
ಶಿವಮೊಗ್ಗ (ಸೆ.9): ಈ ದೇಶದ ಅನ್ನ ತಿಂದು, ಗಾಳಿ ಉಸಿರಾಡಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ಮನಸ್ಥಿತಿಯ ಮುಸ್ಲಿಮರ ಇನ್ನು ಇಲ್ಲಿ ಬದುಕಿದ್ದಾರಲ್ಲ ಅದು ನಾಚಿಕೆಗೇಡು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ವೇಳೆ ಮುಸ್ಲಿಂ ಯುವಕರು ಗುಂಪು ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಈ ಸಂಬಂಧ ಸುವರ್ಣನ್ಯೂಸ್ ಪ್ರತಿನಿಧಿ ರಾಜೇಶ್ ಜೊತೆ ಮಾತನಾಡಿದ ಕೆಎಸ್ ಈಶ್ವರಪ್ಪ ಅವರು, ನಮ್ಮ ಬೆಂಬಲಕ್ಕೆ ಆಡಳಿತರೂಢ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ ಎಂಬ ದೇಶದ್ರೋಹಿ ಭಾವನೆ ಮತಾಂಧ ಮುಸ್ಲಿಂರಲ್ಲಿದೆ. ಹೀಗಾಗಿ ಯಾವುದೇ ಕಾನೂನು ಪೊಲೀಸರ ಭಯವಿಲ್ಲದೇ ಈ ರೀತಿ ಪಾಕಿಸ್ತಾನ ಪರ ಘೋಷಣೆ ಕೂಗುವುದು, ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದ ವಿರುದ್ಧ ಕಿಡಿಕಾರಿದರು.
ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನ ಪರ ಘೋಷಣೆ ಕೂಗುವುದು ಸರಿಯಲ್ಲ. ಪಹಲ್ಗಾಂ ದಾಳಿ ವೇಳೆ ಇಡೀ ದೇಶ ಒಗ್ಗಟ್ಟಾಗಿತ್ತು. ಮುಸ್ಲಿಮರು ನರೇಂದ್ರ ಮೋದಿ ಮತ್ತು ಭಾರತದ ಪರ ನಿಂತಿದ್ದರು. ಇದೀಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ, ಕೋಲಾರ, ವಿಜಯಪುರದಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ, ಇದೀಗ ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆಂದರೆ ಇವರಿಗೆಲ್ಲ ಎಷ್ಟು ಸೊಕ್ಕು ಇರಬೇಕು? ಘೋಷಣೆ ಕೂಗಿದ್ದಕ್ಕೆ ಮುಸ್ಲಿಂ ಯುವಕರು ಕ್ಷಮೆ ಕೇಳಬೇಕು, ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಬೇಕು, ರಾಷ್ಟ್ರದ್ರೋಹದ ಕಾಯ್ದೆಗಳನ್ನ ಬಳಸಿ ಅವರನ್ನು ಬಂಧಿಸಬೇಕು. ಈ ದೇಶದ್ರೋಹಿಗಳ ಹಿಂದಿರುವ ಶಕ್ತಿ ಯಾವುದೆಂದು ಪೊಲೀಸರು ಪತ್ತೆ ಹಚ್ಚಬೇಕು. ಈ ರೀತಿ ಕ್ರಮ ಕೈಗೊಂಡರೆ ಮಾತ್ರ ಭಾರತಾಂಬೆಗೆ ಸಮಾಧಾನ ಆಗುತ್ತ ಎಂದರು.
ಈ ಹಿಂದೆ ವಿಧಾನಸಭೆಯಲ್ಲಿ ಚುನಾವಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಈ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿಹಾಕಿದೆ. ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಾರೆ ಎಂದರೆ ಈ ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂಬ ಪ್ರಶ್ನೆ ಮೂಡುತ್ತಿದೆ. ಮುಸಲ್ಮಾನರಿಗೆ ದೇಶದ್ರೋಹಿ ಚಟುವಟಿಕೆಗೆ ಬೆಂಬಲ ಕೊಡುವ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ಈ ಮನಸ್ಥಿತಿ ಯುವಕರಲ್ಲಿದೆ. ಮುಸ್ಲಿಮರನ್ನು ತೃಪ್ತಿಪಡಿಸಿದರೆ ನಮಗೆ ವೋಟ್ ಬರುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ನಿಲುವಿನಿಂದ ಈ ಸ್ಥಿತಿ ಬಂದಿದೆ. ದೇಶದ ಭದ್ರತೆ, ಸುರಕ್ಷತೆ ಬಲಿಕೊಟ್ಟು ಇಂಥ ದೇಶದ್ರೋಹಿಗಳ ವೋಟಿಗೋಸ್ಕರ್ ಅದೆಲ್ಲಿವರೆಗೆ ಓಲೈಕೆ ಮಾಡ್ತೀರಿ? ಕಾಂಗ್ರೆಸ್ ನವರಿಗೆ ದೇಶ ಪ್ರೇಮ, ಅಭಿಮಾನ, ನಿಯತ್ತು ಅನ್ನೋದು ಇದ್ರೆ ಕಠಿಣಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ