ಮೈಸೂರು: ಡಿ.ಕೆ. ಶಿವಕುಮಾರ್‌ ಮಾವ ತಿಮ್ಮಯ್ಯ ನಿಧನ

Kannadaprabha News   | Asianet News
Published : Oct 27, 2021, 08:49 AM ISTUpdated : Oct 27, 2021, 09:22 AM IST
ಮೈಸೂರು: ಡಿ.ಕೆ. ಶಿವಕುಮಾರ್‌ ಮಾವ ತಿಮ್ಮಯ್ಯ ನಿಧನ

ಸಾರಾಂಶ

*  ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ತಿಮ್ಮಯ್ಯ *  ಇಂದು ಬೆಳಗ್ಗೆ 11.30ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಅವರ ತೋಟದಲ್ಲಿ ಅಂತ್ಯಕ್ರಿಯೆ *  ತಿಮ್ಮಯ್ಯ ಅವರ ನಿಧನಕ್ಕೆ ಗಣ್ಯರಿಂದ ಸಂತಾಪ    

ಮೈಸೂರು(ಅ.27):  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಅವರ ಮಾವ ತಿಮ್ಮಯ್ಯ ಉ. ಪಾಪಣ್ಣ(84) ಅನಾರೋಗ್ಯದಿಂದ ಬೆಂಗಳೂರಿನ(Bengaluru) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೈಸೂರಿನ(Mysuru) ಇಟ್ಟಿಗೆಗೂಡಿನ ನಿವಾಸಿಯಾದ ತಿಮ್ಮಯ್ಯ ಅವರನ್ನು ಅನಾರೋಗ್ಯ(Illness) ಹಿನ್ನಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ(Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ(Treatment) ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ ನಿಧನರಾದರು(Death).

ಮಾಜಿ ಸಚಿವ ವೀರುಪಾಕ್ಷಪ್ಪ ಅಗಡಿ ನಿಧನ

ಮೈಸೂರಿನ ಶ್ರೀ ರಾಜ ಸೋಪ್‌ ನೆಟ್‌ ಕಾರ್ಖಾನೆಯ (SR Brand) ಮಾಲೀಕರಾಗಿದ್ದ ತಿಮ್ಮಯ್ಯ ಅವರಿಗೆ ಪತ್ನಿ ಲಕ್ಷ್ಮೀ, ಪುತ್ರ ಸತ್ಯನಾರಾಯಣ್‌, ಪುತ್ರಿಯರಾದ ಉಷಾ ಡಿ.ಕೆ. ಶಿವಕುಮಾರ್‌, ಸುಮ ರಂಗನಾಥ್‌ ಇದ್ದಾರೆ.
ಪಾರ್ಥೀವ ಶರೀರವನ್ನು(Deadbody) ಮಂಗಳವಾರ ರಾತ್ರಿ ಮೈಸೂರಿಗೆ ತರಲಾಗಿದ್ದು, ಬುಧವಾರ ಬೆಳಗ್ಗೆ 11 ಗಂಟೆಯವರೆಗೂ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಮೃತರ ಅಂತ್ಯಕ್ರಿಯೆ(Funeral) ಬೆಳಗ್ಗೆ 11.30ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಅವರ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಂತಾಪ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮಾವ ತಿಮ್ಮಯ್ಯ ಅವರು ನಿಧನರಾಗಿರುವುದಕ್ಕೆ ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌ ಮತ್ತು ಪದಾಧಿಕಾರಿಗಳು, ಎಸ್‌.ಎಂ. ಕೃಷ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ವಿಕ್ರಾಂತ್‌ ಪಿ. ದೇವೇಗೌಡ, ಕಾಂಗ್ರೆಸ್‌ ಮುಖಂಡ ಶ್ರೀನಾಥ್‌ ಬಾಬು ಮೊದಲಾದವರು ಸಂತಾಪವನ್ನು(Condolences) ಸೂಚಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್