ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗಿಗಳನ್ನು ಹುಡುಕಿ ಉದ್ಯೋಗ: ಡಿಕೆಶಿ ಘೋಷಣೆ

By Govindaraj SFirst Published Jul 12, 2022, 5:00 AM IST
Highlights

ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರನ್ನು ಹುಡುಕಿ, ಅವರಿಗೆ ಉದ್ಯೋಗ ಸೃಷ್ಟಿಸುವ ಬಗ್ಗೆ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯದ ಪ್ರತಿ ಮನೆ-ಮನೆಗೂ ಹೋಗಿ ನಿರುದ್ಯೋಗಿ ಯುವಕರ ಸಮೀಕ್ಷೆ ನಡೆಸಿ ಅವರ ನಿರೀಕ್ಷೆಗಳನ್ನು ಅರಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು (ಜು.12): ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರನ್ನು ಹುಡುಕಿ, ಅವರಿಗೆ ಉದ್ಯೋಗ ಸೃಷ್ಟಿಸುವ ಬಗ್ಗೆ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯದ ಪ್ರತಿ ಮನೆ-ಮನೆಗೂ ಹೋಗಿ ನಿರುದ್ಯೋಗಿ ಯುವಕರ ಸಮೀಕ್ಷೆ ನಡೆಸಿ ಅವರ ನಿರೀಕ್ಷೆಗಳನ್ನು ಅರಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ರಾಜ್ಯ ಯುವ ಕಾಂಗ್ರೆಸ್‌ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಯುವ ಧ್ವನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ನರೇಂದ್ರ ಮೋದಿ ಸರ್ಕಾರ ಉದ್ಯೋಗಿಗಳನ್ನೂ ನಿರುದ್ಯೋಗಿಗಳನ್ನಾಗಿಸಿ ಬೀದಿಗೆ ತಳ್ಳಿದೆ. ಆದರೆ, ನಾವು ನಿರುದ್ಯೋಗ ವಿಚಾರವಾಗಿ ಬಿಜೆಪಿ ಟೀಕಿಸಲು ಸೀಮಿತರಾಗುವುದಿಲ್ಲ. ನಿರುದ್ಯೋಗಿ ಯುವಕರಿಗೆ ಸಾಧ್ಯವಾದಷ್ಟುಉದ್ಯೋಗ ಕಲ್ಪಿಸಲು ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕಾಗಿ ರಾಜ್ಯದಲ್ಲಿ ಎಷ್ಟುಮಂದಿ ವಿದ್ಯಾವಂತ ಯುವಕರಿದ್ದಾರೆ. ಅದರಲ್ಲಿ ಎಷ್ಟು ಮಂದಿ ಉದ್ಯೋಗಿ ಹಾಗೂ ನಿರುದೋಗಿಗಳಿದ್ದಾರೆ ಎಂಬ ಕುರಿತು ಮಾಹಿತಿ ಕಲೆ ಹಾಕಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

Latest Videos

Karnataka Politics: ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಹೊಸ ಸೂತ್ರ

‘ಜನಸಂಖ್ಯೆ ಹೆಚ್ಚುತ್ತಿದ್ದಂತೆ ಉದ್ಯೋಗಗಳ ಅಗತ್ಯತೆಯೂ ಹೆಚ್ಚಿದೆ. ದೇಶದಲ್ಲಿ 18 ವರ್ಷದಿಂದ 40 ವರ್ಷದ ವಯೋಮಾನದವರು ಶೇ.47 ರಷ್ಟುಜನ ಇದ್ದಾರೆ. ಹೀಗಾಗಿ ನಿರುದ್ಯೋಗಿ ಯುವಕರ ಪರವಾಗಿ ಕಾಂಗ್ರೆಸ್‌ ಪಕ್ಷದ ಮುಂದಿನ ಚಿಂತನೆ ಹೇಗಿರಬೇಕು? ಅವರು ಏನನ್ನು ನಿರೀಕ್ಷಿಸುತ್ತಿದ್ದಾರೆ? ಕೊರೋನಾ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರು ಯಾರು? ಎಷ್ಟುಮಂದಿ ನಿರುದ್ಯೋಗಿಗಳಿದ್ದಾರೆ? ಎಂಬುದನ್ನು ಅರಿಯಬೇಕು’ ಎಂದು ಸೂಚಿಸಿದರು.

ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ನಾಗೇಶ್‌ ಎಡವಟ್ಟುಗಳು ಒಂದೋ, ಎರಡೋ?: ಸಿದ್ದು

ಆನ್‌ಲೈನ್‌, ಆಫ್‌ಲೈನ್‌ ಸಮೀಕ್ಷೆ: ‘ಮುಂದೆ ನಾವು ಚುನಾವಣೆಗೆ ಹೋಗುವಾಗ ಯುವಕರಿಗೆ ಯಾವ ಭರವಸೆ ನೀಡಬೇಕು? ಪ್ರಣಾಳಿಕೆಯಲ್ಲಿ ಏನನ್ನು ಹೇಳಬೇಕು ಎಂಬುದನ್ನು ನಿರ್ಧರಿಸಲು ಸಮೀಕ್ಷೆಯಿಂದ ಅನುಕೂಲವಾಗಲಿದೆ. ಹೀಗಾಗಿ ಪಕ್ಷ ನಿಮಗೆ ಅಗತ್ಯ ನೆರವು ನೀಡಲಿದ್ದು ಮನೆ ಮನೆಗೂ ಹೋಗಿ ಆಫ್‌ಲೈನ್‌ ಅಥವಾ ಆನ್‌ಲೈನ್‌ ಸಮೀಕ್ಷೆ ಮಾಡಬೇಕು. ಆನ್‌ಲೈನ್‌ ಸಮೀಕ್ಷೆಗೆ ಆ್ಯಪ್‌ ಕೂಡ ಸಿದ್ಧಪಡಿಸಲಾಗಿದೆ. ಆ ಮೂಲಕ ಯುವಕರು ಏನನ್ನು ಬಯಸುತ್ತಿದ್ದಾರೆ ಎಂಬ ಅಭಿಪ್ರಾಯ ಸಂಗ್ರಹಿಸಬೇಕು. ಈ ರೀತಿ ಮಾಡುವುದರಿಂದ ಪಕ್ಷಕ್ಕೆ ಯಾರು ಸ್ಪಂದಿಸುತ್ತಾರೆ, ಯಾರು ಸ್ಪಂದಿಸುವುದಿಲ್ಲ ಎಂಬುದು ತಿಳಿಯುತ್ತದೆ’ ಎಂದರು. ಇದೇ ವೇಳೆ, ಬಿಜೆಪಿಯ ಭ್ರಷ್ಟಾಚಾರ ಹಾಗೂ ಹಗರಣಗಳ ವಿರುದ್ಧ ಹೋರಾಡುವಂತೆ ಕರೆ ನೀಡಿದರು.

click me!