
ಬೆಂಗಳೂರು (ಡಿ.13): ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಪ್ರಯಾಣಿಕರ ಅಸಹಾಯಕತೆ ಮತ್ತು ಅನಿವಾರ್ಯತೆಯನ್ನು ದುರುಪಯೋಗಿಸಿಕೊಂಡು ಖಾಸಗಿ ಬಸ್, ಟ್ಯಾಕ್ಸಿ, ಆಟೋ ಚಾಲಕರು, ಮಾಲೀಕರು ಪ್ರಯಾಣಿಕರಿಂದ ಮನಸ್ಸೋ ಇಚ್ಛೆ ಪ್ರಯಾಣ ದರ ವಸೂಲಿ ಮಾಡಿರುವ ಘಟನೆಗಳು ಶನಿವಾರವೂ ರಾಜ್ಯಾದ್ಯಂತ ನಡೆದಿವೆ.
ಮಂಡ್ಯದಿಂದ ಬೆಂಗಳೂರಿಗೆ ಅನೇಕ ಖಾಸಗಿ ಬಸ್‌ಗಳು ಕಾರ್ಯಾಚರಿಸಿದ್ದು, ಮಾಮೂಲಿ 95 ರು. ಇದ್ದ ಟಿಕೆಟ್‌ಗೆ 140 ರು. ನಿಗದಿಪಡಿಸಿದ್ದರು. ಇನ್ನು ಮೈಸೂರಿನಿಂದ ಹುಣಸೂರಿಗೆ 50 ರು.ಗೆ ಬದಲಾಗೆ 80 ರು. ಪಡೆದುಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಆಟೋ, ಟ್ಯಾಕ್ಸಿ ಚಾಲಕರು ನಿಗದಿಪಡಿಸಿದ್ದೇ ದರ ಎಂಬಂತಾಗಿತ್ತು ಪರಿಸ್ಥಿತಿ. ಇನ್ನು ಮಹಾನಗರದಿಂದ ಮೈಸೂರಿಗೆ ಕಾರ್ಯಾಚರಿಸುತ್ತಿದ್ದ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ 140 ರು. ಟಿಕೆಟ್ ದರಕ್ಕೆ ಬದಲಾಗಿ 250 ರು. ವಸೂಲಿ ಮಾಡಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿವೆ.
ಮುಷ್ಕರ ನಿರತರಿಗೆ ಮಾತುಕತೆಗೆ ಮುಕ್ತ ಅಹ್ವಾನ ನೀಡಿದ ಸಾರಿಗೆ ಸಚಿವರು ..
ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ವಾಹನಗಳಾದ ಕ್ರೂಷರ್, ಆಟೋ, ಖಾಸಗಿ ಬಸ್‌ಗಳ ಸಂಚಾರವಿದ್ದು, 30 ರಿಂದ 40 ರು. ದರದ ಬದಲು . 100ರಿಂದ 150 ರು. ದರ ಸುಲಿಗೆ ಮಾಡಿರುವುದು ಕಂಡುಬಂತು. ಇದೇ ರೀತಿಯ ಪರಿಸ್ಥಿತಿ ಹಾವೇರಿ, ಕೊಪ್ಪಳ, ಧಾರವಾಡ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಬೀದರ್, ಗದಗ, ಹಾಸನ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುಗಳಲ್ಲೂ ಇತ್ತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ