ರೆಮಿಡಿಸಿವಿರ್‌ಗೆ ಹಾಹಾಕಾರ: ಬಿಜೆಪಿ ಸಂಸದರಿಗೆ ಹೇಗೆ ಸಿಕ್ತು ಈ ಔಷಧಿ, ಡಿಕೆಶಿ ಫುಲ್‌ ಗರಂ

By Suvarna News  |  First Published May 1, 2021, 1:02 PM IST

ಲಸಿಕೆ ಪಡೆಯಲು ಎಲ್ಲರೂ ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಬೇಕು| ಹಳ್ಳಿಯ ಜನ ಅದೇಗೆ ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡೋಕೆ ಸಾಧ್ಯ?| ಕೂಡಲೇ ಎಲ್ಲರಿಗೂ ಇಂಜೆಕ್ಷನ್ ಸಿಗುವಂತಾಗಬೇಕು| ಪ್ರತಿ ಹಳ್ಳಿಯಲ್ಲಿ ಪೊಲಿಯೋ ಹನಿ ಹಾಕುವ ಅಭಿಯಾನದ ತರಹ ಕೊರೋನಾ ಲಸಿಕೆ ಸಿಗುವಂತಾಗಬೇಕು: ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒತ್ತಾಯ| 


ಬೆಂಗಳೂರು(ಮೇ.01): ರಾಜ್ಯಾದ್ಯಂತ ರೆಮಿಡಿಸಿವಿರ್ ಔಷಧಿಗೆ ಭಾರೀ ಬೇಡಿಕೆಯಿದೆ. ಎಲ್ಲೂ ಸಿಗುತ್ತಿಲ್ಲ. ಆದರೆ ಬಿಜೆಪಿ ನಾಯಕರಿಗೆ ಡಬ್ಬದಲ್ಲಿ ತುಂಬಿಕೊಡುತ್ತಿದ್ದಾರೆ. ರೆಮಿಡಿಸಿವಿರ್ ಇಂಜೆಕ್ಷನ್ ಬ್ಲಾಕ್‌ನಲ್ಲಿ ಮಾರಲಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಅಂತ ಗೊತ್ತಾಗುತ್ತಿಲ್ಲ, ಸಂಸದರೊಬ್ಬರು ರೆಮಿಡಿಸಿವಿರ್ ಬಾಕ್ಸ್ ತೆಗೆದುಕೊಂಡು ಹೋಗ್ತಾರೆ, ಅವರಿಗೆ ತೆಗೆದುಕೊಂಡು ಹೋಗಲು ಹೇಗೆ ಅವಕಾಶ ಕೊಟ್ರಿ? ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪನವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ರೆಮಿಡಿಷಿವರ್‌ಗಳನ್ನು ರಾತ್ರೋರಾತ್ರಿ ನೀಡಿದ ವಿಚಾರದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಯಾವ ಕಾನೂನಿನಲ್ಲಿ ಈ ರೀತಿಯಲ್ಲಿ ಕೊಡಲು ಅವಕಾಶ ಇದೆ?. ಬಿಜೆಪಿ ನಾಯಕರಿಗೆ ರೆಮಿಡಿಷಿವರ್ ಸಿಗುತ್ತದೆ. ಉಳಿದವರಿಗೆ ಏಕೆ ಸಿಗುತ್ತಿಲ್ಲ?. ಈ ರೀತಿಯಲ್ಲಿ ಸಂಸದರಿಗೆ ಕಾನೂನು ಬಾಹಿರವಾಗಿ ರೆಮಿಡಿಷಿವರ್ ಕೊಟ್ಟಿರುವ ಬಗ್ಗೆ ಕ್ರಮ ಆಗಬೇಕು ಎಂದು ಹೇಳುವ ಮೂಲಕ ಸಂಸದರ ನಡೆಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 

Latest Videos

undefined

"

ಸ್ವತಃ ತಾವೇ ವಿಮಾನದಲ್ಲಿ ರೆಮ್‌ಡೆಸಿವಿರ್‌ ತಂದು ಕೊಟ್ಟ ಸಂಸದ ಜಾದವ್

ಲಸಿಕೆ ಪಡೆಯಲು ಎಲ್ಲರೂ ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಬೇಕು ಅಂತ ಹೇಳುತ್ತಾರೆ. ಹಳ್ಳಿಯ ಜನ ಅದೇಗೆ ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡೋಕೆ ಸಾಧ್ಯ?. ಕೂಡಲೇ ಎಲ್ಲರಿಗೂ ಇಂಜೆಕ್ಷನ್ ಸಿಗುವಂತಾಗಬೇಕು. ಪ್ರತಿ ಹಳ್ಳಿಯಲ್ಲಿ ಪೊಲಿಯೋ ಹನಿ ಹಾಕುವ ಅಭಿಯಾನದ ತರಹ ಕೊರೋನಾ ಲಸಿಕೆ ಸಿಗುವಂತಾಗಬೇಕು ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒತ್ತಾಯಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!