
ರಾಜ್ಯದ ಪತ್ರಕರ್ತರಿಗೆ 2017 ರಿಂದ 2023ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಿಸಲಾಗಿದೆ. ಸುವರ್ಣ ನ್ಯೂಸ್ ವಿನೋದ್‌ಕುಮಾರ್ ನಾಯ್ಕ್ 2019ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಕನ್ನಡಪ್ರಭ ಎಕ್ಸಿಕ್ಯುಟಿವ್ ಎಡಿಟರ್ ಎಸ್.ಗಿರೀಶ್ ಬಾಬುಗೆ 2023ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಬಾಹ್ಯಾಕಾಶ, ರಕ್ಷಣಾ ವಿಶ್ಲೇಷಕರಾದ ಲೇಖಕ, ಸುವರ್ಣ ನ್ಯೂಸ್ ವೆಬ್ ಅಂಕಣಕಾರರಾರದ ಗಿರೀಶ್ ಲಿಂಗಣ್ಣ ಅವರಿಗೆ 2019ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟವಾಗಿದೆ. ರಾಜ್ಯದ ವಿವಿಧ ಒಟ್ಟು 14 ಪತ್ರಕರ್ತರಿಗೆ ಸರ್ಕಾರ ಪ್ರಶಸ್ತಿ ಪ್ರಕಟಿಸಿದ್ದು, ಪ್ರಶಸ್ತಿ ಫಲಕದ ಜೊತೆಗೆ 1 ಲಕ್ಷ ರೂ ನಗದು ಬಹುಮಾನ ದೊರೆಯಲಿದೆ.
ನ್ಯಾಚುರಲ್ ಸ್ಟಾರ್ ನಾನಿ 'ಹಿಟ್ 3' ಚಿತ್ರೀಕರಣದ ವೇಳೆ ದುರಂತ: ಸಹಾಯಕ ಛಾಯಾಗ್ರಾಹಕಿ ನಿಧನ
ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಪ್ರಶಸ್ತಿ ಪಡೆದ ಪತ್ರಕರ್ತರು:
ಚೀ.ಜ ರಾಜೀವ್ -ಸುದ್ದಿ ಸಂಪಾದಕರು ವಿಜಯ ಕರ್ನಾಟಕ (2017)
ದೇವಯ್ಯ ಗುತ್ತೇದಾರ್ - ಸ್ಥಾನಿಕ ಸಂಪಾದಕರು ವಿಜಯ ಕರ್ನಾಟಕ (2018)
ಗಿರೀಶ್ ಲಿಂಗಣ್ಣ- ಅಂಕಣಕಾರರು, ಸುವರ್ಣನ್ಯೂಸ್ ವೆಬ್ (2019)
ಯೋಗೇಶ್ ಎಂ ಎನ್ - ಹಿರಿಯ ವರದಿಗಾರರು ಪ್ರಜಾವಾಣಿ (2020)
ನೌಶಾದ್ ಬಿಜಾಪುರ - ಹಿರಿಯ ಸಂಪಾದಕರು, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (2022)
ಸತೀಶ್ ಜಿ ಟಿ - ಹಿರಿಯ ಸಹ ಸಂಪಾದಕರು,ದಿ ಹಿಂದೂ ಆಂಗ್ಲ ದಿನ ಪತ್ರಿಕೆ (2022)
ಎಸ್ ಗಿರೀಶ್ ಬಾಬು - ಕಾರ್ಯ ನಿರ್ವಾಹಕ ಸಂಪಾದಕರು, ಕನ್ನಡಪ್ರಭ (2023)
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಪತ್ರಕರ್ತರು:
ವಿಜಯಲಕ್ಷ್ಮಿ ಶಿಬರೂರು- ಹಿರಿಯ ಪತ್ರಕರ್ತೆ (2017)
ಬಿಎಂಟಿ ರಾಜೀವ್ , ಹವ್ಯಾಸಿ ಪತ್ರಕರ್ತರು (2018)
ವಿನೋದ್ ನಾಯ್ಕ್ - ಸಂಪಾದಕರು -ವಿಶೇಷ ಯೋಜನೆಗಳು ಏಷ್ಯಾನೆಟ್ ಸುವರ್ಣನ್ಯೂಸ್ (2019)
ಮಾಲತೇಶ ಅಂಗೂರ - ಮುಖ್ಯ ವರದಿಗಾರರು ಕೌರವ ಪತ್ರಿಕೆ (2020)
ಸುಧೀರ್ ಶೆಟ್ಟಿ - ಹವ್ಯಾಸಿ ಪರಿಸರ ಛಾಯಾಗ್ರಾಹಕ (2021)
ಮಲ್ಲಿಕಾರ್ಜುನ ಹೊಸಪಾಳ್ಯ, ಹವ್ಯಾಸಿ ಪತ್ರಕರ್ತರು (2022)
ಆರ್.ಮಂಜುನಾಥ್ , ಪ್ರಧಾನ ವರದಿಗಾರರು ಪ್ರಜಾವಾಣಿ (2023)
ನಿರ್ಮಲಾನಂದ ಸ್ವಾಮೀಜಿ ಅಭಿನಂದನೆ:
ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ನಿರ್ಮಲಾನಂದ ಸ್ವಾಮೀಜಿಯವರು ಅಭಿನಂದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ