ತಾನು ಮುಖ್ಯಮಂತ್ರಿ ಆಗಬೇಕೆಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದ್ದೇ ಸಂಸದ ಪ್ರಹ್ಲಾದ್ ಜೋಶಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿ-ಧಾರವಾಡ (ಮಾ.27): ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುತ್ತಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಿದ್ದೇ ಪ್ರಹ್ಲಾದ್ ಜೋಶಿ ಅವರಾಗಿದ್ದಾರೆ. ತಾವೇ ರಾಜ್ಯದ ಸಿಎಂ ಆಗಬೇಕೆಂದು ಜೋಶಿ ಜಾಕೆಟ್ ಹೊಲಿಸಿದ್ದರು. ಆದರೆ, ನಮ್ಮ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಪ್ರಲ್ಹಾದ್ ಜೋಶಿ. ತಾವೇ ಸಿಎಂ ಆಗಬೇಕೆಂದು ಪ್ರಲ್ಹಾದ್ ಜೋಶಿ ಜಾಕೆಟ್ ಹೊಲಿಸಿದ್ದರು. ನಮ್ಮ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು. ನಾವು ಯಾರ ಒತ್ತಡಕ್ಕೂ ಒಳಗಾಗುವ ಸ್ವಾಮೀಜಿಗಳಲ್ಲ. ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿ- ಧಾರವಾಡ ಕ್ಷೇತ್ರದಿಂದ ಹೊರಗೆ ಹಾಕಿದಂತೆ, ಪ್ರಹ್ಲಾದ್ ಜೋಶಿಗೂ ಧಾರವಾಡ ಬಿಟ್ಟು ಬೇರೆ ಕ್ಷೇತ್ರದ ಟಿಕೆಟ್ ಕೊಡಿ. ಇಲ್ಲವಾದರೆ ಏ.2ನೇ ತಾರೀಕಿನ ನಂತರ ಕಾಯ್ದು ನೋಡಿ ಎಂದರು. ಈ ವೇಳೆ ಇತರೆ ಮಠಗಳ ಮಠಾಧೀಶರು ಕೂಡ ತಮ್ಮ ಕೈಗಳನ್ನೆತ್ತಿ ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲ ಸೂಚಿಸಿದರು.
ಮುನಿಯಪ್ಪ ಅಳಿಯನಿಗೆ ಟಿಕೆಟ್?: ಸಚಿವ ಎಂ.ಸಿ.ಸುಧಾಕರ್ ಸೇರಿ, ಐವರು ಶಾಸಕರ ರಾಜಿನಾಮೆ?
ಪ್ರಲ್ಹಾದ್ ಜೋಶಿಯವರ ಕ್ಷೇತ್ರ ಬದಲಾವಣೆ ಮಾಡಬೇಕು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬೇರೆ ಕ್ಷೇತ್ರಕ್ಕೆ ಕೊಟ್ಟಂತೆ, ಕೇಂದ್ರ ಸಚಿವರಿಗೂ ಕ್ಷೇತ್ರ ಬದಲಾವಣೆ ಮಾಡಬೇಕು. ಈ ಕುರಿತು ಸ್ವಾಮೀಜಿಗಳ ನಿಯೋಗದಿಂದ ಬಿಜೆಪಿ ವರಿಷ್ಠರಿಗೆ ಮನವಿ ಸಲ್ಲಿಸಲಾಗುವುದು. ಲಿಂಗಾಯತರ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವಾದರೆ, ಬ್ರಾಹ್ಮಣರು ಪ್ರಭಲವಾಗಿರುವ ಕ್ಷೇತ್ರದಲ್ಲಿ ಲಿಂಗಾಯತನ್ನು ನಿಲ್ಲಿಸಿ ಗೆಲ್ಲಿಸಬೇಕು. ಪ್ರಲ್ಹಾದ್ ಜೋಶಿಯವರು ಸೇಡಿನ ರಾಜಕೀಯ ಮಾಡಿದ್ದಾರೆ. ಅವರಿಂದಾಗಿ ಬೇರೆಬೇರೆ ವರ್ಗದ ಜನರು ತುಳಿತಕ್ಕೆ ಒಳಗಾಗಿದ್ದಾರೆ. ಐಟಿ, ಇಡಿ ಬೆದರಿಕೆ ಹಾಕಿ ದಾಸ್ಯತ್ವಕ್ಕೆ ದಾರಿ ಮಾಡಿದ್ದಾರೆ. ಹಿಂಬಾಲಕರನ್ನು ಎಲ್ಲೆಡೆ ಇಟ್ಟು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಸಂಸದರಿಗೆ ಫೋನ್ ಮಾಡಿದರೆ ಲಿಂಗಾಯತ ಮುಖಂಡರಿಗೆ ಫೋನ್ ಮಾಡಿ ಅಂದಿದ್ದರು. ಪ್ರಲ್ಹಾದ್ ಜೋಶಿಯವರ ಸಹೋದರ ಗೋವಿಂದ ಜೋಶಿಯವರು ನನ್ನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಸ್ವಾಮೀಜಿಗಳು ರಾಜಕೀಯ ಪ್ರವೇಶ ಮಾಡ್ತೇವೆ:
ಇಂದು ಮಠಾಧೀಶರ ಸಭೆಯಲ್ಲಿ ಚರ್ಚಿಸಿ 5 ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಧಾರ್ಮಿಕವಾಗಿ ವೀರಶೈವ ಲಿಂಗಾಯತರ ಅವನತಿ ಆಗುತ್ತಿದೆ ಅನ್ನೋ ಚರ್ಚೆ ಬಂತು. ಸಾಮಾಜಿಕವಾಗಿ ಸೌಲಭ್ಯಗಳಿಂದ ಸಮಾಜ ವಂಚಿತವಾಗಿದೆ ಅನ್ನೋ ಚರ್ಚೆ ಮುನ್ನೆಲೆಗೆ ಬಂದಿದೆ. ಸಮಾಜದ ಮುಖಂಡರಿಗೆ ಸಾಮಾಜಿಕ, ರಾಜಕೀಯ ಪೆಟ್ಟು ಬಿದ್ದಾಗ ಸ್ವಾಮೀಜಿಗಳು ಮಾತಾಡಬೇಕು ಅಂತಾ ನಿರ್ಣಯ ಮಾಡಲಾಯಿತು. ಉತ್ತರ ಭಾರತದ ಮಾದರಿಯಲ್ಲಿ, ದಕ್ಷಿಣ ಭಾರತದ ಸ್ವಾಮೀಜಿಗಳು ಚುನಾವಣೆಗೆ ನಿಲ್ಲಬೇಕು ಅಂತಾ ತೀರ್ಮಾನ ಮಾಡಲಾಯಿತು ಎಂದು ಹೇಳಿದರು.
ಲೋಕಸಭಾ ಚುನಾವಣೆ ಸನಿಹದಲ್ಲಿ ಬಿಜೆಪಿಗೆ ಆಘಾತ; ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ
ಜೋಶಿ ಮಗಳ ಮದುವೆಗೆ ಹೋದ ಸ್ವಾಮೀಜಿಗಳಿಗೆ 2,000 ರೂ. ಕೊಟ್ಟು ಕಳಿಸ್ತಾರೆ: ಪ್ರಲ್ಹಾದ್ ಜೋಶಿಯವರು ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ತೋರಿಸಿದ್ದಾರೆ. ಮಗಳ ಮದುವೆಗೆ ಹೋದರೆ ಅವಮಾನಿಸಿ ಕಳಿಸಿದ್ದಾರೆ. ಸ್ವಾಮೀಜಿಗಳಿಗೆ 2 ಸಾವಿರ ರೂ. ಕೊಟ್ಟು ಕಳಿಸಿದ್ದಾರೆ. ಹಣ, ಅಧಿಕಾರದ ಮದ ಬಂದಿದೆ. ಅವರನ್ನು ಕೆಳಗೆ ಇಳಿಸಬೇಕು ಅನ್ನೋ ನಿರ್ಣಯಕ್ಕೆ ಬಂದಿದ್ದಾರೆ. ಮಠಾಧೀಶರು ಯಾವ ಪಕ್ಷದ ವಿರೋಧಿಗಳೂ ಅಲ್ಲ, ಅಭಿಮಾನಿಗಳೂ ಅಲ್ಲ. ಪ್ರಲ್ಹಾದ್ ಜೋಶಿಯ ವ್ಯಕ್ತಿತ್ವದ ಕಾರಣ ಅವರನ್ನು ಕೆಳಗೆ ಇಳಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಪ್ರಲ್ಹಾದ್ ಜೋಶಿಯವರನ್ನು ಮಾರ್ಚ್ 31ರೊಳಗೆ ಬೇರೆ ಕ್ಷೇತ್ರಕ್ಕೆ ಕಳಿಸಬೇಕು. ಬಿಜೆಪಿ ಹೈಕಮಾಂಡ್ ಮಾ.31ರೊಳಗೆ ಬಿಜೆಪಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಎಪ್ರಿಲ್ 2ರಂದು ಸ್ವಾಮೀಜಿಗಳು ಮತ್ತೆ ಸೇರಿ ನಮ್ಮದೇ ಆದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.