ಅಯ್ಯಪ್ಪ ಮಾಲಾಧಾರಿಗಳಿಗೆ ಕೆಎಸ್ಆರ್‌ಟಿಸಿ ಗುಡ್‌ನ್ಯೂಸ್ : ಶಬರಿಮಲೆಗೆ ವೋಲ್ವೋ ಬಸ್ ಸೇವೆ ಆರಂಭ

By Sathish Kumar KH  |  First Published Nov 27, 2023, 3:15 PM IST

ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಪ್ರಯಾಣಿಕರು ಶಬರಿಮಲೆಗೆ ಹೋಗಲು ಅನುಕೂಲ ಆಗುವಂತೆ ಕೆಎಸ್ಆರ್‌ಟಿಸಿ ವತಿಯಿಂದ ಡಿ.1ರಿಂದ ವೋಲ್ವೋ ಬಸ್‌ ಸೇವೆಯನ್ನು ಆರಂಭಿಸಲಾಗುತ್ತಿದೆ.


ಬೆಂಗಳೂರು (ನ.27): ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಅಯ್ಯಪ್ಪಸ್ವಾಮಿ ಮಾಲೆ ಧರಿಸಿಕೊಂಡು ಶಬರಿಗಿರಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಆದರೆ, ಶಬರಿಮಲೆಗೆ ಹೋಗಲು ಅನುಕೂಲ ಆಗುವಂತೆ ಈ ವರ್ಷದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವತಿಯಿಂದ ಪ್ರತ್ಯೇಕ ವೋಲ್ವೋ ಬಸ್‌ ಸೇವೆಯನ್ನು ಆರಂಭಿಸಲಾಗಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕೆಲವು ದಿನಗಳ ಕಾಲ ಕಠಿಣ ವ್ರತ ಆಚರಣೆ ಮಾಡುತ್ತಾರೆ. ನಂತರ ಇರುಮುಡಿ ಹೊತ್ತುಕೊಂಡು ಕಲವರು ಸೇರಿಕೊಂಡು ಪ್ರತ್ಯೇಕ ವಾಹನ ಮಾಡಿಕೊಂಡು ಶಬರಿಮಲೆಗೆ ಹೋಗತ್ತಾರೆ. ಅಯ್ಯಪ್ಪ ಮಾಲಾಧಾರಿಗಳು ಮಾಡುವ ವ್ರತ ಆಚರಣೆಯನ್ನೇನೂ ಮಾಡುತ್ತಾರೆ. ಆದರೆ, ಖಾಸಗಿ ವಾಹನದಲ್ಲಿ ಹಾಗೂ ಕೆಲವು ಸಂಗಡಿಗರೊಂದಿಗೆ ಸೇರಿಕೊಂಡು ಶಬರಿಮಲೆಗೆ ಹೋಗಿ ಬರುವುದಕ್ಕೆ ಆರ್ಥಿಕವಾಗಿ ಹಾಗೂ ಹೊಂದಾಣಿಕೆ ವಿಚಾರದಲ್ಲಿ ಸ್ವಲ್ಪ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನುಕೂಲ ಆಗುವಂತೆ ಈ ಬಾರಿ ಸರ್ಕಾರದ ಸಾರಿಗೆ ನಿಗಮವಾದ ಕೆಎಸ್ಆರ್‌ಟಿಸಿ ವತಿಯಿಂದಲೇ ವೋಲ್ವೋ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಇದರಿಂದ ಪ್ರತ್ಯೇಕ ವಾಹನಕ್ಕಾಗಿ ಪರದಾಡದೇ ವೈಯಕ್ತಿಕವಾಗಿ ಅಥವಾ ಮೂರ್ನಾಲ್ಕು ಜನರು ಸೇರಿಕೊಂಡು ಸುಲಭವಾಗಿ ಸರ್ಕಾರಿ ಸಾರಿಗೆಯಲ್ಲಿ ಶಬರಿಮಲೆಗೆ ಹೋಗಿ ಬರಬಹುದು.

Tap to resize

Latest Videos

ಡ್ರೋನ್ ಪ್ರತಾಪ್ ಹೆಸರೇಳದೇ ಹಿಗ್ಗಾಮುಗ್ಗಾ ನೀರಿಳಿಸಿದ ಕನ್ನಡತಿ ಅಕ್ಕ ಅನು!

ಅಯ್ಯಪ್ಪನ ದರ್ಶನಕಕ್ಕಾಗಿ ಶಬರಿಮಲೆಗೆ ಹೋಗುವವರಿಗೆ ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್ ಕೊಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ  ವೋಲ್ವೋ ಬಸ್ ಕಾರ್ಯಚರಣೆಯನ್ನು ಆರಂಭಿಸಲಾಗಿದೆ. ಬೆಂಗಳೂರಿಂದ ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗವಾಗಿ  ವೋಲ್ವೋ ಬಸ್ ಸಂಚರಿಸಲಿದೆ. ಡಿಸೆಂಬರ್ 1 ರಿಂದ ಶಬರುಮಲೈಗೆ ವೋಲ್ವೋ ಬಸ್ ಕಾರ್ಯಚರಣೆ ಮಾಡಲಿದೆ. ವಯಸ್ಕರಿಗೆ ಬೆಂಗಳೂರಿಂದ ಶಬರಿಮಲೈಗೆ 1,600 ರೂಪಾಯಿ ದರ ನಿಗದಿ ಮಾಡಲಾಗಿದೆ. ಬೆಂಗಳೂರು- ನೀಲಕ್ಕಲ್ (ಪಂಪಾ, ಶಬರಿಮಲೈ)ಸಂಚಾರದ ವೇಳಪಟ್ಟಿ ಇಲ್ಲಿದೆ ನೋಡಿ..

ಕೊರೊನಾ ಮಾದರಿಯಲ್ಲೇ ಮತ್ತೊಂದು ಮಾರಕ ಚೀನಾ ವೈರಸ್ ಪತ್ತೆ: ದಿಢೀರ್ ತಜ್ಞರ ಸಭೆ ಕರೆದ ಸರ್ಕಾರ

ಶಬರಿಮಲೆಗೆ ಹೋಗುವವರಿಗೆ ಅನುಕೂಲಕರ ಮಾಹಿತಿ: 

  • ಡಿ.1 ರಿಂದ ಬೆಂಗಳೂರು ಟು ಶಬರಿಮಲೈ ವೋಲ್ವೋ ಬಸ್ ಕಾರ್ಯಚರಣೆ ಆರಂಭವಾಗಲಿದೆ
  • ವಯಸ್ಕರಿಗೆ 1,600 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ
  • ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಬಸ್ ಹೊರಡಲಿದೆ.
  • ಮರುದಿನ ಬೆಳಿಗ್ಗೆ 6.45ಕ್ಕೆ ಪಂಪಾ ಶಬರಿಮಲೈ ತಲುಪಲಿದೆ.
  • ಅಂದು ಸಂಜೆ ಮತ್ತೆ ಶಬರಿಮಲೈನಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.

click me!