ಪ್ರಿಯಕರನ ಮೋಸಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿಯೋರ್ವಳು ಗರ್ಭ ಧರಿಸಿ ಅಕಾಲಿಕ ಗರ್ಭಪಾತಕ್ಕೆ ತುತ್ತಾಗಿದ್ದು, ಆ ಭ್ರೂಣವನ್ನು ಬಾಲಕಿ ಮತ್ತು ಅವಳು ತಾಯಿ ಸೇರಿ ಶೌಚಾಲಯದ ಗುಂಡಿಗೆ ಹಾಕಿ ನೀರು ಸುರಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗರ್ಭ ಧರಿಸಲು ಕಾರಣನಾದ ಯುವಕನನ್ನು ಬಂಧಿಸಿದ್ದು, ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
ಕುಷ್ಟಗಿ (ಜು.6) : ಪ್ರಿಯಕರನ ಮೋಸಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿಯೋರ್ವಳು ಗರ್ಭ ಧರಿಸಿ ಅಕಾಲಿಕ ಗರ್ಭಪಾತಕ್ಕೆ ತುತ್ತಾಗಿದ್ದು, ಆ ಭ್ರೂಣವನ್ನು ಬಾಲಕಿ ಮತ್ತು ಅವಳು ತಾಯಿ ಸೇರಿ ಶೌಚಾಲಯದ ಗುಂಡಿಗೆ ಹಾಕಿ ನೀರು ಸುರಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗರ್ಭ ಧರಿಸಲು ಕಾರಣನಾದ ಯುವಕನನ್ನು ಬಂಧಿಸಿದ್ದು, ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
ಕುಷ್ಟಗಿ ತಾಲೂಕಿನ ತೋಪಲಕಟ್ಟಿಗ್ರಾಮ(Topalikatti vilgae)ದಲ್ಲಿ ಫಕೀರಗೌಡ ಪೊಲೀಸ್‌ಪಾಟೀಲ ಎಂಬ ಯುವಕ ತನ್ನ ಮದುವೆಯಾಗುವುದಾಗಿ ನಂಬಿಸಿ, ಗರ್ಭಿಣಿಯನ್ನಾಗಿ ಮಾಡಿದ್ದಾನೆ ಎಂದು ಬಾಲಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯಿದೆಯಡಿ ಕುಷ್ಟಗಿ ಪೊಲೀಸರು ದೂರು ದಾಖಲಿಸಿಕೊಂಡು, ಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹುಡುಗರೇ ಗೆಳತಿ ಭೇಟಿಗೆ ತೆರಳುವ ಮುನ್ನ ಸಾವಿರ ಬಾರಿ ಯೋಚಿಸಿ: ಇಲ್ಲೇನಾಯ್ತು ನೋಡಿ
ತೋಪಲಕಟ್ಟಿಗ್ರಾಮದ ಫಕೀರಗೌಡ ಹನುಮಗೌಡ ಪೊಲೀಸ್‌ಪಾಟೀಲ್ ಕುರಿ ಕಾಯುವ ನೆಪದಲ್ಲಿ ಬಾಲಕಿಯ ಮನೆಯ ಕಡೆ ಹೋಗಿ ನೀರು ಕೇಳುವುದು, ಮಾತನಾಡಿಸುವುದು ಮಾಡುತ್ತಿದ್ದ. ಬಾಲಕಿ ಆತನ ಮೋಸದ ಮಾತಿಗೆ ಬಲಿಯಾಗಿ, ಪ್ರೀತಿಯ ಬಲೆಗೆ ಬಿದ್ದಿದ್ದಾಳೆ.
ಸುಮಾರು ನಾಲ್ಕು ತಿಂಗಳ ಹಿಂದೆ ದೈಹಿಕ ಸಂಪರ್ಕ ಮಾಡಿದ್ದು, ಆಕೆಯ ಆರೋಗ್ಯದಲ್ಲಿ ಏರುಪೇರಾಗಿ ಚಳಗೇರಾ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ಗರ್ಭಿಣಿ ಎಂದು ತಿಳಿದುಬಂದಿದೆ. ಆನಂತರದಲ್ಲಿ ತಂದೆ-ತಾಯಿಯೊಂದಿಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೋಗಿದ್ದು, ರಕ್ತ ಪ್ರಮಾಣ ಕಡಿಮೆ ಇರುವುದರಿಂದ ಮುಂದಿನ ತಿಂಗಳು ಸಹ ಬಂದು ಪರೀಕ್ಷೆ ಮಾಡಿಸುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಜೂ. 23ರಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಜೂ. 24ರಂದು ರಾತ್ರಿ ಶೌಚಕ್ಕೆ ಹೋದಾಗ ತೀವ್ರ ರಕ್ತಸ್ರಾವವಾಗಿ ಗರ್ಭಪಾತವಾಗಿದೆ. ಗಾಬರಿಗೊಂಡ ಆಕೆ ತಾಯಿಯನ್ನು ಶೌಚಗೃಹಕ್ಕೆ ಕರೆಸಿಕೊಂಡಳು. ಬಳಿಕ ತಾಯಿ ಶಿಶುವನ್ನು ಹೊರಗೆ ತೆಗೆದು ಶೌಚಾಲಯದಲ್ಲಿ ಹಾಕಿ ನೀರು ಹಾಕಿದಳು. ಮರುದಿನ ಜಿಲ್ಲಾಸ್ಪತ್ರೆಯಿಂದ ಮನೆಗೆ ಮರಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ಮದುವೆಗೆ ಜಾತಿ ಅಡ್ಡಿ; ದೈಹಿಕ ಸಂಬಂಧ ಬೆಳೆಸಿ ಮೋಸ ಹೋದ ಯುವತಿ ನೇಣಿಗೆ ಶರಣು!
ಫಕೀರಗೌಡ ಹನುಮಗೌಡ ಪೊಲೀಸ್‌ಪಾಟೀಲ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಿದ್ದಾಳೆ. ಈ ಕುರಿತು ಪಿಎಸ್‌ಐ ಮೌನೇಶ ರಾಠೋಡ ಅವರು ಮಾಹಿತಿ ನೀಡಿ, ಬಾಲಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.