ಅಮೆಜಾನ್ನಲ್ಲಿ ಹೆಚ್ಚಾಗ್ತಿದೆ silent sacking, ಉದ್ಯೋಗಿಗಳನ್ನು ಓಡಿಸೋಕೆ ಈ ಟ್ರಿಕ್ ಬೆಸ್ಟ್

ಕಚೇರಿಯಲ್ಲಿ ಕೆಲಸ ಮಾಡೋದೆ ಕಷ್ಟ ಎನ್ನುವ ಸ್ಥಿತಿ ಬಂದಾಗ ಬೇರೆ ದಾರಿ ಇಲ್ದೆ ಉದ್ಯೋಗಿಗಳೇ ಕೆಲಸ ಬಿಡ್ತಾರೆ. ಇದನ್ನು ಕಾರ್ಪೊರೇಟ್ ಕಂಪನಿಗಳು ಸರಿಯಾಗಿ ಅರ್ಥ ಮಾಡ್ಕೊಂಡಿವೆ. ಸೈಲೆಂಟ್ ಸ್ಯಾಕಿಂಗ್ ಹೆಸರಿನಲ್ಲಿ ಸಿಬ್ಬಂದಿಯನ್ನು ಕಚೇರಿಯಿಂದ ಹೊರ ಹಾಕ್ತಿವೆ. 

Amazon has followed Silent sacking to lay off employees roo

ಆಫೀಸ್ (Office) ನಲ್ಲಿ ಸಹೋದ್ಯೋಗಿಗಳಿಗಿಂತ ನೀವು ಹೆಚ್ಚು ಕೆಲಸ ಮಾಡ್ತಿದ್ದೀರಾ? ಎಲ್ಲರಿಗೂ ಪ್ರಮೋಷನ್, ಸ್ಯಾಲರಿ ಹೈಕ್ ಆದ್ರೂ ನೀವು ಇದ್ದಲ್ಲೇ ಇದ್ದೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಯಸ್ ಅಂತಾದ್ರೆ, ಕೆಲಸ ಬಿಡುವ ಕೌಂಟ್ ಡೌನ್ ಶುರುವಾಗಿದೆ ಅಂದ್ಕೊಳ್ಳಿ. ನಿಮ್ಮ ಕಂಪನಿ, ಕೆಲಸ ಬಿಡಿ ಅಂತಾಗ್ಲಿ ಇಲ್ಲ ನಿಮ್ಮನ್ನ ಕೆಲಸದಿಂದ ವಜಾ ಮಾಡೋದಾಗ್ಲಿ ಮಾಡೋದಿಲ್ಲ. ಅದ್ರ ಬದಲು ನೀವೇ ಕೆಲಸ ಬಿಡುವ ಸ್ಥಿತಿ ನಿರ್ಮಾಣ ಮಾಡುತ್ತೆ. ಕಾರ್ಪೊರೇಟ್ ಸಂಸ್ಕೃತಿ (corporate culture) ಯಲ್ಲಿ ಇದು ಹೆಚ್ಚಾಗ್ತಿದೆ. ಉದ್ಯೋಗಿಗಳನ್ನು ವಜಾ ಮಾಡುವ ಬದಲು ಸೈಲೆಂಟ್ ವಜಾ (silent sacking) ರೂಲ್ಸ್ ಫಾಲೋ ಮಾಡಲಾಗ್ತಿದೆ. 

ಕಾರ್ಪೋರೇಟ್ ಕಂಪನಿಗಳ ಹೊಸ ಮಾರ್ಗ : ಖಾಸಗಿ ಕಂಪನಿಗಳು (Private Companies) ಉದ್ಯೋಗಿಗಳನ್ನು ವಜಾ ಮಾಡಿದಾಗ ಇದರಿಂದ ಕಂಪನಿಗೆ ಕೆಟ್ಟ ಹೆಸರು ತರುತ್ತೆ. ಕಂಪನಿ ಮೌಲ್ಯ ಮಾರ್ಕೇಟ್ ನಲ್ಲಿ ಕಡಿಮೆ ಆಗುತ್ತೆ. ಇದೆಲ್ಲದರಿಂದ ಬಚಾವ್ ಆಗುವ ಜೊತೆಗೆ ಆಫೀಸ್ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ಕಂಪನಿಗಳು ಈಗ ಸ್ಮಾರ್ಟ್ ಐಡಿಯಾ (Smart Idea) ಫಾಲೋ ಮಾಡ್ತಿವೆ. ಅದನ್ನೇ ಸೈಲೆಂಟ್ ವಜಾ ಎಂದು ಕರೆಯಲಾಗುತ್ತದೆ. 

ಅಶ್ನೀರ್ ಗ್ರೋವರ್ ಕೇವಲ ಒಂದು ದಿನದಲ್ಲಿ 1 ಕೋಟಿ ಸಂಬಳದ EY ಉದ್ಯೋಗವನ್ನು ತೊರೆದಿದ್ದೇಕೆ?

Silent sacking ಹೇಗಿರುತ್ತೆ? : ಸೈಲೆಂಟ್ ಸ್ಯಾಕಿಂಗ್ ನಲ್ಲಿ ಕಂಪನಿ, ಉದ್ಯೋಗಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತೆ. ಆತನ ಕೆಲಸದ ಸ್ಥಿತಿಯನ್ನು ಹದಗೆಡಿಸುತ್ತದೆ. ಮೊದಲೇ ಪ್ಲಾನ್ ಮಾಡಿ ಆತನಿಗೆ ಹೆಚ್ಚಿನ ಕೆಲಸವನ್ನು ನೀಡುತ್ತದೆ. ಆತ ಮಾಡಿದ ಕೆಲಸದಲ್ಲಿ ಲೋಪದೋಷ ಹುಡುಕಿ ಕಿರಿಕಿರಿ ನೀಡಲು ಶುರು ಮಾಡುತ್ತದೆ. ಉದ್ಯೋಗಿ ಈ ಬಗ್ಗೆ ದೂರು ನೀಡಿದ್ರೂ ಪ್ರಯೋಜನ ಇರೋದಿಲ್ಲ. ಕೆಲ ಕಂಪನಿಗಳು, ಅತಿ ಕಡಿಮೆ ಕೆಲಸ ನೀಡಿ, ಆತನ ಪರ್ಫಾರ್ಮೆನ್ಸ್ ಕಡಿಮೆ ಇದೆ ಎಂಬುದನ್ನು ಬಿಂಬಿಸಲು ಶುರು ಮಾಡುತ್ತವೆ. ಉದ್ಯೋಗಿ ಮಾಡಿದ್ದೆಲ್ಲ ತಪ್ಪಾಗುತ್ತದೆ. ಸಹೋದ್ಯೋಗಿಗಳಿಗೆ ಹೋಲಿಸಿದ್ರೆ ಈತ ಮಾಡುವ ಕೆಲಸ ಹೆಚ್ಚು, ಸಂಬಳ ಕಡಿಮೆ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಸಂಬಳ ಏರಿಕೆ, ಪ್ರಮೋಷನ್ ಸೇರಿದಂತೆ ಎಲ್ಲ ಕಡೆ ಕಂಪನಿ ಈ ಉದ್ಯೋಗಿಯನ್ನು ಟಾರ್ಗೆಟ್ ಮಾಡುತ್ತದೆ. ಪ್ರಮೋಷನ್ ಅಥವಾ ಸಂಬಳ ಕೇಳಿದಾಗ, ಸ್ವಲ್ಪ ದಿನ ಕಾಯುವಂತೆ ಉದ್ಯೋಗಿಗೆ ಹೇಳಲಾಗುತ್ತದೆ. ಇದ್ರಿಂದ ಉದ್ಯೋಗಿ ಬೇಸತ್ತು, ತಾನಾಗಿಯೇ ಕೆಲಸ ಬಿಡುವ ನಿರ್ಧಾರಕ್ಕೆ ಬರ್ತಾನೆ. 

ಸೈಲೆಂಟ್ ವಜಾದಿಂದ ಕಂಪನಿಗೆ ಸಾಕಷ್ಟು ಲಾಭವಿದೆ. ಉದ್ಯೋಗಿ ತಾನೇ ರಾಜೀನಾಮೆ ನೀಡಿದಾಗ, ಆತನಿಗೆ ಮೂರು ತಿಂಗಳ ಸಂಬಳವನ್ನು ಕಂಪನಿ ಕೊಡ್ಬೇಕಾಗಿಲ್ಲ. ಜೊತೆಗೆ ಕಂಪನಿ ಗೌರವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಮಾರ್ಕೆಟ್ ನಲ್ಲಿ ಕಂಪನಿ, ಉದ್ಯೋಗಿಗಳನ್ನು ವಜಾ ಮಾಡ್ತಿದೆ ಎನ್ನುವ ರೆಡ್ ಮಾರ್ಕ್ ಬೀಳೋದಿಲ್ಲ. 

ಯಾವ ಕಂಪನಿಯ ಗಗನಸಖಿಯರಿಗೆ ಸಿಗುತ್ತೆ ಹೆಚ್ಚು ಸಂಬಳ?

ಅಮೆಜಾನ್ ನಲ್ಲಿ ನಡೆಯುತ್ತಿದೆ ಸೈಲೆಂಟ್ ಸ್ಯಾಕಿಂಗ್ : ಇ- ಕಾಮರ್ಸ್ ಕಂಪನಿ ಅಮೆಜಾನ್ ಈ ಸೈಲೆಂಟ್ ಸ್ಯಾಕಿಂಗ್ ನಡೆಸ್ತಿದೆ ಎನ್ನುವ ಸುದ್ದಿ ಇದೆ. ಅಮೆಜಾನ್ ಕೆಲ ದಿನಗಳ ಹಿಂದೆ ಉದ್ಯೋಗಿಗಳಿಗೆ 60 ದಿನಗಳ ಸಂಬಳ ನೀಡಿ ಕೆಲಸದಿಂದ ವಜಾ ಮಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕೆಲ ಪೋಸ್ಟ್ ವೈರಲ್ ಆಗ್ತಾನೆ ಇದೆ. ಮಾಜಿ ಉದ್ಯೋಗಿಗಳು ಇದ್ರ ಬಗ್ಗೆ ಮಾತನಾಡ್ತಿದ್ದಾರೆ. ಜಾನ್ ಮ್ಯಾಕ್‌ಬ್ರೈಡ್, ಉದ್ಯೋಗಿಗಳನ್ನು ಮೀಟಿಂಗ್ ನಿಂದ ದೂರ ಇಡೋದು, ಟಾರ್ಗೆಟ್ ರೀಚ್ ಆಗಲು ಅಸಾಧ್ಯವಾದ ಕೆಲಸ ನೀಡೋದು ಸೇರಿದಂತೆ ಸಾಕಷ್ಟು ಒತ್ತಡ ಹೇರಲಾಗುತ್ತದೆ. ಇದು ಉದ್ಯೋಗಿಗಳನ್ನು ಸೈಲೆಂಟ್ ಆಗಿ ಕಚೇರಿಯಿಂದ ಹೊರ ಹಾಕುವ ಹೊಸ ಮಾರ್ಗ ಎಂದಿದ್ದಾರೆ. 

Latest Videos
Follow Us:
Download App:
  • android
  • ios