
ಬೆಂಗಳೂರು, (ಜೂನ್.24): ಕೊರೋನಾ ಭೀತಿಯಿಂದ ಇಷ್ಟುದಿನ ಸ್ಥಗಿತಗೊಂಡಿದ್ದ ಹವಾನಿಯಂತ್ರಿತ (ಎಸಿ) ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ
ಕೊರೋನಾ ಭೀತಿಯ ನಡುವೆಯೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ ಅಂದ್ರೆ ಜೂನ್ 25ರಿಂದ ಎಸಿ ಬಸ್‌ಗಳು ಕೂಡ ರಸ್ತೆಗಿಳಿಯಲಿವೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಇಂದು (ಬುಧವಾರ) ಪ್ರಕಟಣೆ ಹೊರಡಿಸಿದೆ.
KSRTC ಕಂಡಕ್ಟರ್, ಡ್ರೈವರ್ ಭದ್ರತಾ ಕಾರ್ಯಕ್ಕೆ!
ಎಸಿ ಬಸ್ ಸಂಚಾರವನ್ನು ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಕೆಎಸ್‌ಆರ್‌ಟಿಸಿ ನಿಲ್ಲಿಸಿತ್ತು. ಲಾಕ್ ಡೌನ್ ಸಡಿಲಿಕೆಯ ನಂತ್ರ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಹಂತ ಹಂತವಾಗಿ ಆರಂಭ ಕೂಡ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿತ್ತು. ಇದೀಗ ಮೊದಲ ಹಂತವಾಗಿ ನಾಳೆಯಿಂದ (ಗುರುವಾರ) ಕೆಲ ಜಿಲ್ಲೆಗಳಿಗೆ ಎಸಿ ಬಸ್ ಸಂಚಾರ ಸೇವೆ ಆರಂಭಗೊಳ್ಳಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಮೊದಲ ಹಂತದಲ್ಲಿ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ ಮತ್ತು ಸದರಿ ಸ್ಥಳಗಳಿಂದ ಬೆಂಗಳೂರಿಗೆ ಎಸಿ ಬಸ್ ಸಾರಿಗೆ ಸಂಚಾರ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಅಂತರ ಎಲ್ಲಿದೆ ಸಚಿವರೇ? ಅಕ್ಕಪಕ್ಕದಲ್ಲೇ ಕುಳಿತೇ ಬಸ್ ಪ್ರಯಾಣ
ಯಾವ ಯಾವ ಜಿಲ್ಲೆಗಳಿಗೆ ಎಸಿ ಬಸ್ ಸಂಚಾರ
ಮೈಸೂರು
ಮಂಗಳೂರು
ಕುಂದಾಪುರ
ಚಿಕ್ಕಮಗಳೂರು
ಮಡಿಕೇರಿ
ದಾವಣಗೆರೆ
ಶಿವಮೊಗ್ಗ
ವಿರಾಜಪೇಟೆ
ಈ ಮೇಲಿನ ಜಿಲ್ಲೆಗಳಿಗೆ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿಯ ಎಸಿ ಬಸ್ ಸಂಚಾರ ಆರಂಭಗೊಳ್ಳಲಿದೆ. ಅಲ್ಲದೇ ಹವಾ ನಿಯಂತ್ರಿತ ಸಾರಿಗಗಳಲ್ಲಿ ಮಾರ್ಗಸೂಚಿಯ ಅನ್ವಯ 24 ರಿಂದ 25 ಸೆಂಟಿಗ್ರೇಡ್ ತಾಪಮಾನವನ್ನು ನಿರ್ವಹಿಸಲಿದೆ.
ಆದ್ರೇ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಈ ಮೊದಲು ಎಸಿ ಬಸ್ ಗಳಲ್ಲಿ ನೀಡಲಾಗುತ್ತಿದ್ದಂತೆ ಹೊದಿಕೆಗಳನ್ನು ನೀಡಲಾಗುವುದಿಲ್ಲ. ಹೀಗಾಗಿ ಪ್ರಯಾಣಿಕರೇ ತಮ್ಮ ಹೊದಿಕೆಗಳನ್ನು ತಾವೇ ತರುವಂತೆ ಸಂಸ್ಥೆ ಕೋರಿಕೊಂಡಿದೆ.
ಈ ಮೇಲ್ಕಂಡ ಮಾರ್ಗಗಳಲ್ಲಿ ಮುಂಗಡ ಎಸಿ ಬಸ್ ಟಿಕೇಟ್ ಬುಕ್ಕಿಂಗ್ ಕೂಡ ಕೆ ಎಸ್ ಆರ್ ಟಿ ಸಿ ಆರಂಭಿಸಿದ್ದು, www.ksrtc.in ವೆಬ್ ಸೈಟ್ ಇಲ್ಲವೇ ನಿಗಮದ, ಫ್ರಾಂಚೈಸಿ ಕೌಂಟರ್ ಗಳ ಮುಖಾಂತರವೂ ಮುಂಗಡ ಟಿಕೇಟ್ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರ ಸಂಖ್ಯೆ ವಿರಳ
ಹೌದು..ಲಾಕ್‌ಡೌನ್ ಸಡಿಲಿ ಮಾಡಿದ ನಂತರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿ ತಿಂಗಳು ಕಳೆಯುತ್ತಾ ಬಂದಿದೆ. ಆದ್ರೆ, ಪ್ರಯಾಣಿಕರು ಬಸ್ ಏರಲು ಹಿಂಜರಿಯುತ್ತಿದ್ದಾರೆ. ಕೊರೋನಾ ವೈರಸ್ ಭಯದಿಂದ ಜನರು ಸ್ವಂತ ವಾಹನಗಳಲ್ಲಿ ಓಡಾಡಲು ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಈ ಬಗ್ಗೆ ಹಿಂದೆ ಸ್ವತಃ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ