ಇಸ್ಲಾಂ ಎಲ್ಲ ಧರ್ಮದ ಜೊತೆಗೆ ಹೊಂದಿಕೊಂಡು ಹೋಗುವುದನ್ನು ಕಲಿಸುತ್ತೆ: ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ

By Ravi Janekal  |  First Published Nov 27, 2023, 3:05 PM IST

ನಮ್ಮ ರಾಜ್ಯದಲ್ಲಿ ಸಾಕಷ್ಟು ಮದರಸಗಳು ನಡೆಯುತ್ತಿವೆ. ಅವೆಲ್ಲವುಗಳು ನಮ್ಮ ಕಂಟ್ರೋಲ್‌ನಲ್ಲಿರುತ್ತವೆ. ನಾವು ಅವರಿಗೆ ಅನುಮತಿ ಕೊಟ್ಟಿರುತ್ತವೆ. ಆದರೆ ಬೆಂಗಳೂರಿನ ದರೂಲ್ ಉಲೂಮ್ ಮದರಸಾ ನಮ್ಮಲ್ಲಿ ನೊಂದಾಣಿ ಆಗಿರಲ್ಲ. ಮದರಸಗಳ ಕೇಂದ್ರ ಸ್ಥಾನಗಳ ಅಧ್ಯಕ್ಷರಾದ ಅಮಿರತ್ ಶರೀಯತ್ ಅವರ ವ್ಯಾಪ್ತಿಗೆ ಬರುತ್ತೆ ಎಂದು ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ ಸ್ಪಷ್ಟನೆ ನೀಡಿದರು.


ಚಿತ್ರದುರ್ಗ (ನ.27): ನಮ್ಮ ರಾಜ್ಯದಲ್ಲಿ ಸಾಕಷ್ಟು ಮದರಸಗಳು ನಡೆಯುತ್ತಿವೆ. ಅವೆಲ್ಲವುಗಳು ನಮ್ಮ ಕಂಟ್ರೋಲ್‌ನಲ್ಲಿರುತ್ತವೆ. ನಾವು ಅವರಿಗೆ ಅನುಮತಿ ಕೊಟ್ಟಿರುತ್ತವೆ. ಆದರೆ ಬೆಂಗಳೂರಿನ ದರೂಲ್ ಉಲೂಮ್ ಮದರಸಾ ನಮ್ಮಲ್ಲಿ ನೊಂದಾಣಿ ಆಗಿರಲ್ಲ. ಮದರಸಗಳ ಕೇಂದ್ರ ಸ್ಥಾನಗಳ ಅಧ್ಯಕ್ಷರಾದ ಅಮಿರತ್ ಶರೀಯತ್ ಅವರ ವ್ಯಾಪ್ತಿಗೆ ಬರುತ್ತೆ ಎಂದು ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ ಸ್ಪಷ್ಟನೆ ನೀಡಿದರು.

ದರೂಲ್ ಉಲೂಮ್ ಅನಾಥಾಶ್ರಮದಲ್ಲಿ ತಾಲಿಬಾನ್ ಶಿಕ್ಷಣ ನಡೆಸುತ್ತಿರುವ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷ ಗಂಭೀರ ಆರೋಪ ಹಿನ್ನೆಲೆ ಈ ಸಂಬಂಧ ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಅಂದುಕೊಂಡ ಹಾಗೆ ಯಾವುದೇ ಅಹಿತಕರ ಘಟನೆ ಅಲ್ಲಿ ನಡೆಯುತ್ತಿಲ್ಲ ಎಂಬುದು ನಮ್ಮ ನಂಬಿಕೆ. ಅವರ ಒಳ ಜಗಳದಿಂದ ಈ ರೀತಿ ಅಗಿದೆ ಅಷ್ಟೆ. ಇದರ ಹೊರತಾಗಿ ಯಾವ ತಾಲಿಬಾನ್ ಶಿಕ್ಷಣವನ್ನು ನೀಡಲಾಗ್ತಿಲ್ಲ ಇವೆಲ್ಲಾ ಸುಳ್ಳು ಎಂದರು.

Tap to resize

Latest Videos

undefined

ಅನಾಥಾಶ್ರಮ ಹೆಸರಲ್ಲಿ ತಾಲಿಬಾನ್ ಮಾದರಿ ಶಿಕ್ಷಣ ನೀಡ್ತಿರೋ ಆರೋಪ ; ಆ ಬಗ್ಗೆ ನನಗೆ ಗೊತ್ತಿಲ್ಲ ಎಂದ ಗೃಹಸಚಿವ! 

ಮದರಸಾದಲ್ಲಿ ಇಸ್ಲಾಂ ಎಲ್ಲ ಧರ್ಮಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದನ್ನು ಕಲಿಸುತ್ತೆ. ತಾಲಿಬಾನ್ ವಿಚಾರ, ಇನ್ನೊಬ್ಬರ ಬಗ್ಗೆ ವಿರೋಧಿ ಚಟುವಟಿಕೆ ಮಾಡುವುದು ನಮ್ಮ ಧರ್ಮದಲ್ಲಿ ಇಲ್ಲ. ಬಹಳಷ್ಟು ಮದರಸಗಳು ರಾಜ್ಯದಲ್ಲಿ ಈ ರೀತಿ ನಡೆಸುತ್ತಿದ್ದಾರೆ. ಅಮೀರ್ ಶರಿಯತ್ ನವರು ಅವರ ವ್ಯಾಪ್ತಿಯಲ್ಲಿ ಸಾಕಷ್ಟು ನಡೆಸುತ್ತಿವೆ. ನಮ್ಮ ಕಂಟ್ರೋಲ್‌ನಲ್ಲಿ ಇರಬೇಕು ಅಂತವುಗಳ ಮೇಲೆ ನಾವು ಜವಾಬ್ದಾರಿಯಾಗಿರ್ತೀವಿ. ಬೇರೆಯವರು ಯಾರು ಮದರಸಾಗಳನ್ನು ನಡೆಸ್ತಿದ್ದಾರೋ ಅವರು ಜವಾಬ್ದಾರರಾಗಿರ್ತಾರೆ. ನಮ್ಮ ಇಸ್ಲಾಂ ಶಿಕ್ಷಣದ ಜೊತೆ ದಿನನಿತ್ಯದ ಶಿಕ್ಷಣ ಕೂಡ ಎಲ್ಲಾ ಮದರಸಗಳಲ್ಲಿ ಅಳವಡಿಸಿಕೊಂಡಿದ್ದಾರೆ. ನಮ್ಮ ಜಿಲ್ಲೆಯಲ್ಲಿರುವ ಮದರಸಾದಲ್ಲಿ ಎಲ್ಲಾ ರೀತಿಯ ಶಿಕ್ಷಣ ಕೊಡಲಾಗ್ತಿದೆ.ಇತ್ತೀಚೆಗೆ ಮದರಸಾಗಳಲ್ಲಿ ಒಳ್ಳೆಯ ವಿದ್ಯಾಭ್ಯಾಸ ಕೂಡ ಸಿಗ್ತಿದೆ ಎಂದರು.

ಸುಳ್ಳುಸುದ್ದಿ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಸಚಿವ ಪರಮೇಶ್ವರ್ ಸೂಚನೆ

 ನಮ್ಮ ಸಚಿವರಾದ ಜಮೀರ್ ಅಹ್ಮದ್ ಅವರ ಜೊತೆ ಚರ್ಚಿಸಿ ಅಲ್ಲಿಗೆ ಭೇಟಿ ನೀಡುತ್ತೇವೆ. ಅಲ್ಲಿ ಏನಾದ್ರು ತಪ್ಪುಗಳಿದ್ರೆ ಅವುಗಳನ್ನು ಸರಿಪಡಿಸುತ್ತೇವೆ. ಸಂಬಂಧಿಕರ ಮಧ್ಯೆ ವ್ಯತ್ಯಾಸ ಆಗಿರೋದ್ರಿಂದ ಈ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ಹಕ್ಕುಗಳ ಅಧ್ಯಕ್ಷರು ಬರೋದಕ್ಕೆ ಇವರೇ ಮಾಹಿತಿ ಕೊಟ್ಟು ಕರೆಸಿದ್ದಾರೆ ಎನ್ನುವ ಮಾಹಿತಿಯ ಇದೆ. ನಾವು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಎಲ್ಲವನ್ನು ವಿವರವಾಗಿ ಹೇಳುತ್ತೇವೆ ಎಂದರು.

click me!