ಮಹಾಮಾರಿ ಕೊರೊನಾಗೆ ಬೆಂಗಳೂರು ಟಾರ್ಗೆಟ್..!| ಬೆಂಗಳೂರೊಂದ್ರಲ್ಲೇ ಇಲ್ಲೀವರೆಗೆ ಕೋವಿಡ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 6378| ದಿನದಿಂದ ದಿನಕ್ಕೆ ಬೆಂಗಳೂರಿನ ಮರಣ ಪ್ರಮಾಣ ಏರಿಕೆ
ಬೆಂಗಳೂರು(ಮೇ.01): ದೇಶದಲ್ಲಿ ಕೊರೋನಾ ಹಾವಳಿ ಮಿತಿ ಮೀರಿದೆ. ಕರ್ನಾಟಕದಲ್ಲೂ ಕೊರೋನಾ ಎರಡನೇ ಅಲೆ ಭಾರೀ ಆತಂಕ ಸೃಷ್ಟಿಸಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಹಾವಳಿಗೆ ಅಪಾರ ಸಾವು- ನೋವು ಸಂಭವಿಸಸುತ್ತಿದೆ. ಈವರೆಗೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಈ ಮಹಾಮಾರಿಗೆ 6378 ಮಂದಿ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ಬೆಂಗಳೂರಿನ ಮರಣ ಪ್ರಮಾಣ ಏರಿಕೆಯಾಗುತ್ತಿದ್ದು, ಈ ಬಾರಿ ಮಧ್ಯ ವಯಸ್ಕರೇ ಇದರ ಟಾರ್ಗೆಟ್ ಆಗಿದ್ದಾರೆ.
ಹೌದು ಮೊದಲನೇ ಅಲೆ ದಾಳಿ ಇಟ್ಟ ಸಂದರ್ಭದಲ್ಲಿ ಹಿರಿಯ ನಾಗರೀಕರನ್ನೇ ಹೆಚ್ಚು ಬಲಿ ಪಡೆದಿದ್ದ ಕೊರೋನಾ, ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರನ್ನು ಬಲಿ ಪಡೆಯುತ್ತಿದೆ. ಇನ್ನು ಕೋವಿಡ್‌ಗೆ ಬಲಿಯಾದವರಲ್ಲಿ ಪುರುಷರೇ ಹೆಚ್ಚು ಬಲಿಯಾಗಿದ್ದಾರೆ.
undefined
ಹಾಗಾದ್ರೆ ಕೊರೋನಾ ಆರಂಭವಾದಾಗಿನಿಂದ ಇಲ್ಲೀವರೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಸಾವಿನ ಚಿತ್ರಣ ಹೇಗಿದೆ.? ಇದು ಯಾವ ವಯೋಮಾನದವರನ್ನು ಹೆಚ್ಚು ಟಾರ್ಗೆಟ್ ಮಾಡಿದೆ ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona