ಪ್ರವಾಹ ಅನಾಹುತ ತಡೆಗೆ ತಂತ್ರಜ್ಞಾನ ಬೇಕು: ಸಿಎಂ ಬೊಮ್ಮಾಯಿ

By Govindaraj SFirst Published Jul 23, 2022, 2:59 PM IST
Highlights

ವಿಪತ್ತು ನಿರ್ವಹಣೆಯಲ್ಲಿ ಪ್ರಾಮಾಣೀಕೃತ ವ್ಯವಸ್ಥೆ ಜಾರಿ ಮಾಡಿ ಪ್ರವಾಹಕ್ಕೆ ತುತ್ತಾಗುವ ಭಾಗಗಳಲ್ಲಿ ಅನಾಹುತಗಳಾಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ನೆರವಾಗುವ ತಂತ್ರಜ್ಞಾನ ಪರಿಚಯಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಬೆಂಗಳೂರು (ಜು.23): ವಿಪತ್ತು ನಿರ್ವಹಣೆಯಲ್ಲಿ ಪ್ರಾಮಾಣೀಕೃತ ವ್ಯವಸ್ಥೆ ಜಾರಿ ಮಾಡಿ ಪ್ರವಾಹಕ್ಕೆ ತುತ್ತಾಗುವ ಭಾಗಗಳಲ್ಲಿ ಅನಾಹುತಗಳಾಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ನೆರವಾಗುವ ತಂತ್ರಜ್ಞಾನ ಪರಿಚಯಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೇಂದ್ರ ಗೃಹ ಇಲಾಖೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಕೆಎಸ್‌ಡಿಎಂಎ) ವತಿಯಿಂದ ಆಯೋಜಿಸಲಾಗಿದ್ದ ‘ಆಪ್ದಾ ಮಿತ್ರ ಯೋಜನೆ’ಯ ಉನ್ನತೀಕರಣಕ್ಕಾಗಿ ಮೊಬೈಲ್‌ ಆಪ್‌ ಹಾಗೂ ನಿರ್ವಹಣಾ ಮಾಹಿತಿ ವ್ಯವಸ್ಥೆ(ಎಂಐಎಸ್‌) ತರಬೇತಿಗಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಾಗಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಹಲವು ಸಂದರ್ಭಗಳಲ್ಲಿ ಪ್ರಕೃತಿ ವಿಕೋಪಗಳು ಎದುರಾಗಿದ್ದು, ಈ ಹಿಂದೆ ವಿಪತ್ತು ನಿರ್ವಹಣೆಯಲ್ಲಾದ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಜೊತೆಗೆ ಪ್ರಮಾಣೀಕೃತ ವಿಪತ್ತು ನಿರ್ವಹಣೆಯ ವ್ಯವಸ್ಥೆಯ ಅಗತ್ಯವಿದೆ. ಪ್ರತಿ ಸಂದರ್ಭದಲ್ಲಿ ಸೂಚನೆಗಾಗಿ ಕಾಯುವಂತಾಗದೆ ಕ್ರಮಕ್ಕೆ ಮುಂದಾಗುವಂತಾಗಬೇಕು ಎಂದು ಹೇಳಿದರು. ಪ್ರಾಕೃತಿಕವಾಗಿ ಉಂಟಾಗುವ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಸಂಭವಿಸುವ ಮುನ್ನ ಹಾಗೂ ನಂತರದ ನಿರ್ವಹಣೆ ಕ್ರಮಗಳು ಪ್ರಮುಖ ವಾಗಿರುತ್ತವೆ. ಪ್ರಕೃತಿ ವಿಕೋಪಗಳು ಎದುರಾಗುವ ಸಂದರ್ಭದಲ್ಲಿ ಸ್ಪಂದಿಸುವುದರ ಜೊತೆಗೆ, ಜವಾಬ್ದಾರಿ ತೆಗೆದುಕೊಳ್ಳವವರು ಬೇಕಾಗುತ್ತದೆ. ಇದೇ ಕಾರಣದಿಂದ ಆಪ್ದಾಮಿತ್ರ ಯೋಜನೆ ಜಾರಿಯಾಗಿದೆ ಎಂದರು.

Latest Videos

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಒಡೆಯರ್‌ ಹೆಸರು

ದೇಶದ ಜನತೆ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮಾತ್ರವಲ್ಲದೆ ವಿಪತ್ತು ನಿರ್ವಹಣೆಯಲ್ಲಿಯೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಸಮುದಾಯಗಳಿಗೆ ಸೂಕ್ತ ತರಬೇತಿ, ಮಾಹಿತಿ ಹಾಗೂ ಪರಿಕರಗಳನ್ನು ನೀಡಿ ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರಿಸಿಕೊಳ್ಳಬೇಕು. ಇಂತಹ ಸ್ವಯಂ ಸೇವಕರ ತಂಡಗಳಿಂದ ವಿಪತ್ತು ನಿರ್ವಹಣೆ ಸುಲಭ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು. ರಾಜ್ಯದಲ್ಲಿ ಅಗತ್ಯವಿರುವ ರಾಜ್ಯ ವಿಪತ್ತು ಪ್ರಕ್ರಿಯಾ ನಿಧಿ(ಎಸ್‌ಡಿಆರ್‌ಎಫ್‌) ತಂಡಗಳನ್ನು ರಚಿಸಲು ಸೂಚನೆ ನೀಡಲಾಗಿದೆ. 

ವಿಪತ್ತು ನಿರ್ವಹಣೆಯಲ್ಲಿ ಸಮುದಾಯಗಳನ್ನು ಬಳಸಿಕೊಳ್ಳುವ ಕರ್ನಾಟಕ ವಿನೂತನ ಕ್ರಮ ಜಾರಿ ಮಾಡಲಾಗಿದೆ. ವಿಪತ್ತು ಸಂಭವಿಸಿದ ಎಲ್ಲ ಪ್ರದೇಶಗಳಲ್ಲಿ ಸಾಮಾನ್ಯ ಕೋಡ್‌ಗಳ ಬಳಕೆ ಮಾಡಿಕೊಂಡು ಕ್ಷಿಪ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆ ಮಾಡಬೇಕು. ಆಪ್ದಾ ಮಿತ್ರ ಮೊಬೈಲ್‌ ಆಪನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಹೇಳಿದರು. ಸರ್ಕಾರದಲ್ಲಿ ವಿಪತ್ತು ನಿರ್ವಹಣೆಗೆ ಅಗತ್ಯ ಪರಿಕರಗಳು, ಅನುದಾನ, ಸಿಬ್ಬಂದಿ ಎಲ್ಲವೂ ಇದೆ. ಸಿಬ್ಬಂದಿ ತಮ್ಮ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. 

ದೇವಾಲಯಗಳಿಗೆ ಭರ್ಜರಿ 116 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ

ವಿಕೋಪಗಳನ್ನು ಯೋಜಿಸುವುದಾಗಲಿ, ನಿರ್ಬಂಧಿಸುವುದಾಗಲಿ ಸಾಧ್ಯವಿಲ್ಲ. ಆದರೆ ನಿರ್ವಣೆ ಮಾಡಬೇಕಾಗಿದೆ. ವಿಕೋಪಗಳು ಬೆಂಕಿ, ಪ್ರವಾಹ ಮುಂತಾದ ರೂಪದಲ್ಲಿ ಎದುರಾದರೂ ನಮ್ಮ ತಂಡ ಸಿದ್ಧವಾಗಿರುತ್ತದೆ ಎಂದರು. ಕಂದಾಯ ಸಚಿವ ಆರ್‌.ಆಶೋಕ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೆಎಸ್‌ಡಿಎಂಎ ಆಯುಕ್ತ ರಾಜೀವ್‌ ರಂಜನ್‌ ಮತ್ತಿತರರಿದ್ದರು.

click me!