ವರ್ಗಾವಣೆ ವಿರೋಧಿಸಿ ಕೆಎಸ್‌ಆರ್‌ಟಿಸಿ ನೌಕರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಸಂಬಂಧ ಪಟ್ಟಂತೆ ವಿಷ ಸೇವಿಸಿದ ಚಾಲಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮಂಡ್ಯ (ಜು.06): ವರ್ಗಾವಣೆ ವಿರೋಧಿಸಿ ಕೆಎಸ್‌ಆರ್‌ಟಿಸಿ ನೌಕರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಸಂಬಂಧ ಪಟ್ಟಂತೆ ವಿಷ ಸೇವಿಸಿದ ಚಾಲಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಜಗದೀಶ್ ನಿನ್ನೆ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ ಬೆನ್ನಲ್ಲೆ ಮಧ್ಯರಾತ್ರಿ ಮೈಸೂರಿನ ಆಸ್ಪತ್ರೆಗೆ ಕುಟುಂಬಸ್ಥರು ಶಿಫ್ಟ್ ಮಾಡಿದ್ದಾರೆ. ಆರೋಗ್ಯ ಸ್ಥಿತಿ ಬಗ್ಗೆ ಏನೂ ಹೇಳು ಆಗಲ್ಲ. ಬದುಕಿಸಲು ಪ್ರಯತ್ನ ಮಾಡ್ತೇವೆ ಎಂದು ವೈದ್ಯರು ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ವಿಷ ಸೇವನೆ ಪ್ರಕರಣ ಸಂಬಂಧ ಪಟ್ಟಂತೆ ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನಾಗಮಂಗಲದ ಡಿಪೋದಿಂದ 60ಕ್ಕೂ ಹೆಚ್ಚು ಕೆಎಸ್ಆರ್‌ಟಿಸಿ ಬಸ್‌ಗಳು ಕದಲದೇ ನಿಂತಿವೆ. ಹೀಗಾಗಿ ಬಸ್ ಸಂಚಾರ ಸ್ಥಗಿತ ಹಿನ್ನೆಲೆ ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿದೆ. ಸಚಿವ ಚಲುವರಾಯಸ್ವಾಮಿ ಸೂಚನೆ ಮೇರೆಗೆ ಚಾಲಕ ಜಗದೀಶ್ ವರ್ಗಾವಣೆ ಮಾಡಲಾಗಿದ್ದು, ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯ ವರ್ತನೆಯೇ ವರ್ಗಾವಣೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದರು.
ಸಂಸದ ತೇಜಸ್ವಿ ಸೂರ್ಯ ಹೆಸರಲ್ಲಿ ಅನಾಮಧೇಯ ಕರೆ: ವಜ್ರ, ಹಣಕ್ಕೆ ಬೇಡಿಕೆ
ಚಲುವರಾಯಸ್ವಾಮಿ ದ್ವೇಷದ ರಾಜಕಾರಣ ಆರಂಭಿಸಿದ್ದಾರೆ: ಗೆದ್ದು ಒಂದೂವರೆ ತಿಂಗಳ ಕಳೆದಿಲ್ಲ. ಚಲುವರಾಯಸ್ವಾಮಿ ದ್ವೇಷದ ರಾಜಕಾರಣ ಆರಂಭಿಸಿದ್ದಾರೆ. ಜೆಡಿಎಸ್ ಪರ ಚುನಾವಣೆ ಮಾಡಿದ್ದೇವೆ ಎಂಬ ಕಾರಣಕ್ಕೆ ನನ್ನ ಮಗನನ್ನು ವರ್ಗಾವಣೆ ಮಾಡಲಾಗಿದೆ. ಇಲ್ಲ-ಸಲ್ಲದ ಸುಳ್ಳು ಕಾರಣಗಳನ್ನು ನೀಡಿ ವರ್ಗಾವಣೆ ಮಾಡಿದ್ದಾರೆ. ಇದರಿಂದ ಮನನೊಂದ ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈಗ ಮಗನ ಪರಿಸ್ಥಿತಿ ಚಿಂತಾಜನಕವಾಗಿದೆ. ಆತ ಬದುಕುಳಿಯುವುದು ಕಷ್ಟಕರವಾಗಿದೆ. ನಾವು ಅಪ್ಪಟ ಜೆಡಿಎಸ್ ಬೆಂಬಲಿಗರು, ಹಲವು ವರ್ಷಗಳಿಂದ ಕುಮಾರಸ್ವಾಮಿ ಬೆಂಬಲಿಸಿದ್ದೇವೆ. ಸೊಸೆ ಕೂಡ ( ಜಗದೀಶ್ ಪತ್ನಿ ) ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯೆ. ಇದಲ್ಲೆವನ್ನು ಸಹಿಸಲಾರದೆ ನನ್ನ ಮಗನಿಗೆ ವರ್ಗಾವಣೆ ಕಿರುಕುಳ ನೀಡಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ಮುಖಂಡರಾದ ಬಸವರಾಜು ಹಾಗೂ ಮಹದೇವು ಕಾರಣ. ಸಚಿವ ಚಲುವರಾಯಸ್ವಾಮಿಗೆ ಒತ್ತಡ ಹೇರಿ ಮಗನನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ನಾಗಮಂಗಲದಲ್ಲಿ ಚಾಲಕ ಜಗದೀಶ್ ತಂದೆ ರಾಜೇಗೌಡ ತಿಳಿಸಿದ್ದಾರೆ.
ರಾಜಕೀಯ ವೈಷಮ್ಯದಿಂದ ವರ್ಗಾವಣೆ: ಜಗದೀಶ್ ಪತ್ನಿ ಪವನ ತಾಲೂಕಿನ ಕಾಂತಾಪುರ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯೆಯಾಗಿದ್ದು ಹಂದೇನಹಳ್ಳಿ ಪ್ರತಿನಿಧಿಸಿದ್ದಾರೆ. ಅದೇ ಗ್ರಾಮದ ಕಾಂಗ್ರೆಸ್ ಮುಖಂಡ ಮಹದೇವ ಮತ್ತು ಪವನ ಕುಟುಂಬಸ್ಥರ ನಡುವಿನ ವೈಯುಕ್ತಿಕ ದ್ವೇಷಕ್ಕೆ ಜಗದೀಶ್‌ಗೆ ಕಿರುಕುಳ ನೀಡಿ ವರ್ಗಾವಣೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ನನ್ನ ಪತಿ ಜಗದೀಶ್ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಅವರಿಗೆ ಯಾವುದೇ ನೋಟಿಸ್ ನೀಡದೇ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ಹಿಂದೆ ರಾಜಕೀಯ ವೈಷಮ್ಯವಿದೆ ಎಂದು ಪತ್ನಿ ಪವನ ಆರೋಪಿಸಿದ್ದಾರೆ.
ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆಗೆ ಸ್ಪೀಕರ್ ಒಪ್ಪಿಗೆ: ಸದನದಲ್ಲಿ ಬಿಜೆಪಿ ಧರಣಿ ಅಂತ್ಯ
ಚಾಲಕ ಕಂ.ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಆರ್.ಜಗದೀಶ್ ಕಳೆದ ಒಂದು ವಾರದ ಹಿಂದೆ ಮಹಿಳಾ ಪ್ರಯಾಣಿಕರೊಬ್ಬರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಇದು ಸಚಿವರ ಗಮನಕ್ಕೆ ಹೋಗಿ ವರ್ಗಾವಣೆ ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದ್ದರಿಂದ ವರ್ಗಾವಣೆ ಆಗಿತ್ತು. ವರ್ಗಾವಣೆ ಆದೇಶ ಪತ್ರ ತೆಗೆದುಕೊಳ್ಳುವಂತೆ ಸೂಚನೆ ನೀಡಿದೇವು. ಆದರೂ ಹೊರಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
-ಮಂಜುನಾಥ್, ಸಹಾಯಕ ಕಾರ್ಯ ಅಧೀಕ್ಷಕರು, ಕೆಎಸ್‌ಆರ್‌ಟಿಸಿ ಡಿಪೋ, ನಾಗಮಂಗಲ.