸ್ತಿ ಸೇರಿ ಒಟ್ಟು 9 ಪ್ರಶಸ್ತಿಗಳನ್ನು ಪಡೆದಿದೆ.


ಬೆಂಗಳೂರು (ಜ.01): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಸಂಸ್ಥೆಗಳ ವಾಹನದಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕವೂ ತನ್ನ ಉತ್ತಮ ಕಾರ್ಯವೈಖರಿಯೊಂದಿಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) 9 ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಕುರಿತು ಕೆಎಸ್‌ಆರ್‌ಟಿಸಿಯಿಂದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದ್ದು, 2024ರಲ್ಲಿ ಯಾವಾವ ಪ್ರಶಸ್ತಿಗಳನ್ನು ಪಡೆದಿದೆ ಎಂಬ ವಿವರವನ್ನು ಹಂಚಿಕೊಂಡಿದದೆ. ಕಳೆದ 2024ರಲ್ಲಿ ಕೆಎಸ್ಆರ್‌ಟಿಸಿ 9 ರಾಷ್ಟ್ರದ ಮಟ್ಟದ ಪ್ರಶಸ್ತಿಗಳುಗಳನ್ನು ಪಡೆದುಕೊಂಡಿದೆ. ಅದರಲ್ಲಿ 6 ಆಡ್‌ವರ್ಕ್ಡ್ ಶೋಡೌನ್ (AdWorld Showdown) ಚಿನ್ನದ ಪ್ರಶಸ್ತಿ, 2 ಗ್ರೋ ಕೇರ್ ಇಂಡಿಯಾ (Grow Care India) ಹಾಗೂ 1 PRSI ರಾಷ್ಟ್ರೀಯ  ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Tap to resize

Latest Videos

AdWorld Showdown ಪ್ರಶಸ್ತಿ ಬಂದ ವಿಭಾಗಗಳು:

  1. ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಪರಿಚಯ- ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ
  2. ಅಂಬಾರಿ ಉತ್ಸವ ಬಸ್   ಅತ್ಯುತ್ತಮ ಬ್ರಾಂಡ್ ಅನುಭವ.
  3. ಅಶ್ವಮೇಧ ಕ್ಲಾಸಿಕ್ ಬಸ್ಸುಗಳು- ಅತ್ಯುತ್ತಮ ಕಾರ್ಪೊರೇಟ್ ಸಂವಹನ ಹಾಗೂ ನಿರ್ವಹಣೆ
  4. ಪಲ್ಲಕ್ಕಿ ಬಸ್ಸುಗಳ -ಅತ್ಯುತ್ತಮ ಗ್ರಾಹಕ ಸ್ವೀಕೃತಿ
  5. ಪ್ರತಿಷ್ಠಿತ ಬಸ್ಸು ಸೇವೆಗಳ ಬ್ರಾಂಡಿಂಗ್- ಅತ್ಯುತ್ತಮ ಸಾರ್ವಜನಿಕ ಸಂಪರ್ಕ
  6. ಅಶ್ವಮೇಧ ಕ್ಲಾಸಿಕ್ ಬಸ್ಸುಗಳು- ವರ್ಷದ ಅತ್ಯುತ್ತಮ ಬ್ರ್ಯಾಂಡ್

ಗ್ರೋ ಕೇರ್ ಇಂಡಿಯಾ ವತಿಯಿಂದ ಕೊಡಮಾಡಲಾಗುವ ಪ್ರಶಸ್ತಿ ವಿಭಾಗದಲ್ಲಿ ಕೆಎಸ್‌ಆರ್‌ಟಿಸಿ ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಟಾನಕ್ಕಾಗಿ ಎರಡು ವಿಭಾಗದಲ್ಲಿ ಪಡೆದಿರುತ್ತದೆ.  ಇದರ ಜೊತೆಗೆ, PRSI ರಾಷ್ಟ್ರೀಯ ಪ್ರಶಸ್ತಿಯನ್ನು ನಿಗಮಕ್ಕೆ ಕಾರ್ಪೋರೇಟ್ ಚಿತ್ರ ವಿಭಾಗದಲ್ಲಿ ಪಡೆದುಕೊಂಡಿದೆ. ನಿಗಮಕ್ಕೆ AdWorld ಪ್ರಶಸ್ತಿಗಳನ್ನು ನವದೆಹಲಿಯಲ್ಲಿ, ಗ್ರೋ ಕೇರ್ ಇಂಡಿಯಾ ಪ್ರಶಸ್ತಿಗಳನ್ನು ಗೋವಾದಲ್ಲಿ ಹಾಗೂ ಪಿ.ಆರ್.ಎಸ್.ಐ ಪ್ರಶಸ್ತಿಯನ್ನು ರಾಯಪುರದಲ್ಲಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್; ಸಾರಿಗೆ ಇಲಾಖೆಗೆ ₹2000 ಕೋಟಿ ಸಾಲ ಪಡೆಯಲು ಒಪ್ಪಿಗೆ ಕೊಟ್ಟ ಸರ್ಕಾರ!

ಇದಲ್ಲದೇ ಕೆಎಸ್‌ಆರ್‌ಟಿಸಿಗೆ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿ ಮತ್ತು ಗೋಲ್ಡನ್ ಸ್ಟಾರ್  ಪ್ರಶಸ್ತಿ-2024ಯೂ ಬಂದಿದೆ. ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿ ಮತ್ತು ನಿಗಮದ ಪ್ರತಿಷ್ಠಿತ ಬ್ಯ್ರಾಂಡಿಂಗ್ ಉಪಕ್ರಮಗಳಿಗಾಗಿ ಗೋಲ್ಡನ್ ಸ್ಟಾರ್ ಪ್ರಶಸ್ತಿ ಲಭಿಸಿರುತ್ತದೆ. ಬೆಂಗಳೂರಿನ ಹೋಟೆಲ್ ತಾಜ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊಫೆಸರ್ ಡಾ. ರಾಮಪ್ರಸಾದ್ ಬ್ಯಾನರ್ಜಿಯವರು, EIILM, ಕೊಲ್ಕತ್ತ, ಶ್ರೀ. ಸಂಜಯ್ ರಾಮದಾಸ್ ಕಾಮತ್, ಹಿರಿಯ ಉಪಾಧ್ಯಕ್ಷರು ಮತ್ತು ಬಿಸಿನೆಸ್ ಮುಖ್ಯಸ್ಥರು, SASIA ರವರು, ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. 

ಇದನ್ನೂ ಓದಿ: ಹೊಸ ವರ್ಷಕ್ಕೆ ಬಸ್‌ ಪ್ರಯಾಣ ದರ ಹೆಚ್ಚಳ?

ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2024: ಕೆಎಸ್‌ಆರ್‌ಟಿಸಿ ನಿಗಮದ ನೌಕರರಿಗೆ ಹೃದಯ ಸಂಬಂಧಿ ಆರೋಗ್ಯ ತಪಾಸಣೆ ಮತ್ತು ಮುಂಜಾಗ್ರತೆ ವಹಿಸುವ ಉಪಕ್ರಮಗಳಿಗಾಗಿ 'ಸಾರಿಗೆ ಸಂಜೀವಿನಿ' ಎಂಬ ಯೋಜನೆ ಜಾರಿಗೆ ತರಲಾಗಿದ್ದು, ಸದರಿ ಉಪಕ್ರಮಕ್ಕಾಗಿ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುತ್ತದೆ.  ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ  ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ. 

click me!