
ಬೆಂಗಳೂರು (ಮೇ.4): ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿಗೆ ಶನಿವಾರ ನಡೆದ ಮುಖ್ಯ ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ಮತ್ತೆ ದೋಷಗಳು ನುಸುಳಿದ್ದು, ಪ್ರಶ್ನೆಪತ್ರಿಕೆಯನ್ನು ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅನೇಕ ಸ್ಪರ್ಧಾರ್ಥಿಗಳು ಕೆಪಿಎಸ್‌ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ಬಾರಿ ಪೂರ್ವಭಾವಿ ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ಸಮಸ್ಯೆಗಳಾಗಿದ್ದರೂ ಕೆಪಿಎಸ್‌ಸಿ ಪಾಠ ಕಲಿತಿಲ್ಲ ಎಂದು ಕಿಡಿ ಕಾರಿದ್ದಾರೆ.
25 ಅಂಕಗಳ ಸಂಕ್ಷಿಪ್ತ ಲೇಖನದಲ್ಲಿ ವಾಕ್ಯ ರಚನೆಯ ತಪ್ಪುಗಳು ಕಂಡು ಬಂದಿವೆ. ಅಲ್ಲದೇ, 25 ಅಂಕಗಳ ಪ್ರಬಂಧದಲ್ಲಿ ವಾಕ್ಯ ರಚನೆ ಮತ್ತು ಪದಗಳು ಕೂಡ ತಪ್ಪಾಗಿವೆ.
ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು. ಇಲ್ಲಿಯ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ‘ಟ್ರಾಮ್ ಬಸ್ಸುಗಳಿಗೆ ಸಕಾಲಕ್ಕೆ ಹೋಗುವುದಾಗುವುದಿಲ್ಲ’. ಎಂದು ಬರೆಯಲಾಗಿದೆ. ಆದರೆ, ಈ ಸಾಲನ್ನು ಸರಳವಾಗಿ, ‘ಜನದಟ್ಟಣೆ ಕಾರಣ ಟ್ರಾಮ್ ಬಸ್ಸುಗಳು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುವುದಿಲ್ಲ’ ಎಂದು ಬರೆಯಬಹುದಿತ್ತು.
ಇದನ್ನೂ ಓದಿ: KPSC ತಿದ್ದುಪಡಿ ವಿಧೇಯಕ 2025: ವಾಪಾಸ್ ಕಳುಹಿಸಿದ ರಾಜ್ಯಪಾಲ, ಕಾರಣ ಏನು?
ಮತ್ತೊಂದು ವಾಕ್ಯದಲ್ಲಿ ‘ನಿಮ್ಮ ದೇಶದ ಗೌರವವನ್ನು ಕಾಯಿರಿ!’ ಎಂದಿದೆ. ಅದರ ಬದಲು ‘ನಿಮ್ಮ ದೇಶದ ಗೌರವವನ್ನು ಎತ್ತಿ ಹಿಡಿಯಿರಿ’ ಎಂದು ಬರೆಯಬೇಕಿತ್ತು. ‘ಫಿಫ್ಟಿ ಶಿಲ್ಲಿಂಗ್ ಟೈಲರ್ಸ್’ ಎಂಬುದು ವಸ್ತ್ರ ಉತ್ಪಾದಕಾ ಕಂಪನಿಯಾಗಿದೆ. ಆದರೆ, ಅದನ್ನು ‘ಐವತ್ತು ಶಿಲಿಂಗಿನ ಸಿಂಪಿಗಳು’ ಎಂದು ಅನಗತ್ಯವಾಗಿ ಭಾಷಾಂತರ ಮಾಡಲಾಗಿದೆ.
ಇದೇ ರೀತಿ ಪ್ರಬಂಧದ ಹಲವು ಕಡೆ ತಪ್ಪುಗಳು ಕಂಡು ಬಂದಿವೆ.
ತಪ್ಪು ಪದಗಳು ಮುದ್ರಣ: ಪುಸ್ತಕ ಎಂಬುದನ್ನು ತಪ್ಪಾಗಿ ಪ್ರಸ್ತಕ, ರಾಕ್ಷಸ- ರಾಕ್ಷನ, ಚೀರಿಕೊಂಡುಬಿಟ್ಟನು - ಚೀರಿಕೊಂಡಲುಬಿಟ್ಟನು, ಹಾಕಿ - ಹಾಕ್ದೆ, ಎಂದನು - ಎಂದಿನು. ನಿನ್ನೆಯಂತೆಯೇ- ನೆನ್ನಿನಂತೆಯೇ ಎಂದು ಅನೇಕ ಪದಗಳು ತಪ್ಪಾಗಿವೆ.
ಇದನ್ನೂ ಓದಿ: ಕೆಪಿಎಸ್ಸಿ ಅಧ್ಯಕ್ಷ, ಸದಸ್ಯರ ಆಯ್ಕೆಗೆ ಸರ್ಚ್ ಕಮಿಟಿ: ಸಚಿವ ಸಂಪುಟ ಸಭೇಲಿ ಮಹತ್ವದ ನಿರ್ಧಾರ
ಶೇ.93.30ರಷ್ಟು ಹಾಜರಾತಿ
ಶನಿವಾರ ಅರ್ಹತಾದಾಯಕ ಪತ್ರಿಕೆಯ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆ ನಡೆದವು. ಹೆಸರು ನೋಂದಾಯಿಸಿಕೊಂಡಿದ್ದ 5,424 ಅಭ್ಯರ್ಥಿಗಳಲ್ಲಿ ಶೇ.93.30 ಜನ ಹಾಜರಾಗಿದ್ದರು.
ಇನ್ನು ಮುಖ್ಯ ಪರೀಕ್ಷೆ ಬರೆಯಲು ನ್ಯಾಯಾಲಯದಿಂದ ಅನುಮತಿ ಪಡೆದು ಅರ್ಜಿ ಸಲ್ಲಿಸಿದ್ದ 322 ಅಭ್ಯರ್ಥಿಗಳ ಪೈಕಿ ಸುಮಾರು 15 ಜನ ಪರೀಕ್ಷೆಯ ಪ್ರವೇಶಪತ್ರವನ್ನೇ ಪಡೆದಿರಲಿಲ್ಲ. ಪ್ರವೇಶ ಪತ್ರ ಪಡೆದವರ ಪೈಕಿ 15ಕ್ಕೂ ಹೆಚ್ಚು ಜನ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಕೆಪಿಎಸ್‌ಸಿ ಅಧಿಕಾರಿ ಮಾಹಿತಿ ನೀಡಿದರು.
ಪೂರ್ವಭಾವಿ ಪರೀಕ್ಷೆಯಲ್ಲಿ 2 ಬಾರಿಯೂ ದೋಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ