Vijayapura: ಶಾಲಾ ಪಠ್ಯದಲ್ಲಿ ಇಂಚಗೇರಿ ಮಠದ ಇತಿಹಾಸ ಸೇರಿಸಲು ಒತ್ತಾಯ!

By Govindaraj S  |  First Published Jul 12, 2022, 12:11 AM IST

ಪಠ್ಯ ಪರಿಷ್ಕಣೆ ವಿಚಾರ ನಿಮಗೆಲ್ಲ ಗೊತ್ತೆ ಇದೆ. ಹಲವಾರು ವಿಷಯಗಳಿಂದಾಗಿ ಪಠ್ಯ ಪರಿಷ್ಕರಣೆ ವಿಚಾರ ವಿವಾದದ ಗೂಡಾಗಿತ್ತು. ಆದ್ರೀಗ ಭಾರತ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವ ಆಚರಿಸಲಾಗ್ತಿದೆ.


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜು.12): ಪಠ್ಯ ಪರಿಷ್ಕಣೆ ವಿಚಾರ ನಿಮಗೆಲ್ಲ ಗೊತ್ತೆ ಇದೆ. ಹಲವಾರು ವಿಷಯಗಳಿಂದಾಗಿ ಪಠ್ಯ ಪರಿಷ್ಕರಣೆ ವಿಚಾರ ವಿವಾದದ ಗೂಡಾಗಿತ್ತು. ಆದ್ರೀಗ ಭಾರತ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವ ಆಚರಿಸಲಾಗ್ತಿದೆ. ಇಂಥ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ಭಕ್ತರೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸರ್ಕಾರದ ನಿರ್ಲಕ್ಷದಿಂದಾಗಿ ಎಲೆ ಮರೆಕಾಯಿಯಂತೆ ಉಳಿದಿರುವ ಇಂಚಗೇರಿ ಮಠದ ಕ್ರಾಂತಿಯೋಗಿ ಮಹಾದೇವರ ಜೀವನ ಚರಿತ್ರೆಯನ್ನ ಶಾಲಾ ಪಠ್ಯದಲ್ಲಿ ಅಳವಡಿಸುವಂತೆ ಭಕ್ತರು ಆಗ್ರಹಿಸುತ್ತಿದ್ದಾರೆ.

Latest Videos

undefined

ಪಠ್ಯಪುಸಕ್ತದಲ್ಲಿ ಮಹಾದೇವರ ಚರಿತ್ರೆ ಅಳವಡಿಸಿ: ಸ್ವಾತಂತ್ರ್ಯಕ್ಕಾಗಿ ಬಂದೂಕು ಕಾರ್ಖಾನೆಯನ್ನೆ ಸ್ಥಾಪಿಸಿ, ಸಾವಿರಾರು ಭಕ್ತರ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಇಂಚಗೇರಿ ಮಠದ ಮಾಧವಾನಂದ ಶ್ರೀಗಳ ಚರಿತ್ರೆಯನ್ನ ಪಠ್ಯದಲ್ಲಿ ಅಳವಡಿಸುವಂತೆ ಒತ್ತಾಯ ಕೇಳಿ ಬರ್ತಿದೆ. ಗೋವಾ ವಿಮೋಚನೆಗಾಗಿ ಪಣಜಿ ಪೋರ್ಚುಗೀಜರ ಕಚೇರಿ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದರು. ಕರ್ನಾಟಕ ಏಕೀಕರಣ, ಮೈಸೂರು ಕರ್ನಾಟಕವಾಗಬೇಕೆಂದು ಉಪವಾಸ ಸತ್ಯಾಗ್ರಹ ಸೇರಿದಂತೆ ರಜಾರಕರ ಹಾವಳಿ ತಡೆಯಲು ಮಹಾದೇವರು ಹೋರಾಡಿದ್ದರು. ಇಂಥ ಮಹಾತ್ಮರ ಹೋರಾಟದ ಜೀವನವನ್ನ ಶಾಲಾ ಮಕ್ಕಳಿಗೆ ಭೋದಿಸಬೇಕು ಅನ್ನೋದು ಇಂಚಗೇರಿ ಮಠದ 2ಕೋಟಿ ಭಕ್ತರ ಆಶಯವಾಗಿದೆ. ಜೊತೆಗೆ ವಿಜಯಪುರ-ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಸೇರಿದಂತೆ ಉತ್ತರ ಕರ್ನಾಟಕದಲ್ಲಿರೋ ದೇಶಭಕ್ತರು ಮಹಾದೇವರ ಚರಿತ್ರೆಯನ್ನ ಶಾಲಾ ಪಠ್ಯದಲ್ಲಿ ಅಳವಡಿಸುವಂತೆ ಧ್ವನಿ ಎತ್ತಿದ್ದಾರೆ.

Vijayapura: ಮಳೆಗಾಗಿ ಗೋರಿಯಲ್ಲಿರೋ ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು!

ಇಂಚಗೇರಿ ಮಠದ ಇತಿಹಾಸ ಪಠ್ಯದಲ್ಲಿ ಸೇರಿಸಲು ಶಾಸಕ ಯತ್ನಾಳ್‌ ಆಗ್ರಹ: ಇಂಚಗೇರಿ ಮಠದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನ ಶಾಲಾ ಪಠ್ಯ-ಪುಸ್ತಕದಲ್ಲಿ ಅಳವಡಿಸುವಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಆಗ್ರಹಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದ ಇತಿಹಾಸವನ್ನ ಶಾಲಾ ಮಕ್ಕಳು ಓದಬೇಕು. ನಾನು ಕೂಡ ಶಿಕ್ಷಣ ಸಚಿವರಿಗೆ ಇಂಚಗೇರಿ ಮಠದ ಇತಿಹಾಸವನ್ನ ಪಠ್ಯದಲ್ಲಿ ಸೇರಿಸುವಂತೆ ಮನವಿ ಮಾಡ್ತೇನೆ ಎಂದರು. ಸಾಕಷ್ಟು ಹೋರಾಟಗಾರರು ಈಗಲು ಎಲೆಮರೆ ಕಾಯಿಯಂತೆ ಉಳಿದಿದ್ದಾರೆ. ಅಂತವರನ್ನ ಗುರುತಿಸುವ ಕೆಲಸ ಸರ್ಕಾರ ಮಾಡಬೇಕು ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಇಂಚಗೇರಿ ಮಠದ ಪಾತ್ರ: ಸ್ವಾತಂತ್ರ ಹೋರಾಟದಲ್ಲಿ ತನ್ನ ಪಾಲ್ಗೊಂಡ ರಾಷ್ಟ್ರದ ಬೆರಳೆಣಿಕೆ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠವು ಒಂದು. ತಮ್ಮ ಮಠದ ಸಾವಿರಾರು ಭಕ್ತರನ್ನ ಸ್ವಾತಂತ್ರ ಹೋರಾಟದಲ್ಲಿ ಧುಮುಕಿದ ಹೆಗ್ಗಳಿಕೆ ಇದೇ ಮಠದ ಮಠಾಧೀಶರಾಗಿದ್ದ ಮಾಧವಾನಂದ ಪ್ರಭುಜಿಗಳಿಗೆ ಸಲ್ಲುತ್ತೆ. 1935ರ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಾಧವಾನಂದ ಪ್ರಭುಜಿಗಳು ತಮ್ಮೊಂದಿಗೆ 20 ಸಾವಿರಕ್ಕೂ ಅಧಿಕ ಭಕ್ತರನ್ನ ಹೋರಾಟದಲ್ಲಿ ಮುಕಿಸಿದ್ದರು. ವಾಣಿಜ್ಯ ನಗರಿ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಜನಿಸಿದ ಮಾಧವಾನಂದರು ತಮ್ಮ 22ನೇ ವಯಸ್ಸಿನಲ್ಲೆ ಸ್ವಾತಂತ್ರ ಹೋರಾಟಲ್ಲಿ ಪಾಲ್ಗೊಂಡರು. ಚಲೇ ಜಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ, ಗೋವಾ ವಿಮೋಚನೆ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮಾಧವಾನಂದ ಪ್ರಭುಜಿಗಳ ತಮ್ಮ ಮಠದ ಭಕ್ತರೊಂದಿಗೆ ಪಾಲ್ಗೊಂಡಿದ್ದರು.

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮುರುಗೋಡು ಮಹಾದೇವಪ್ಪ: ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳನ್ನ ಮುರುಗೋಡು ಮಹಾದೇವಪ್ಪ, ಹುಬ್ಬಳ್ಳಿ ಮಹಾದೇವಪ್ಪ ಅಂತಲು ಕರೆಯುತ್ತಿದ್ದರು. 1929ರ ಎಳೆಯ ಪ್ರಾಯದಲ್ಲೆ ಮಹಾದೇವರು ಹೇಗಾದರು ಮಾಡಿ ಬ್ರಿಟಿಷರ ಹುಟ್ಟಡಗಿಸಲು ನಿರ್ಧರಿಸಿ ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನ ಕಿತ್ತಹಾಕಿ ಠಾಣೆಗಳನ್ನ ಧ್ವಂಸಗೊಳಿಸಿದ್ದರು. ಇನ್ನು ಬ್ರಿಟಿಷರ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನ ದೋಚಿದ್ದು ಆ ಸಮಯದಲ್ಲಿ ಬಾರಿ ಸಾಹಸ ಪ್ರಕರಣವಾಗಿತ್ತು. ಇದರ ಫಲವಾಗಿ 27 ಬಾರಿ ಜೈಲು ವಾಸ ಅನುಭವಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಬಳಿಕ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಪಿಂಚಣಿ ನೀಡಿತ್ತಿತ್ತು. ಹಾಗೇಯೆ ಸರ್ಕಾರದ ಅಧಿಕಾರಿಗಳು ಮಾಧವಾನಂದ ಪ್ರಭುಜಿಗಳ ಬಳಿ ಬಂದು ನಿಮಗು ಪಿಂಚಣಿ ಕೊಡುತ್ತೇವೆ ಎಂದು ಮಾಹಿತಿ ಸಂಗ್ರಹಣೆ ಆಗಮಿಸಿದ್ದರು. ಆದ್ರೆ ಈ ವೇಳೆ ಮಹಾದೇವರು ನಾನು ತನ್ನ ತಾಸ್ವಾತಂತ್ರ್ಯ ಹೋರಾಟ ಬಳಿಕ ಪಿಂಚಣಿ ತಿರಸ್ಕರಿಸಿದ ಮಹಾದೇವರು:ಯಿ ಭಾರತಾಂಬೆಯನ್ನ ಬ್ರೀಟಿಷರ ಕಪಿಮುಷ್ಟಿ ಬಿಡಿಸೋದಕ್ಕೆ ಹೋರಾಡಿದ್ದೇನೆ ಹೊರತಾಗಿ ಪಿಂಚಣಿಗಾಗಿ ಅಲ್ಲ ಎಂದಿದ್ದರಂತೆ. ಹೀಗೆನ್ನುವ ಮೂಲಕ ಸರ್ಕಾರದ ಪಿಂಚಣಿಯನ್ನ ತಿರಸ್ಕರಿಸಿದ್ದರು. ಮಹಾದೇವರು ಪಿಂಚಣಿ ತಿಸ್ಕರಿಸಿದ್ದನ್ನ ಕಂಡ ಅವರ ಜೊತೆಗಿದ್ದ 2 ಸಾವಿರಕ್ಕು ಅಧಿಕ ಹೋರಾಟಗಾರರು ಗುರುವಿನ ಹಾದಿಯಲ್ಲೆ ತಾವು ಪಿಂಚಣಿ ತಿಸ್ಕರಿಸಿದ್ದರು ಅನ್ನೋದು ಗಮನಾರ್ಹ ಸಂಗತಿ.

ವಿದೇಶಿ ಪತ್ರಿಕೆಗಳಲ್ಲು ಮಹಾದೇವರ ಹೋರಾಟ ದಾಖಲು: ಸ್ವಾತಂತ್ರ ನಂತರ ಮಠಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವ್ರ ಮೊಮ್ಮಗ ಅರುಣ ಗಾಂಧಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಹಾಗೂ ಮಠದ ಪಾತ್ರದ ಬಗ್ಗೆ ವಿದೇಶಗಳಲ್ಲಿ ಅತ್ಯಧಿಕ ಪ್ರಸಾರ ಉಳ್ಳ 'ದಿ ಇಂಪ್ರಿಂಟ್' ಇಂಗ್ಲಿಷ್ ಪತ್ರಿಕೆಯಲ್ಲಿ ಬರೆದಿದ್ದರು. ಇದನ್ನ ಓದಿನ ಅದೇಷ್ಟೋ ವಿದೇಶಿಗರು ಕೂಡ ಸಧ್ಯ ಮಠದ ಭಕ್ತರಾಗಿದ್ದಾರೆ.

ಸುಭಾಷ್‌ಚಂದ್ರ ಭೋಸ್‌ರೊಂದಿಗೆ ಗುಪ್ತ ಸಭೆ ನಡೆಸಿದ್ದ ಶ್ರೀಗಳು: ಮಹಾತ್ಮಾ ಗಾಂಧೀಜಿ, ಸುಭಾಷ್‌ಚಂದ್ರ ಭೋಸ್‌ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಳಿ ಇರುವ ಗಿರೀಶ ಆಶ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಮಾಧವಾನಂದ ಪ್ರಭುಜಿಗಳು ನಡೆಸಿದ ಗುಪ್ತ ಸಭೆಯಲ್ಲಿ ಸುಬಾಷಚಂದ್ರ ಬೋಸ್ ಪಾಲ್ಗೊಂಡಿದ್ದರು ಅನ್ನೋದು ಗಮನಾರ್ಹ.

ವಿಜಯಪುರ, ಬಾಗಲಕೋಟೆಯಲ್ಲಿ ಭೂಕಂಪನ ಅನುಭವ: ಆತಂಕದಲ್ಲಿ ಜನತೆ

ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿದ್ದ ಬ್ರಿಟಿಷ್‌ ಸರ್ಕಾರ: ಸ್ವಾತಂತ್ರ ಹೋರಾಟ ಉಗ್ರ ಸ್ವರೂಪ ಪಡೆದಾಗ ಮಾಧವಾನಂದರು ತಮ್ಮ ಮಠದ ಭಕ್ತರೊಂದಿಗೆ ಜೈಲು ವಾಸ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಮಾಧವಾನಂದರ ಉಗ್ರ ಸ್ವರೂಪದ ಹೋರಾಟ ಕಂಡ ಬ್ರಿಟಿಷ್ ಸರ್ಕಾರ ಅವರ  ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿತ್ತು.

25 ಸಾವಿರಕ್ಕು ಅಧಿಕ ಅಂತರ್‌ ಜಾತಿ-ಧರ್ಮಿಯ ವಿವಾಹ: ಸ್ವಾತಂತ್ರ್ಯದ ಬಳಿಕ ಇಂಚಗೇರಿ ಸಾಂಪ್ರದಾಯದ ಅಭ್ಯುದಯಕ್ಕಾಗಿ ದುಡಿದ ಮಹಾದೇವರು, 25 ಸಾವಿರಕ್ಕು ಅಧಿಕ ಅಂತರ್‌ ಜಾತಿಯ ಹಾಗೂ ಅಂತರ್‌ ಧರ್ಮಿಯ ಮದುವೆ ಮಾಡಿಸಿದ್ದರು. ಸ್ವತಃ ತಮ್ಮ ಮೊಮ್ಮಗಳು ಕಾಳಮ್ಮ ಮುರಗೋಡರನ್ನ ಮುಸ್ಲಿಂ ಸಮುದಾಯದ ಮಹಾಲಿಂಗಪೂರ ಮೂಲದ ಆದಂ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದರು. ಇಂದಿಗೂ ಈ ಜೋಡಿ ಮಠದಲ್ಲಿ ವಾಸವಿದ್ದಾರೆ. ಇಂದಿಗೂ ಇಂಚಗೇರಿ ಮಠದಲ್ಲಿ ಅಂತರ್‌ ಜಾತಿ-ಧರ್ಮಿಯ ಮದುವೆಗಳು ನಡೆಯುತ್ತಿವೆ.

click me!