ಕರ್ತವ್ಯ ಬಹಿಷ್ಕರಿಸಿರುವ ನೌಕರರಿಗೆ ಸರ್ಕಾರ ಸಡ್ಡು, ಖಾಸಗಿ ಬಸ್‌ ಓಡಿಸಲು ಸರ್ಕಾರ ಚಿಂತನೆ!

Published : Dec 13, 2020, 07:45 AM ISTUpdated : Dec 13, 2020, 12:44 PM IST
ಕರ್ತವ್ಯ ಬಹಿಷ್ಕರಿಸಿರುವ ನೌಕರರಿಗೆ ಸರ್ಕಾರ ಸಡ್ಡು, ಖಾಸಗಿ ಬಸ್‌ ಓಡಿಸಲು ಸರ್ಕಾರ ಚಿಂತನೆ!

ಸಾರಾಂಶ

ಖಾಸಗಿ ಬಸ್‌ ಓಡಿಸಲು ರಾಜ್ಯ ಸರ್ಕಾರ ಚಿಂತನೆ| ಕರ್ತವ್ಯ ಬಹಿಷ್ಕರಿಸಿರುವ ನೌಕರರಿಗೆ ಸರ್ಕಾರ ಸಡ್ಡು| ಆದರೆ, ಸೇವೆಗೆ ಖಾಸಗಿ ಬಸ್‌ ಮಾಲಿಕರಿಂದ ಷರತ್ತು

ಬೆಂಗಳೂರು(ಡಿ.13): ಸಾರಿಗೆ ನೌಕರರು ಪಟ್ಟು ಸಡಿಲಿಸದೆ ಮುಷ್ಕರ ಮುಂದುವರೆಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಖಾಸಗಿ ಬಸ್ಸುಗಳನ್ನು ಸರ್ಕಾರಿ ಪ್ರಯಾಣದ ದರದಲ್ಲಿ ಕಾರ್ಯಾಚರಣೆಗಿಳಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ, ‘ಸರ್ಕಾರದಿಂದ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ಬಂದರೂ ಸರ್ಕಾರದ ದರದಲ್ಲಿ ಖಾಸಗಿ ಬಸ್ಸುಗಳ ಕಾರ್ಯಾಚರಣೆ ಸಾಧ್ಯವಿಲ್ಲ’ ಎಂದು ಖಾಸಗಿ ಬಸ್‌ ಮಾಲೀಕರ ‘ರಾಜ್ಯ ಟ್ರಾವೆಲ್ಸ್‌ ಆಪರೇಟ​ರ್‍ಸ್ ಸಂಘ’ ಹೇಳಿದೆ.

ಖಾಸಗಿ ಬಸ್‌, ಆಟೋಗಳಲ್ಲಿ ಡಬಲ್ ರೇಟ್

‘ಸಾರಿಗೆ ನೌಕರರು ಮೊಂಡಾಟ ಮುಂದುವರೆಸಿದರೆ ಖಾಸಗಿ ಬಸ್‌ಗಳನ್ನು ಸರ್ಕಾರಿ ದರದಲ್ಲಿ ಸಂಚರಿಸಲು ಅನುಮತಿ ನೀಡಲಾಗುವುದು. ತನ್ಮೂಲಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಶನಿವಾರ ಹೇಳಿದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಟ್ರಾವೆಲ್ಸ್‌ ಆಪರೇಟ​ರ್‍ಸ್ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ನಟರಾಜ್‌ ಶರ್ಮಾ, ‘ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳನ್ನು ಕಾರ್ಯಾಚರಣೆಗಿಳಿಸುವ ಸಂಬಂಧ ಇದುವರೆಗೂ ಸರ್ಕಾರದಿಂದ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಸಂಪರ್ಕಿಸಿದರೂ ಸರ್ಕಾರದ ದರದಲ್ಲಿ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬಿಎಂಟಿಸಿ ಚಾರ್ಜಿಂಗ್‌ ಸೆಂಟರ್‌ನಲ್ಲಿ ಖಾಸಗಿ ಬಸ್‌ಗಳಿಗೂ ಅವಕಾಶ?

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ 14 ಸಾವಿರ ಖಾಸಗಿ ಬಸ್ಸುಗಳಿವೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಪ್ರಸ್ತುತ 1 ಸಾವಿರ ಬಸ್ಸುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸರ್ಕಾರದ ದರದಲ್ಲಿ ಬಸ್‌ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ. ನಮ್ಮದೇ ದರಕ್ಕೆ ಒಪ್ಪಿದರೆ ಮಾತ್ರ ಒಪ್ಪಬಹುದು. ಆದರೆ, ಕಾರ್ಯಾಚರಣೆಗೆ ಎಲ್ಲ ಬಸ್ಸುಗಳೂ ಲಭ್ಯವಾಗುವುದಿಲ್ಲ. ಕೋವಿಡ್‌ ನಷ್ಟದಿಂದ ಬಸ್‌ ಕಾರ್ಯಾಚರಣೆ ಮಾಡಲಾಗದೆ ನಷ್ಟದಲ್ಲಿದ್ದೇವೆ. ಈಗ ಎಲ್ಲಾ ಬಸ್ಸುಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆಗೆ ಟ್ಯಾಕ್ಸ್‌ ಕಟ್ಟಬೇಕು. ಇದು ಮಾಲೀಕರಿಗೆ ಕಷ್ಟವಾಗುತ್ತದೆ. ಸದ್ಯ ಒಂದು ಸಾವಿರ ಬಸ್ಸುಗಳನ್ನು ಮಾತ್ರ ಕಾರ್ಯಾಚರಣೆಗೆ ಇಳಿಸಬಹುದು’ ಎಂದು ಅವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: BBK 12 - ಎಲಿಮಿನೇಟ್ ಆಗಿಲ್ಲ ಅನ್ನೋ ಖುಷಿಗಿಂತ ರಕ್ಷಿತಾ ಶೆಟ್ಟಿಗೆ ಶುರುವಾಗಿದೆ ಹೊಸ ಚಿಂತೆ
ಪವಿತ್ರ ಶಕ್ತಿ ಮೇಲೆ ಬಿಜೆಪಿ, ಆರೆಸ್ಸೆಸ್‌ ದಾಳಿ: ಸಿಎಂ ಸಿದ್ದರಾಮಯ್ಯ ಕಿಡಿ