ಕೆಎಸ್ಸಾರ್ಟಿಸಿ ಬಸ್‌ಗಳು ‘ಒನ್ ವೇ’ನಲ್ಲಿ ಸಂಚರಿಸಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುವ ಅಪಾಯ ಎದುರಾಗುವಂತೆ ಮಾಡುತ್ತಿವೆ. ಈ ರೀತಿಯ ಪ್ರಕರಣಗಳು ಪದೇಪದೆ ನಡೆಯುತ್ತಿದ್ದು, ಅದಕ್ಕೆ ಕಾರಣವೇನು ಎಂದು ತಿಳಿಯಲು ಕೆಎಸ್ಸಾರ್ಟಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಬೆಂಗಳೂರು(ಆ.10): ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಚಾಲಕರಿಂದ ಉಂಟಾಗುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಕುರಿತಂತೆ ಪರಿಶೀಲನೆ ನಡೆಸಲು ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಆಮೂಲಕ ನಿಯಮ ಉಲ್ಲಂಘನೆಗೆ ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದ ಕಾರಣ, ಸಂಚಾರ ನಿಯಮವನ್ನು ಕಠಿಣಗೊಳಿಸಲಾಗಿದೆ. ಬೈಕ್, ಆಟೋ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಉಳಿದ ವಾಹನಗಳ ವೇಗ ಮಿತಿಯನ್ನು ಕಡಿತಗೊಳಿಸಲಾಗಿದೆ. ಅದರ ನಡುವೆ ಕೆಎಸ್ಸಾರ್ಟಿಸಿ ಬಸ್‌ಗಳು ‘ಒನ್ ವೇ’ನಲ್ಲಿ ಸಂಚರಿಸಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುವ ಅಪಾಯ ಎದುರಾಗುವಂತೆ ಮಾಡುತ್ತಿವೆ. ಈ ರೀತಿಯ ಪ್ರಕರಣಗಳು ಪದೇಪದೆ ನಡೆಯುತ್ತಿದ್ದು, ಅದಕ್ಕೆ ಕಾರಣವೇನು ಎಂದು ತಿಳಿಯಲು ಕೆಎಸ್ಸಾರ್ಟಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಅದಕ್ಕಾಗಿ ಕೆಎಸ್ಸಾರ್ಟಿಸಿ ಬಸ್‌ಗಳು ಎಲ್ಲೆಲ್ಲಿ ಒನ್ ವೇನಲ್ಲಿ ಸಂಚರಿಸುತ್ತಿವೆ, ಅದಕ್ಕೆ ಕಾರಣವೇನು? ಎಂಬ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದಾರೆ.
ಮಂಡ್ಯ: ದಂಡ ಕಟ್ಟೋದಿಲ್ಲ ಎಂದು ಪೊಲೀಸರಿಗೇ ಆವಾಜ್ ಹಾಕಿ ಕಕ್ಕಾಬಿಕ್ಕಿಯಾದ..!
ರಾಮನಗರ ಹಾಗೂ ಮಂಡ್ಯ ಬಳಿ ಹೆದ್ದಾರಿಯಲ್ಲಿಯೇ ಒನ್‌ವೇನಲ್ಲಿ ಸಂಚರಿಸುವ ಬಸ್‌ಗಳು ನಂತರ ಸವೀರ್‍ಸ್ ರಸ್ತೆಗೆ ಬರುತ್ತಿವೆ. ಇದರಿಂದಾಗಿ ಅಪಘಾತದ ಅಪಾಯ ಎದುರಾಗುತ್ತಿದೆ ಎಂಬ ದೂರುಗಳಿವೆ. ಚಾಲಕರ ಈ ವರ್ತನೆ ಕುರಿತಂತೆ ಪರಿಶೀಲನೆ ನಡೆಸಿ, ಅದಕ್ಕೆ ಪರಿಹಾರ ನೀಡಲು ಕೆಎಸ್ಸಾರ್ಟಿಸಿ ಮುಂದಾಗಿದೆ. ಅಲ್ಲದೆ, ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಚಾಲಕರೊಂದಿಗೂ ಮಾತನಾಡಿ, ತಿಳಿವಳಿಕೆ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.