KSRTC ಅಧಿಕಾರಿಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ, ಅವರು ಆಡಿದ್ದೇ ಆಟ!

By Ravi NayakFirst Published Jul 23, 2022, 4:11 PM IST
Highlights

ಕೆಎಸ್‌ಆರ್‌ಟಿಸಿ ಆರ್ಥಿಕ ನಷ್ಟದಲ್ಲಿದೆ ಹೀಗಿರುವಾಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳು 
 ಸುಸ್ಥಿತಿಯಲ್ಲಿ ಕಟ್ಟಡವನ್ನು ಕೆಡವಿ ಹೊಸದೊಂದು ಕಟ್ಟಡ ನಿರ್ಮಾಣ ಮಾಡಲು ಹೊರಟಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ

ವರದಿ; ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು23): ಕೆಎಸ್ಆರ್‌ಟಿಸಿ ಇದು ದೇಶದ ನಂ.1ಸಾರಿಗೆ ಸಂಸ್ಥೆ. ಇದೇ ಸಂಸ್ಥೆ ಸಾರಿಗೆ ಸಿಬ್ಬಂದಿಯ ಮುಷ್ಕರ, ಕೊರೊನಾ ಸೋಂಕಿನ ಹೊಡೆತದಿಂದಾಗಿ ನಷ್ಟದ ಕೂಪಕ್ಕೆ ಸಿಲುಕಿದೆ. ಕಳೆದ ಎರಡು ವರ್ಷಗಳಿಂದ ಸಾರಿಗೆ ನೌಕರರಿಗೆ ಸಂಬಳ ನೀಡುವುದಕ್ಕೆ ಹಣವಿಲ್ಲ. ಐದಾರು ತಿಂಗಳು ಕಳೆದರೂ ಸಂಬಳ ಬಾರದೇ ಕೆಲವರು ಖಾಸಗಿ ಬಸ್‌ಗಳ ಡ್ರೈವರ್‌ಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಇಂಥ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ ಸಂಬಳ ಕೊಡಲು ಆಗದೆ ಪರದಾಡ್ತಿದೆ. 

ಇಂತಹ ಪರಿಸ್ಥಿತಿಯಲ್ಲೂ ಕೆಎಸ್‌ಆರ್‌ಟಿಸಿ(KSRTC) ಯನ್ನ ಮುಳುಗಿಸೋ ಪ್ಲಾನ್ ಒಂದು ರೆಡಿಯಾಗಿದೆ. ಸಾರಿಗೆ ನಿಗಮಗಳು ಖಜಾನೆಯಲ್ಲಿ ದುಡ್ಡಿಲ್ಲ ಅಂತ  ಬೊಬ್ಬೆ ಹೊಡೆಯುತ್ತಿವೆ. ಆದ್ರೆ ಈ ಕಡೆ ಅಧಿಕಾರಿಗಳು ಮಾತ್ರ ಬಿಟ್ಟಿ ಶೋಕಿ ಮಾಡಲು ಹೊರಟ್ಟಿದ್ದಾರೆ.. ಹೌದು ಕೆಎಸ್‌ಆರ್‌ಟಿಸಿಯಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ. ಅಧಿಕಾರಿಗಳು ಆಡಿದ್ದೇ ಆಟ ನಡೆದಿದ್ದೇ ದಾರಿ ಎನ್ನುವಂತಾಗಿದೆ.

ಹೊಟ್ಟೆಗೆ ಹಿಟ್ಟಿಲ್ಲಂದ್ರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಆರ್ಥಿಕ ಸಂಕಷ್ಟದ ಸಂದಿಗ್ಧ ಪರಿಸ್ಥಿತಿಯಲ್ಲಿ ದಿಢೀರ್ ಎಂದು ಹೊಸ ಕಟ್ಟಡ  ನಿರ್ಮಾಣ ಮಾಡುವ ಚಿಂತೆ ಶುರುಮಾಡಿದ್ದಾರೆ ಅಧಿಕಾರಿಗಳು.ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಕಟ್ಟಡ ಕೆಡವಿ ಹೊಸ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದು ನಿಜಕ್ಕೂ ಶಾಕಿಂಗ್. ಮಾತ್ರವಲ್ಲ; ಸುಸ್ಥಿತಿಯಲ್ಲಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಹೊರಟಿರೋದ್ರ ಹಿಂದೆ ಭ್ರಷ್ಟಾಚಾರದ ವಾಸನೆ ಕೇಳಿಬರುತ್ತಿದೆ. 

ತೈಲ ಬೆಲೆ ಏರಿಕೆಯ ತತ್ತರ, KSRTC ಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ

ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ  ಕೇಂದ್ರ ಕಚೇರಿ ನಿರ್ಮಿಸಿ  ಸುಮಾರು 50 ವರ್ಷ ಕೂಡ ಕಳೆದಿಲ್ಲ. ಕಟ್ಟಡ ಇನ್ನಷ್ಟು ವರ್ಷಗಳವರೆಗೂ ಗಟ್ಟಿಮುಟ್ಟಾಗಿರುವಷ್ಟು ಸುಸ್ಥಿತಿಯಲ್ಲಿದೆ. ಆದರೆ ಇದೀಗ ಇಂಥ ಕಟ್ಟಡ ಕೆಡವಿ  ಹೊಸ ಕಟ್ಟಡ ನಿರ್ಮಿಸಲು ನಿರ್ಧಾರ ಮಾಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಮೂರು ಅಂತಸ್ತಿನ  ಕಟ್ಟಡ ಗಟ್ಟಿಮುಟ್ಟಾಗಿದ್ರೂ ಇದೇ ಕಟ್ಟಡ ಕೆಡವಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅಧಿಕಾರಿಗಳು ಫ್ಲಾನ್ ಮಾಡಿದ್ದಾರೆ. ಸುಮಾರು 2 ಎಕರೆ 10 ಗುಂಟೆ  ಜಾಗದಲ್ಲಿ 500  ಕೋಟಿ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ಸಂಕೀರ್ಣವನ್ನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇಲ್ಲಿಯವರೆಗೂ ಶಾಂತಿನಗರ ಕೇಂದ್ರ ಕಚೇರಿ ಬಿರುಕು ಇಲ್ಲ. ಮಳೆ ಬಂದರೆ ಸೋರಿಕೆ ಆಗಿಲ್ಲ.ಇಲ್ಲಿ ಎಲ್ಲಾ ಸೌಲಭ್ಯ ಗಳು ಇದ್ರು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರೋದು ಸಾರಿಗೆ ನೌಕರರ ಕೆಂಗಣ್ಣಿಗೆ ಗುರಿಯಾಗಿದೆ..

KSRTC ವರ್ಗ ಹೊಂದಿದವರ ಜಾಗಕ್ಕೆ ಸಿಬ್ಬಂದಿಯೇ ಇಲ್ಲ!

ಸಾರಿಗೆ ನಿಗಮದಲ್ಲಿ ನೌಕರರಿಗೆ ಸಂಬಳ ನೀಡೋಕೆ ದುಡ್ಡಿಲ್ಲ, ಬಸ್ ಖರೀದಿಗೂ ದುಡ್ಡು ಇಲ್ಲ.ಆರ್ಥಿಕ ದಿವಾಳಿ ಹಂತದಲ್ಲಿರೋ ನಿಗಮ ಕೋಟಿ ಕೋಟಿ ವೆಚ್ಚದಲ್ಲಿ ಗಟ್ಟಿಮುಟ್ಟಾದ ಕಟ್ಟಡ ಕೆಡವಿ ಹೈಟೆಕ್ ಸಂಕೀರ್ಣ ಮಾಡೋಕೆ ಹೊರಟಿದ್ದು, ಜನರ ಹಣ ಲೂಟಿ ಮಾಡಲು ಹೊರಟಿದ್ದಂತೂ ನಿಜ.

click me!