ಮಹಿಳಾ ಪ್ರಯಾಣಿಕರ ಜೊತೆ ಅನಾಗರೀಕನಂತೆ ವರ್ತಿಸಿದ ಕೆಎಸ್ಆರ್‌ಟಿಸಿ ಚಾಲಕ!

By Ravi Janekal  |  First Published Jun 16, 2023, 3:50 PM IST

ಉಚಿತ ಪ್ರಯಾಣ ಎಂದು ಬಸ್ಸಿನಲ್ಲಿ ದೇವರ ದರ್ಶನಕ್ಕೆ ಬಂದ ಮಹಿಳೆಯರ ಮೇಲೆ ಚಾಲಕ ಅನಾಗರಿಕನಂತೆ ವರ್ತಿಸಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಕ್ರಾಸ್ ಬಳಿ ನಡೆದಿದೆ.


ತುಮಕೂರು (ಜೂ.16) ಉಚಿತ ಪ್ರಯಾಣ ಎಂದು ಬಸ್ಸಿನಲ್ಲಿ ದೇವರ ದರ್ಶನಕ್ಕೆ ಬಂದ ಮಹಿಳೆಯರ ಮೇಲೆ ಚಾಲಕ ಅನಾಗರಿಕನಂತೆ ವರ್ತಿಸಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಕ್ರಾಸ್ ಬಳಿ ನಡೆದಿದೆ.

ಊರಿಗೆ ಹೋಗಲು ಪುಟ್ಟ ಕಂದಮ್ಮ  ಎತ್ತಿಕೊಂಡು ನಿಂತದ್ದ ಮಹಿಳೆ ಕಂಡೂ ಕರಗದ ಚಾಲಕನ ಮನಸ್ಸು .ಮಹಿಳೆಯರ ಮೇಲೆಯೇ ಬಸ್ ಹರಿಸಲು ಮುಂದಾಗಿದ್ದ ಸರ್ಕಾರಿ ಬಸ್ ಚಾಲಕ. ಸಾರಿಗೆ ಬಸ್ ಚಾಲಕನ ಅನಾಗರೀಕ ವರ್ತನೆ ಮೊಬೈಲ್ ನಲ್ಲಿ ಸೆರೆ ಹಿಡಿದ ಸ್ಥಳೀಯರು.

Tap to resize

Latest Videos

ಸಾರಿಗೆ ನೌಕರರಿಗೆ ಬಂಪರ್‌ ಕೊಡುಗೆ ನೀಡಿದ ಸಿದ್ದು ಸರ್ಕಾರ..!

ಕೊಳ್ಳೇಗಾಲದಿಂದ ಗೊರವನಹಳ್ಳಿ ಲಕ್ಷ್ಮೀ ದರ್ಶನಕ್ಕೆ ಬಂದಿದ್ದ ಮಹಿಳೆಯರು ಹಾಗೂ ಮಕ್ಕಳು.
ಸಂಜೆಯಿಂದ ಎರಡು ತಾಸು ಕಾದರೂ ಯಾವುದೇ ಬಸ್ ನಿಲ್ಲಿಸದ ಕಾರಣ ಬಸ್ ತಡೆಯಲು ಮುಂದಾದ ಮಹಿಳೆಯರು. ಈ ವೇಳೆ ಮಹಿಳೆಯರ ಮೇಲೆ ಚಾಲಕ ದುರ್ವರ್ತನೆ ತೋರಿದ್ದಾನೆ. ಈ ಬಗ್ಗೆ ಸ್ಥಳೀಯರ ದೂರು ನೀಡಿದ ಮೇರೆಗೆ  ಸ್ಥಳಕ್ಕೆ ಸಿಬ್ಬಂದಿ‌ ಸಹಿತ ಬಂದ ತಹಶೀಲ್ದಾರ್.

ಸಾಮಾನ್ಯ ಪ್ರಯಾಣಿಕರಂತೆ ಬಸ್‌ ಅಡ್ಡಲಾಗಿ ನಿಂತು ಬಸ್ ಹತ್ತಲು ಹೋದ ತಹಶೀಲ್ದಾರ್. ತಹಶೀಲ್ದಾರ್ ವಾಹನ ಕಂಡು ಸುಮಾರು 200 ಮೀಟರ್ ಮುಂದೆ ಹೋಗಿ ಬಸ್ ನಿಲ್ಲಿಸಿದ ಮತ್ತೊಬ್ಬ ಚಾಲಕ. ನಿಂತ ಬಸ್ ಬಳಿ ಹೋಗಿ ಚಾಲಕನಿಗೆ ಬುದ್ಧಿ ಹೇಳಿದ್ದಾರೆ. ಬಳಿಕ ತಹಶೀಲ್ದಾರ್ ಮುನಿಶಾಮ ರೆಡ್ಡಿ ಮಹಿಳೆಯರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ತರುತ್ತಿದೆ ಬಸ್‌ ಪ್ರಯಾಣ

ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಸ್ಥಳೀಯ ಕೆಎಸ್ಆರ್‌ಟಿಸಿ  ಡಿಪೋ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮಕ್ಕೆ ಮುಂದಾದ ತಹಶೀಲ್ದಾರರು. ಸಾರಿಗೆ ಚಾಲಕರು ಪ್ರಯಾಣಿಕರೊಂದಿಗೆ ಇಂಥ ದುರ್ವರ್ತನೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ಕೊಟ್ಟು ಮಹಿಳೆಯರಿಗೆ ಪ್ರಯಾಣದ ವ್ಯವಸ್ಥೆ ಮಾಡಿದ ತಹಸೀಲ್ದಾರ್.

click me!