KPL: ಇಬ್ಬರು ಬುಕಿಗಳ ಸೆರೆಗೆ ಲುಕೌಟ್‌ ನೋಟಿಸ್‌!

By Kannadaprabha NewsFirst Published Nov 5, 2019, 8:39 AM IST
Highlights

ಕರ್ನಾಟಕ ಪ್ರಿಮೀಯರ್‌ ಲೀಗ್‌ (ಕೆಪಿಎಲ್‌) ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ದೆಹಲಿ ಮೂಲದ ಇಬ್ಬರು ಪ್ರಮುಖ ಬುಕ್ಕಿಗಳ ಬಂಧನಕ್ಕೆ ‘ಲುಕ್‌ಔಟ್‌ ನೋಟಿಸ್‌’ ಜಾರಿ ಮಾಡಿದ್ದಾರೆ.

ಬೆಂಗಳೂರು(ನ.05): ಕರ್ನಾಟಕ ಪ್ರಿಮೀಯರ್‌ ಲೀಗ್‌ (ಕೆಪಿಎಲ್‌) ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ದೆಹಲಿ ಮೂಲದ ಇಬ್ಬರು ಪ್ರಮುಖ ಬುಕ್ಕಿಗಳ ಬಂಧನಕ್ಕೆ ‘ಲುಕ್‌ಔಟ್‌ ನೋಟಿಸ್‌’ ಜಾರಿ ಮಾಡಿದ್ದಾರೆ.

ಸಿಸಿಬಿ ಪೊಲೀಸರು ಆರೋಪಿಗಳ ಬೆನ್ನು ಬೀಳುತ್ತಿದ್ದಂತೆ ದೆಹಲಿ ಮೂಲದ ಬುಕ್ಕಿಗಳಾದ ಜತ್ತಿನ್‌ ಹಾಗೂ ಸಯ್ಯಾಂ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿಗಳನ್ನು ಬಂಧಿಸಿ ಕರೆತರಲು ಪ್ರಯತ್ನ ನಡೆಸಲಾಗಿದೆ. ಆರೋಪಿಗಳು ಕೆಪಿಎಲ್‌ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಐಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ನಲ್ಲೂ ಭಾಗಿಯಾಗಿರುವ ಶಂಕೆ ಇದೆ. ಸಯ್ಯಾಂ ಅಂತಾರಾಷ್ಟ್ರೀಯ ಆಟಗಾರರ ಜತೆ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಶಾಂತಿವನ ಅಸ್ತ್ರ

ಬುಕ್ಕಿಗಳ ಬಂಧನಕ್ಕಾಗಿ ಸಿಸಿಬಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ವಿಮಾನ ನಿಲ್ದಾಣಗಳಿಗೆ ಆರೋಪಿಗಳ ಮಾಹಿತಿಯನ್ನು ರವಾನಿಸಿದ್ದು, ಅವರ ಬಗ್ಗೆ ವಿಷಯ ತಿಳಿದು ಬಂದರೆ, ಮಾಹಿತಿ ರವಾನಿಸುವಂತೆ ಮನವಿ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಪಿಎಲ್‌ನ ಎಂಟನೇ ಆವೃತ್ತಿಯಲ್ಲಿ ಬೆಟ್ಟಿಂಗ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌ ನಡೆಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ತಂಡದ ಮಾಲಿಕ ಅಶ್ಪಾಕ್‌ ಅಲಿ, ಬಳ್ಳಾರಿ ಟಸ್ಕರ್ಸ್‌ ತಂಡದ ಡ್ರಮ್ಮರ್‌ ಭವೇಶ್‌ ಹಾಗೂ ಬೆಂಗಳೂರು ಬ್ಲಾಸ್ಟರ್‌ ತಂಡದ ಬೌಲಿಂಗ್‌ ಕೋಚ್‌ ವಿನು ಪ್ರಸಾದ್‌ ಮತ್ತು ಬ್ಯಾಟ್ಸಮನ್‌ ವಿಶ್ವನಾಥನ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಸುಮ್ಮನಹಳ್ಳಿ ಮೇಲ್ಸೇತುವೆ ಗುಂಡಿ ಪರಿಶೀಲನೆಗೆ ಡ್ರೋನ್‌

click me!