ಡ್ರೈವರ್ ಗಳಿಗೆ ಗುಡ್ ನ್ಯೂಸ್ ಕೊಟ್ಟ ಕೆಎಸ್ಆರ್‌ಟಿಸಿ, ಕಡ್ಡಾಯ ನಿಯಮ ಜಾರಿಗೆ

By Suvarna NewsFirst Published Mar 28, 2024, 9:20 AM IST
Highlights

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಡ್ರೈವರ್ ಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಡಬಲ್ ಡ್ಯೂಟಿಯಿಂದ ಮುಕ್ತಿ ಸಿಗಲಿದೆ. ಇಂದಿನಿಂದ ರಾತ್ರಿ ಮತ್ತು  ದೂರದ ಪ್ರಯಾಣದಲ್ಲಿ ವಿಶ್ರಾಂತಿ ಕಡ್ಡಾಯ ಎಂದು ಹೇಳಿದೆ.

ಬೆಂಗಳೂರು (ಮಾ.28): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ  ಡ್ರೈವರ್ ಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಡಬಲ್ ಡ್ಯೂಟಿಯಿಂದ ಮುಕ್ತಿ ಸಿಗಲಿದೆ. ಇಂದಿನಿಂದ ರಾತ್ರಿ ಮತ್ತು  ದೂರದ ಪ್ರಯಾಣದಲ್ಲಿ ವಿಶ್ರಾಂತಿ ಕಡ್ಡಾಯ ಎಂದು ಹೇಳಿದೆ. ಡ್ರೈವರ್‌ಗಳನ್ನು 8 ಗಂಟೆಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ. ವಾರದಲ್ಲಿ ಕೆಲಸದ ಅವಧಿ 48 ಗಂಟೆ ದಾಟುವಂತಿಲ್ಲ ಎಂದು ನಿಯಮ ಮಾಡಿದೆ.

ಕೆಎಸ್ಆರ್‌ಟಿಸಿ ಬಸ್ ಗಳಿಂದ ಆಕ್ಸಿಡೆಂಟ್ ಪ್ರಕರಣ ಹೆಚ್ಚಳ ಹಿನ್ನೆಲೆ ಆಕ್ಸಿಡೆಂಟ್  ಕಾರಣಗಳನ್ನು ಪತ್ತೆಹಚ್ಚಲು ಸಮಿತಿ ರಚನೆ ಮಾಡಿದೆ. ಆ್ಯಕ್ಸಿಡೆಂಟ್‌ ಹಿಂದಿನ ಕಾರಣಗಳನ್ನ ಪತ್ತೆ ಹಚ್ಚಿದ ಸಮಿತಿ. ಡಬಲ್ ಡ್ಯೂಟಿ ಮತ್ತು ನೈಟ್ ಶಿಫ್ಟ್ ವಿಶ್ರಾಂತಿಯನ್ನು ನೀಡದಿರೋದ್ರಿಂದ ನಿದ್ದೆಗೆಟ್ಟು ಬಸ್ ಚಲಾಯಿಸಲು ಸಾಧ್ಯವಾಗದೆ ಆ್ಯಕ್ಸಿಡೆಂಟ್ ಹೆಚ್ಚುತ್ತಿದೆ ಎಂದು ನಿಗಮಕ್ಕೆ ಸಮಿತಿ ರಿಪೋರ್ಟ್ ಕೊಟ್ಟಿದೆ. ಇದರ ಬೆನ್ನಲ್ಲೇ  ಚಾಲಕರಿಗೆ ಗುಡ್ ನ್ಯೂಸ್ ನೀಡಿದೆ.

ಆದೇಶದಲ್ಲಿ ಏನಿದೆ? 
ಕೆಎಸ್ಆರ್‌ಟಿಸಿ ಡ್ರೈವರ್ ಗಳಿಗೆ ವಿಶ್ರಾಂತಿ ಕಡ್ಡಾಯ
ಇಂದಿನಿಂದ ಡಬಲ್ ಡ್ಯೂಟಿ ಮಾಡಿಸುವಂತಿಲ್ಲ 
8 ಗಂಟೆಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ 
8 ಗಂಟೆ & ರಾತ್ರಿ ವೇಳೆಯಲ್ಲಿ ಹೆಚ್ಚು ಡ್ಯೂಟಿ  ಡ್ರೈವರ್ ಗಳಿಗೆ ನಿದ್ರೆ ಮತ್ತು ವಿಶ್ರಾಂತಿ ಮಾಡಲು ನಾಲ್ಕೈದು ಗಂಟೆಗಳ ಅವಕಾಶ
ಇದರಿಂದ ಕೆಎಸ್ಆರ್‌ಟಿಸಿ ಬಸ್ ಗಳ ಅಪಘಾತಗಳು ತಪ್ಪುತ್ತದೆ 
ನೂರಾರು ಅಮಾಯಕರ ಪ್ರಾಣ ಉಳಿಸಲು ಸಹಾಯವಾಗಲಿದೆ

click me!