ಸಿಲಿಕಾನ್ ಸಿಟಿ ಗಂಡು ಮಕ್ಕಳೇ ಹುಷಾರ್: ಪುರುಷರನ್ನೇ ಬೆಂಬಿಡದೆ ಕಾಡ್ತಿದೆ ಡೆಡ್ಲಿ ಕೊರೋನಾ..!

By Suvarna News  |  First Published Jun 24, 2020, 12:30 PM IST

ಪುರುಷರೇ ಕೊರೋನಾದ ಟಾರ್ಗೆಟ್| ಕೊರೋನಾದಿಂದ ಅತಿ ಹೆಚ್ಚು ಸೋಂಕಿತರಾಗ್ತಿರೋದೇ ಪುರುಷರೇ|ಸಣ್ಣ ಬಾಲಕರಿಂದ ವೃದ್ಧರ ವರೆಗೂ ಪುರುಷರೇ ಅತಿ ಹೆಚ್ಚು ಸೋಂಕಿತರು| ಬೆಂಗಳೂರಿನ 1512 ಕೇಸ್‌ಗಳಲ್ಲಿ 934 ಪುರುಷರು, ಕೇವಲ 577 ಮಹಿಳಾ ಸೋಂಕಿತರು|


ಬೆಂಗಳೂರು(ಜೂ.24): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೆ ಮಹಾಮಾರಿ ಕೊರೋನಾ ರಣಕೇಕೆ ಹಾಕುತ್ತಿದೆ. ನಗರದ ಗಲ್ಲಿ ಗಲ್ಲಿಗೂ ಕೊರೋನಾ ವೈರಸ್‌ ದಾಂಗುಡಿ ಇಟ್ಟಿದೆ. ಇದರಿಂದ ನಗರದ ಜನತೆ ಬಿಟ್ಟು ಹೊರಗಡೆ ಬರೋದಕ್ಕೂ ಹಿಂದೆ ಮುಂದೆ ಯೋಚನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

"

Tap to resize

Latest Videos

ಅದರಲ್ಲೂ  ಕೊರೋನಾ ವೈರಸ್‌ ಪುರುಷನ್ನೇ ಟಾರ್ಗೆಟ್‌ ಮಾಡಿದೆಯಾ? ಪುರುಷರಲ್ಲಿ ಇಮ್ಯುನಿಟಿ ಪವರ್ ಕಡಿಮೆ ಇದಿಯಾ..? ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸಿವೆ. ಇದಕ್ಕೆಲ್ಲಾ ಈ ಅಂಕಿ ಸಂಖ್ಯೆಗಳೇ ಸಾಕ್ಷಿಯಾಗಿವೆ.
ಹೌದು, ಸದ್ಯ ಬೆಂಗಳೂರಿನಲ್ಲಿ ಕೊರೋನಾದಿಂದ ಅತಿ ಹೆಚ್ಚು ಸೋಂಕಿತರಾಗುತ್ತಿರುವುದು ಪುರುಷರೇ ಆಗಿದ್ದಾರೆ.   ಸಣ್ಣ ಬಾಲಕರಿಂದ ವೃದ್ಧರವರೆಗೂ ಪುರುಷರೇ ಅತಿ ಹೆಚ್ಚು ಸೋಂಕಿತರಾಗಿದ್ದಾರೆ. ಬೆಂಗಳೂರಿನ 1512 ಕೇಸ್‌ಗಳಲ್ಲಿ 934 ಪುರುಷರು ಸೋಂಕಿತರಾಗಿದ್ದು, ಕೇವಲ 577 ಮಹಿಳೆಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿದೆ. 

ನಮ್ಮ ಮೆಟ್ರೋ ಸಂಚಾರ ಪುನರಾರಂಭ ಬಗ್ಗೆ ನಾಳೆ ಮಹತ್ವದ ನಿರ್ಧಾರ..!

ಇನ್ನು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದವರಲ್ಲೂ ಕೂಡ ಪುರುಷರೇ ಹೆಚ್ಚಾಗಿದ್ದಾ ಎಂದು ತಿಳಿದು ಬಂದಿದೆ. ಈವರೆಗೂ ಬೆಂಗಳೂರಿನ್ಲಲಿ ಮಹಾಮಾರಿ ಕೊರೋನಾಗೆ ಒಟ್ಟು 73 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ 46 ಮಂದಿ ಪುರುಷರು,  27 ಮಂದಿ ಮಹಿಳೆಯರಾಗಿದ್ದಾರೆ. 50 ರಿಂದ 70 ವರ್ಷದ ವಯೋಮಾನದವರು ಒಟ್ಟು 27 ಜನ ಕೊರೋನಾಗೆ ಜೀವತೆತ್ತಿದ್ದಾರೆ. 
 

click me!